JP Nadda Warning : ರಾಜ್ಯ ಬಿಜೆಪಿಗೆ ಹೈಕಮಾಂಡ್ ಟೆನ್ಸನ್ : ನಳೀನ್‌ ಕುಮಾರ್ ಕಟೀಲ್ ಗೆ ಖಡಕ್ ಸೂಚನೆ ಕೊಟ್ಟ ನಡ್ಡಾ

ಬೆಂಗಳೂರು : ಪಂಚ ರಾಜ್ಯದಲ್ಲಿ ಸಿಕ್ಕಿರೋ ಚುನಾವಣಾ ಯಶಸ್ಸಿನಿಂದ ಉತ್ಸಾಹದಲ್ಲಿರೋ ಬಿಜೆಪಿ ಹೈಕಮಾಂಡ್ (JP Nadda Warning) ಕರ್ನಾಟಕವನ್ನು ತನ್ನ ಮುಂದಿನ ಗುರಿಯಾಗಿಸಿ ಕೊಂಡಿದೆ. ಹೀಗಾಗಿ ಹೈಕಮಾಂಡ್ ಚಿತ್ತ ಸಂಪೂರ್ಣ ಕರ್ನಾಟಕದತ್ತ ಹರಿದಿದ್ದು, ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿಗೆ ಚುರುಕು ಮುಟ್ಟಿಸಲು ಸಿದ್ಧವಾಗಿದೆ. ಕೇವಲ ಸಚಿವ ಸ್ಥಾನವನ್ನು ಅಧಿಕಾರ ಚಲಾಯಿಸಲು ಬಳಸುತ್ತಿರುವ ಸಚಿವರುಗಳಿಗೆ ಗೇಟ್ ಪಾಸ್ ನೀಡಿ ಉತ್ಸಾಹಿ ಹೊಸ ಮುಖ ಗಳಿಗೆ ಅವಕಾಶ ಸಿಗಲಿದ್ದು, ಈ ವಿಚಾರವನ್ನು ಸ್ವತಃ ರಾಜ್ಯಾಧ್ಯಕ್ಷರಿಗೂ ಬಿಜೆಪಿ ಹೈಕಮಾಂಡ್ ಸ್ಪಷ್ಟವಾಗಿ ಸೂಚಿಸಿದ್ದು ರಾಜ್ಯದ ಹಲವು ಸಚಿವರ ಎದೆಯಲ್ಲಿ ನಡುಕ ಆರಂಭವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಬಿಜೆಪಿ ಹೈಕಮಾಂಡ್ ಸಖತ್ ಖಡಕ್ ಎಚ್ಚರಿಕೆಗಳನ್ನು ರವಾನಿಸಿದೆ. ಅದರಲ್ಲೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಟೀಲ್ ಜೊತೆ ಮಾತುಕತೆ ನಡೆಸಿದ್ದು, ಅಸಮರ್ಥ,ಅಪ್ರಯೋಜಕ ಸಚಿವರುಗಳಿಗೆ ಕೋಕ್ ನೀಡಿ ಹೊಸಬರಿಗೆ ಅವಕಾಶ ನೀಡಲು ಸಿದ್ಧತೆ ನಡೆಸಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಏ 16, 17 ವಿಜಯಗರದಲ್ಲಿ ನಡೆಯಲಿರೋ ಬಿಜೆಪಿ ಕಾರ್ಯಕಾರಿಣಿಗೆ ಜೆ.ಪಿ.ಅಡ್ಡ ಅವರನ್ನು ಅಹ್ವಾನಿಸಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೆರಳಿದ್ದು ಈ ಭೇಟಿ ವೇಳೆ ಹಲವು ಸೂಚನೆ ನೀಡಿದ್ದಾರೆ.

