Basavaraj Horatti :ಹೊರಟ್ಟಿ ವಿಚಾರದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಎಡವಿತಾ ಬಿಜೆಪಿ ಹೈಕಮಾಂಡ್​​

ಬೆಂಗಳೂರು : Basavaraj Horatti : ಅನೇಕ ವರ್ಷಗಳಿಂದ ಜೆಡಿಎಸ್​ ಪಕ್ಷದಲ್ಲಿದ್ದ ಬಸವರಾಜ ಹೊರಟ್ಟಿ ಕೆಲವೇ ತಿಂಗಳುಗಳ ಹಿಂದೆ ಬಿಜೆಪಿಗೆ ಶಿಫ್ಟ್​ ಆಗಿದ್ದರು. ಬಿಜೆಪಿಯಲ್ಲಿ ತನಗೆ ಉನ್ನತ ಸ್ಥಾನ ಸಿಗಬಹುದು ಎಂಬ ನಂಬಿಕೆಯ ಮೇಲೆ ಬಸವರಾಜ ಹೊರಟ್ಟಿ ಈ ನಿರ್ಧಾರ ಕೈಗೊಂಡಿದ್ದರು. ಆದರೆ ಬಸವರಾಜ ಹೊರಟ್ಟಿಯನ್ನು ಬಿಜೆಪಿ ಹೈಕಮಾಂಡ್​ ನಾಯಕರು ನಡು ನೀರಿನಲ್ಲಿ ಕೈ ಬಿಟ್ಟಿದ್ದಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಜೆಡಿಎಸ್​ ಪಕ್ಷದಿಂದ ತಮ್ಮ ಪಕ್ಷಕ್ಕೆ ಕರೆದುಕೊಂಡು ಬಂದು ಬಿಜೆಪಿ ಬಸವರಾಜ ಹೊರಟ್ಟಿಗೆ ಮೋಸ ಮಾಡಿತಾ ಎಂಬ ಪ್ರಶ್ನೆ ಹರಿದಾಡುತ್ತಿದೆ.

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಪಾಲಿಗೆ ಬಿಜೆಪಿ ಹೈಕಮಾಂಡ್​ ಬಿಸಿತುಪ್ಪವಾಗಿ ಪರಿಣಮಿಸಿದೆ ಎನ್ನಲಾಗ್ತಿದೆ. ಪಕ್ಷದಲ್ಲಿ ಆಂತರಿಕ ಅಸಮಾಧಾನದಿಂದ ಬಸವರಾಜ ಹೊರಟ್ಟಿಗೆ ಬಿಜೆಪಿ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆಗಳು ಸುಳ್ಳಾಗಿವೆ ಎಂದು ಹೇಳಲಾಗ್ತಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಗೆ ಬಿಜೆಪಿ ದ್ರೋಹ ಬಗೆಯಿತಾ ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ .


ಎಂಟು ಬಾರಿ ಪರಿಷತ್​ ಪ್ರವೇಶ ಮಾಡುವ ಮೂಲಕ ವರ್ಲ್ಡ್​​ ಬುಕ್​ ಆಫ್​ ರೆಕಾರ್ಡ್​ ಮಾಡಿದ್ದ ಬಸವರಾಜ ಹೊರಟ್ಟಿ ಬಿಜೆಪಿಯಲ್ಲಿ ತಮ್ಮ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲ ಆಗಬಹುದು ಎಂಬ ನಿರೀಕ್ಷೆಯನ್ನಿಟ್ಟದ್ದರು. ಇದೇ ಕಾರಣಕ್ಕೆ ಆಘಾತಕಾರಿ ಎಂಬಂತೆ ಜೆಡಿಎಸ್​​ ನಿಂದ ದೂರಾಗಿ ಬಿಜೆಪಿ ಸೇರಿದ್ದರು. ಆದರೆ ಇಂತಹ ಹಿರಿಯ ನಾಯಕನಿಗೆ ಸಭಾಪತಿ ಸ್ಥಾನ ನೀಡದೇ ಅನ್ಯಾಯವೆಸಗಲಾಗಿದೆ.


