Kanthara : ಕರಾವಳಿಯ ಕತೆ ಹೇಳೋಕೆ ಬರ್ತಿದೆ ಕಾಂತಾರ : ರಿಲೀಸ್ ಆಯ್ತು ಟೀಸರ್

ಕಳೆದ ಎರಡು ವರ್ಷದಿಂದ ಸ್ಯಾಂಡಲ್ ವುಡ್ ನಲ್ಲಿ ಒಂದಾದ‌ ಮೇಲೊಂದರಂತೆ ಬಿಗ್ ಬಜೆಟ್ ಸಿನಿಮಾದ ಮೂಲಕ ಸಪ್ರೈಸ್ ನೀಡುತ್ತಲೇ ಬಂದಿರೋ ಹೊಂಬಾಳೆ ಫಿಲ್ಷ್ಮಂ ಈಗ ಬಹುನೀರಿಕ್ಷಿತ ಕೆಜಿಎಫ್-2 ಸಿನಿಮಾ ರಿಲೀಸ್ ಜೊತೆಗೂ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಸಪ್ರೈಸ್ ನೀಡಿದೆ. ಹೌದು, ಕೆಜಿಎಫ್-2 ಸಿನಿಮಾದ ಜೊತೆಗೆ ರಿಶಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ (Kanthara) ಸಿನಿಮಾದ ಟೀಸರ್ ರಿಲೀಸ್ ಮಾಡಿದೆ.

ಇನ್ನು ರಿಲೀಸ್ ಆಗ್ತಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿರೋ ಕಾಂತಾರ ಸಿನಿಮಾದ ಟೀಸರ್ ಬಿಡುಗಡೆಯಾದ ಒಂದೇ ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ವಿಜಯ್ ಕಿರಂಗದೂರು ನಿರ್ಮಾಣದ ಬಿಗ್ ಬಜೆಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್-೨ ಸಿನಿಮಾ ರಿಲೀಸ್ ವೇಳೆಯೇ ವಿಜಯ್ ಕಿರಂಗದೂರು ನಿರ್ಮಿಸುತ್ತಿರುವ ಕಾಂತಾರದ ಜೊತೆಗೆ ರಾಘವೇಂದ್ರ್ ಸ್ಟೋರ್ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದೆ.

ಈ ಟೀಸರ್ ಗಳು ಕೆಜಿಎಫ್-2 ಸಿನಿಮಾ ಪ್ರದರ್ಶನದ ಇಂಟರವೆಲ್ ಸೇರಿದಂತೆ ಉಳಿದ ಭಾಗಗಳಲ್ಲಿ ತೆರೆಕಾಣಲಿದ್ದು ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಿದೆ‌. ಕಾಂತಾರಾ ಸಿನಿಮಾ ಶ್ರೀಮಂತ ತುಳುನಾಡಿನ ಭಾಷೆ, ಸ್ವಾರಸ್ಯ ಹಾಗೂ ಕರಾವಳಿಯ ಸೊಗಡನ್ನೇ ಸಿನಿಮಾದಲ್ಲಿ ಹೊಂದಿದೆ. ಕರಾವಳಿಯ ಸೊಗಡಿ ಕಾಂತಾರದ ಟೀಸರ್ ನಲ್ಲೇ ಸ್ಪಷ್ಟವಾಗಿದೆ.

ಕಾಂತಾರ ಎಂದರೇ ಶಬ್ದಶಃ ಅರ್ಥ ನಿಗೂಢವಾದ ಅರಣ್ಯ ಎಂದು. ಹೆಸರಿಗೆ ತಕ್ಕಂತೆ ಈ ಸಿನಿಮಾದಲ್ಲಿ ಒಂದು ನಿಗೂಢವಾದ ಅರಣ್ಯದ ಕತೆಯೂ ಇದೆಯಂತೆ. ಜೊತೆಗೆ ಅಭಿವೃದ್ಧಿ ಯ ಹೆಸರಿನಲ್ಲಿ ನಡೆಯುತ್ತಿರುವ ಮಾನವ ಮತ್ತು ಪರಿಸರದ ನಡುವಿನ ಸಂಘರ್ಷವನ್ನು ಬಿಚ್ಚಿಡುತ್ತಿದೆ. ಕಾಂತಾರ ಸಿನಿಮಾದಲ್ಲಿ ತುಳುನಾಡು ಹಾಗೂ ಕರಾವಳಿಯ ಜಾನಪದ‌ಕಲೆ ಕಂಬಳವನ್ನು ತೋರಿಸಲಾಗಿದ್ದು, ಸಿನಿಮಾವನ್ನು ಕರಾವಳಿ ವಾತಾವರಣದಲ್ಲೇ ಚಿತ್ರಿಸಲಾಗಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಕಾಂತಾರ ಕತೆಯನ್ನು ರಿಶಬ್ ಶೆಟ್ಟಿ ಸಿದ್ಧ ಪಡಿಸಿದ್ದು ಬಳಿಕ ಈ ಕತೆಯನ್ನು ರಿಶಬ್ ಶೆಟ್ಟಿ ವಿಜಯ್ ಕಿರಂಗದೂರಿಗೆ ಹೇಳಿದ್ದರಂತೆ. ಕತೆ ಕೇಳಿ ಇಂಪ್ರೆಸ್ ಆಗಿದ್ದು ತಮ್ಮ ಬ್ಯಾನರ್ ನಲ್ಲೇ ಈ ಸಿನಿಮಾ ತೆರೆಗೆ ತರಲು ಸಿದ್ಧವಾಗಿದ್ದಾರೆ. ಕಾಂತಾರ ಸಿನಿಮಾದ ತಾರಾಗಣದಲ್ಲಿ ರಿಶಬ್ ಶೆಟ್ಟಿ, ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದಾರೆ. ಇದು ಹೊಂಬಾಳೆ ಫಿಲ್ಷ್ಂನ 11 ನೇ ಸಿನಿಮಾ ಆಗಿದ್ದು, ಟೀಸರ್ ಸಿನಿಮಾದ ಮೇಲಿನ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ : ಚಿಕನ್ ಅಂಗಡಿಯಲ್ಲೂ ನಟಿಯ ಅಭಿಮಾನ : ಸನ್ನಿ ಲಿಯೋನ್ ಫ್ಯಾನ್ಸ್ ಗೆ ‌ಸ್ಪೆಶಲ್ ಆಫರ್

ಇದನ್ನೂ ಓದಿ : KGF Chapter 2 Piracy Leak: ಕೆಜಿಎಫ್​ 2ಗೆ ಪೈರಸಿ ಶಾಕ್​: ಮೊದಲ ದಿನವೇ ಲೀಕ್​ ಆದ ಸಿನೆಮಾ

Kanthara Kannada movie Teaser Release

Comments are closed.