BJP MLAs Suspended : ಅತಿರೇಕದ ವರ್ತನೆ, ಬಿಜೆಪಿಯ 10‌ ಶಾಸಕರು ಅಮಾನತ್ತು

ಬೆಂಗಳೂರು : BJP MLAs Suspended : ಕರ್ನಾಟಕದಲ್ಲಿ ಕೆಲವು ದಿನಗಳಿಂದ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ವಿಧಾನಸಭೆ ಕಲಾಪದ ವೇಳೆಯಲ್ಲಿ ಅತಿರೇಕ ವರ್ತನೆ ತೋರಿದ ಹತ್ತು ಮಂದಿ ಬಿಜೆಪಿ ಶಾಸಕರನ್ನು ಇಂದು ಅಮಾನತ್ತುಗೊಳಿಸಲಾಗಿದೆ. ಸದ್ಯ ನಡೆಯುತ್ತಿರುವ ಅಧಿವೇಶನ ಮುಗಿಯುವರೆಗೂ ಈ ಹತ್ತು ಮಂದಿ ಶಾಕರನ್ನು ಅಮಾನತ್ತು ಮಾಡಲಾಗುವುದು ಎಂದು ಸ್ಪೀಕರ್‌ ಯುಟಿ ಖಾದರ್‌ ಆದೇಶ ಹೊರಡಿಸಿದ್ದಾರೆ. ಅರವಿಂದ್‌ ಬೆಲ್ಲದ್‌, ದೀರಜ್‌ ಮುನಿರಾಜು, ಡಾ.ಅಶ್ವತ್ಥನಾರಾಯಣ, ವೇದವ್ಯಾಸ ಕಾಮತ್‌, ಯಶಪಾಲ್‌ ಸುವರ್ಣ್‌, ಸುನೀಲ್‌ ಕುಮಾರ್‌, ಆರ್‌.ಅಶೋಕ್‌, ಉಮಾನಾಥ್‌ ಕೋಟ್ಯಾನ್‌, ಅರಗ ಜ್ಮಾನೇಂದ್ರ ಹಾಗೂ ಭರತ್‌ ಶೆಟ್ಟಿ ಬಿಜೆಪಿ ಶಾಸಕರನ್ನು ಸದ್ಯ ನಡೆಯುತ್ತಿರುವ ಅಧಿವೇಶನದಿಂದ ಅಮಾನತುಗೊಳಿಸಿದ್ದಾರೆ.

ಮುಂದಿನ ಎರಡು ದಿನಗಳ ಕಾಲ ವಿಧಾನಸಭೆ ಅಧಿವೇಶನ ಬಾಕಿ ಉಳಿದಿದ್ದು, ಸದನದಲ್ಲಿ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ ಎಂದು ಸ್ಪೀಕರ್‌ ಯುಟಿ ಖಾದರ್‌ ತಿಳಿಸಿದ್ದಾರೆ. ಇದಾದ ಬಳಿಕ ಸದನದ ಕಲಾಪವನ್ನು 10 ನಿಮಿಷಗಳ ಮುಂದೂಡಿಕೆ ಮಾಡಲಾಗಿದೆ.

ಇದನ್ನೂ ಓದಿ : Malpe Beach : ಮೀನುಗಾರಿಕಾ ಬೋಟ್ ಮುಳುಗಡೆ : ನಾಲ್ವರು ಮೀನುಗಾರರ ರಕ್ಷಣೆ

ಇದನ್ನೂ ಓದಿ : Gruha Lakshmi Yojana : ಗೃಹಲಕ್ಷ್ಮೀ ಯೋಜನೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ

ಸ್ಪೀಕರ್‌ ಖಾದರ್‌ ಅಮಾನತುಗೊಳಿಸಿದ ಬಿಜೆಪಿ ಶಾಸಕರನ್ನು ಹೊರಗಡೆ ಕಳುಹಿಸಲು ಮಾರ್ಷಲ್ಸ್‌ ಒಳ ಬಂದಿರುತ್ತಾರೆ. ಅಷ್ಟರಲ್ಲಿ ಬಿಜೆಪಿಯ ಇತರ ಸಾಸಕರು ಅಮಾನತುಗೊಂಡ ಶಾಸಕರಿಗೆ ಹೊರ ಕಳಿಸದಂತೆ ತಡೆಗೋಡೆಯಾಗಿ ನಿಂತರು. ಹೀಗಾಗಿ ಅಮಾನತುಗೊಂಡ ಶಾಸಕರನ್ನು ಬಲವಂತವಾಗಿ ಹೊರಗೆ ಕಳುಹಿಸದಂತೆ ತಡೆಯಲು ಬಿಜೆಪಿ ಇತರೆ ಶಾಸಕರು ಪ್ರಯತ್ನಿಸಿದರು. ಆದರೆ ಶಾಕರನ್ನು ಬಲವಂತದಿಂದ ಹೊರದಬುವಲ್ಲಿ ಮಾರ್ಷಲ್‌ಗಳು ಯಶಸ್ವಿಯಾಗಿದ್ದಾರೆ.

BJP MLAs Suspended : Outrageous behavior, 10 BJP MLAs suspended

Comments are closed.