ಬಸವರಾಜ ಹೊರಟ್ಟಿ ಜೆಡಿಎಸ್​ನಲ್ಲಿದ್ದ ಸಂದರ್ಭದಲ್ಲಿ ಸಭಾಪತಿ ಸ್ಥಾನ ನಿಮಗೇ ನೀಡುತ್ತೇವೆಂದು ಹೇಳಿ ಬಿಜೆಪಿ ಹೈಕಮಾಂಡ್​ ಬಸವರಾಜ ಹೊರಟ್ಟಿಗೆ ಮಾತು ನೀಡಿದ್ದರು. ಇದೇ ಮಾತನ್ನು ನಂಬಿ ಬಸವರಾಜ ಹೊರಟ್ಟಿ ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿ ಸೇರಿದ ಬಳಿಕವೂ ಪಶ್ಚಿಮ ಶಿಕ್ಷಕರ ಪರಿಷತ್​ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದರು. ಹಿಂದೆ ಎಂದೂ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವನ್ನು ನೋಡೇ ಇರಲಿಲ್ಲ. ಪಕ್ಷ ಎಂಬುದನ್ನು ನೋಡದೇ ಬಸವರಾಜ ಹೊರಟ್ಟಿ ವರ್ಚಸ್ಸನ್ನು ಗಮನದಲ್ಲಿಟ್ಟುಕೊಂಡು ಹೊರಟ್ಟಿಯನ್ನು ಇಲ್ಲಿನ ಮತದಾರರು ಗೆಲ್ಲಿಸಿದ್ದರು.


ಚುನಾವಣೆ ಫಲಿತಾಂಶ ಬಂದ ಮಾರನೆ ದಿನವೇ ಸಭಾಪತಿ ಸ್ಥಾನ ನಿಮಗೆ ನೀಡುತ್ತೇವೆಂದು ಬಿಜೆಪಿ ಹೈಕಮಾಂಡ್​​ ಬಸವರಾಜ ಹೊರಟ್ಟಿಗೆ ಮಾತು ನೀಡಿತ್ತು. ಇದೇ ಕಂಡಿಷನ್​​ ಮೇಲೆ ತೆನೆ ಇಳಿಸಿ ಬಸವರಾಜ ಹೊರಟ್ಟಿ ಕಮಲ ಹಿಡಿದಿದ್ದರು. ಆದರೆ ಈಗ ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ ಬಸವರಾಜ ಹೊರಟ್ಟಿಯನ್ನು ಬಿಜೆಪಿ ಸಭಾಪತಿಯನ್ನಾಗಿ ಆಯ್ಕೆ ಮಾಡಿಲ್ಲ. ಸದ್ಯ ಹಂಗಾಮಿ ಸಭಾಪತಿಯನ್ನೇ ಇಟ್ಟುಕೊಂಡು ಸದನವನ್ನು ನಡೆಸಲಾಗ್ತಿದೆ. ಬಸವರಾಜ ಹೊರಟ್ಟಿಗೆ ಸಭಾಪತಿ ಮಾಡುತ್ತೇವೆಂದು ಮಾತುಕೊಟ್ಟು ಈಗ ಬಿಜೆಪಿ ಮೀನಮೇಷ ಎಣಿಸುತ್ತಿರೋದು ಯಾಕೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಇದನ್ನು ಓದಿ : lover commits suicide :ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಪ್ರಿಯಕರ : ಮನನೊಂದ ಪ್ರಿಯತಮೆ ವಿಷಸೇವಿಸಿ ಆತ್ಮಹತ್ಯೆ

ಇದನ್ನೂ ಓದಿ : Team India New Jersey : ಟಿ20 ವಿಶ್ವಕಪ್: ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ; ಹೊಸ ಲುಕ್ ಸೂಪರ್

BJP high command did not keep the word given to Basavaraj Horatti

Comments are closed.