ಸಂಪುಟ ಪುನಾರಚನೆ ಸುಳಿವು ನೀಡಿರೋ ನಡ್ಡಾ ಸಚಿವರಷ್ಟೇ ಅಲ್ಲ ಸಿಎಂ ಪರ್ಪಾರ್ಮೆನ್ಸ್ ಕೂಡ ಮಾನಿಟರ್ ಮಾಡುತ್ತಿದ್ದೇವೆ. ಸರ್ಕಾರ ನಡೆಸೋದಷ್ಟೆ ಅಲ್ಲ ಸಿಎಂ ಹಾಗೂ ಸಚಿವರು ಪಕ್ಷ ಸಂಘಟನೆಯಲ್ಲೂ ತೊಡಗಿಸಿಕೊಳ್ಳಬೇಕು.ಕರ್ನಾಟಕದಲ್ಲಿ ಈ ಕೆಲಸ ವೇಗವಾಗಿ ಆಗ್ತಿಲ್ಲ.ಪಕ್ಷ ಸಂಘಟನೆಯಲ್ಲಿ ಸಚಿವರು ಹಾಗೂ ಸಿಎಂ ಬೊಮ್ಮಾಯಿ ಇನ್ನೂ ಹೆಚ್ಚಿನ ಆಸಕ್ತಿ ತೋರಬೇಕೆಂದು ನಡ್ಡಾ ನೇರ ಸೂಚನೆ ನೀಡಿದ್ದಾರಂತೆ. ಮಾತ್ರವಲ್ಲದೇ ಅಸಮರ್ಥ, ಅದಕ್ಷ, ಸೋಮಾರಿ ಸಚಿವರ ಕೈ ಬಿಡೋ ಸುಳಿವು ನೀಡಿರೋ ನಡ್ಡಾ, ಮುಂದಿನ ದಿನಗಳಲ್ಲಿ ಹೈಕಮಾಂಡ್ ರಾಜ್ಯ ಬಿಜೆಪಿಯ ಎಲ್ಲ ಚಟುವಟಿಕೆಗಳನ್ನು ಗಮನಿಸಲಿದೆ ಹಾಗೂ ಇದರ ಆಧಾರದ ಮೇಲೆಯೇ ಮುಂದಿನ ಚುನಾವಣೆಯ ಟಿಕೇಟ್ ಸೇರಿದಂತೆ ಎಲ್ಲ ಚಟುವಟಿಕೆಗಳು ನಿರ್ಧಾರವಾಗಲಿದೆ ಎಂದು ಸ್ಪಷ್ಟಪಡಿಸಿದೆ ಎನ್ನಲಾಗಿದೆ.

ನಿಗಮ, ಮಂಡಳಿ ಹಳಬರನ್ನ ಕಿತ್ತಾಕಿ ಸಂಪೂರ್ಣ ಹೊಸಬರಿಗೆ ಅವಕಾಶ ಮಾಡಿಕೊಡಿ, ಬಿಎಸ್ವೈ ಕಾಲದಲ್ಲಿ ನೇಮಕವಾದವರನ್ನ ಕೈ ಬಿಡಿ, ಬಿ.ಎಸ್.ಯಡಿಯೂರಪ್ಪ ಕೊಡೋ ಹೊಸ ಪಟ್ಟಿಯನ್ನು ಪರಿಗಣಿಸಿ ಪಕ್ಷ ಸಂಘಟಕರು, ನಿಷ್ಟಾವಂತರನ್ನ ನಿಗಮ, ಮಂಡಳಿಗೆ ನೇಮಕ ಮಾಡುವಂತೆ ಸೂಚನೆ ನೀಡಿದ್ದಾರೆ. ಯುಗಾದಿ ಒಳಗೆ ನೇಮಕ ಮಾಡುವಂತೆ ಕಟೀಲ್ ಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ : Mekedatu Project : ತಮಿಳುನಾಡು ವಿರುದ್ಧ ಕರ್ನಾಟಕ ಗರಂ : ಮೇಕೆದಾಟು ಜಾರಿ ಸಿದ್ಧ ಎಂದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : Amit Shah : ಮತ್ತೆ ಜೀವ ಪಡೆದುಕೊಂಡ ಸಂಪುಟ ಸರ್ಕಸ್ : ಎಪ್ರಿಲ್‌ 1ರಂದು ಕರ್ನಾಟಕಕ್ಕೆ ಅಮಿತ್ ಶಾ

( BJP High Command JP Nadda Warning Naleen Kumar Kateel )

Comments are closed.