ks eshwarappa : ಇನ್ನೆರಡು ದಿನಗಳಲ್ಲಿ ಸಚಿವ ಸ್ಥಾನಕ್ಕೆ ಕೆ.ಎಸ್​ ಈಶ್ವರಪ್ಪ ರಾಜೀನಾಮೆ ಸಂಭವ

ಬೆಂಗಳೂರು :ks eshwarappa : ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣವು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಂಗ್ರೆಸ್​ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು ಮಾತ್ರವಲ್ಲದೇ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ನಾಳೆ 24 ಗಂಟೆಗಳ ಕಾಲ ಅಹೋರಾತ್ರಿ ಧರಣಿ ನಡೆಸಲಿದೆ.


ಸಂತೋಷ್​ ಪಾಟೀಲ್​ ಆತ್ಮಹತ್ಯೆ ಮಾಡಿಕೊಂಡು ಎರಡು ದಿನಗಳು ಕಳೆದರೂ ಸಹ ಸಚಿವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳದ ಬಿಜೆಪಿ ನಡೆ ವಿರುದ್ಧ ಕಾಂಗ್ರೆಸ್​ ಕೆಂಡಾಮಂಡಲವಾಗಿದೆ. ಚುನಾವಣೆ ಬೇರೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್​ ಸಂತೋಷ್​ ಪಾಟೀಲ್​​ ಆತ್ಮಹತ್ಯೆ ಪ್ರಕರಣವನ್ನು ಬಹುಮುಖ್ಯ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡು ಬಿಜೆಪಿ ಮುಖಕ್ಕೆ ಭ್ರಷ್ಟಾಚಾರ ಮಸಿ ಬಳಿಯುವ ಕಾರ್ಯವನ್ನು ಮಾಡುತ್ತಿದೆ. ಭ್ರಷ್ಟಾಚಾರದ ಆರೋಪದಿಂದ ಮುಜುಗರಕ್ಕೆ ಒಳಗಾಗಿರುವ ರಾಜ್ಯ ಬಿಜೆಪಿಯನ್ನು ಈ ಅಪವಾದದಿಂದ ಪಾರು ಮಾಡಲು ಹೈಕಮಾಂಡ್​ ಮಧ್ಯ ಪ್ರವೇಶಿಸಿದ ಎನ್ನಲಾಗಿದೆ. ಇನ್ನೆರಡು ದಿನಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್​ ಈಶ್ವರಪ್ಪಗೆ ಸೂಚನೆ ನೀಡಲಿದೆ ಎನ್ನಲಾಗಿದೆ.

ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಕೆ.ಎಸ್​ ಈಶ್ವರಪ್ಪ ಹೇಳುತ್ತಲೇ ಇದ್ದಾರೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಯಾವುದೇ ರಿಸ್ಕ್​​ ತೆಗೆದುಕೊಳ್ಳಲು ಬಿಜೆಪಿ ತಯಾರಿಲ್ಲ. ಹೀಗಾಗಿ ಈ ಸಂಬಂಧ ಬಿ.ಎಲ್​ ಸಂತೋಷ್​​ರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ವರದಿಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿನ್ನಡೆ ಈ ಪ್ರಕರಣ ಕಾರಣವಾಗಬಾರದು ಎಂಬುದು ಹೈಕಮಾಂಡ್​ ಚಿಂತನೆಯಾಗಿದೆ.


ಹೀಗಾಗಿ ಸಂಪೂರ್ಣ ವರದಿಯನ್ನು ಪರಾಮರ್ಶಿಸಿರುವ ಜೆ.ಪಿ ನಡ್ಡಾ ಕೆ.ಎಸ್​ ಈಶ್ವರಪ್ಪ ಬಳಿಯಲ್ಲಿ ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ಕೇಳುವ ಸಾಧ್ಯತೆಯಿದೆ ಎನ್ನಲಾಗಿದೆ. ಈಶ್ವರಪ್ಪ ರಾಜೀನಾಮೆ ನೀಡಿದಲ್ಲಿ ಕಾಂಗ್ರೆಸ್​ ಹೋರಾಟ ತಣ್ಣಗಾಗಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಇದನ್ನು ಓದಿ :KS Eshwarappa : ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್​ ಬಿಗಿಪಟ್ಟು:ನಾಳೆ ಅಹೋರಾತ್ರಿ ಧರಣಿ

ಇದನ್ನೂ ಓದಿ : KS Eshwarappa vs KJ George : ನನ್ನ ಹಾಗೇ ಈಶ್ವರಪ್ಪನೂ ರಾಜೀನಾಮೆ ನೀಡಲಿ : ಮಾಜಿ ಸಚಿವ ಕೆ.ಜೆ.ಜಾರ್ಜ್ ಆಗ್ರಹ

bjp high command may have asked ks eshwarappa to resig in the next two days

Comments are closed.