Pallavi CT Ravi : ಸಕ್ರೀಯ ರಾಜಕಾರಣಕ್ಕೆ ಸಿ.ಟಿ.ರವಿ ಪತ್ನಿ : ವಿಧಾನಸಭೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸ್ತಾರಾ ಪಲ್ಲವಿ

ಚಿಕ್ಕಮಗಳೂರು : ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರ ಪತ್ನಿ ಸಕ್ರೀಯ ರಾಜಕಾರಣಕ್ಕೆ ಧುಮುಕಿದ್ದಾರೆ. ಈಗಾಗಲೇ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದು, ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಭಾವಿ ಮುಖಂಡ ಸಗೀರ್‌ ಅಹಮದ್‌ ಅವರಿಗೆ ಸೋಲಿನ ರುಚಿಯನ್ನು ತೋರಿಸುವ ಮೂಲಕ ಕಮಲವನ್ನು ಅರಳಿಸಿದ್ದ ಸಿ.ಟಿ.ರವಿ ಮತ್ತೆ ಸೋಲನ್ನೇ ಕಂಡಿಲ್ಲ. ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ವಕ್ತಾರರಾಗಿ ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಸಿ.ಟಿ.ರವಿ ರಾಜ್ಯ ರಾಜಕಾರಣದಿಂದ ಇದೀಗ ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್‌ ಆಗಿದ್ದಾರೆ. ಈಗಾಗಲೇ ತಮಿಳುನಾಡು ಚುನಾವಣಾ ಉಸ್ತುವಾರಿಯನ್ನಾಗಿಯೂ ನೇಮಕ ಮಾಡಲಾಗಿತ್ತು. ಅಲ್ಲದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಪಕ್ಷದ ಹೈಕಮಾಂಡ್‌ ತೀರ್ಮಾನ ಕೈಗೊಂಡಿದೆ. ಹೀಗಾಗಿ ಮುಂದಿನ ಬಾರಿ ವಿಧಾನಸಭಾ ಚುನಾವಣೆಗೆ ಸಿ.ಟಿ.ರವಿ ಸ್ಪರ್ಧಿಸ್ತಾರಾ ಅನ್ನೋ ಅನುಮಾನವೂ ವ್ಯಕ್ತವಾಗಿತ್ತು.

ಒಂದೊಮ್ಮೆ ಸಿ.ಟಿ.ರವಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದೇ ಇದ್ರೆ ಯಾರನ್ನ ಕಣಕ್ಕೆ ಇಳಿಸೋದು ಅನ್ನೋ ಯೋಚನೆಯನ್ನೂ ಬಿಜೆಪಿ ಮಾಡಿತ್ತು. ಈ ನಡುವಲ್ಲೇ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ಸಿ.ಟಿ.ರವಿ ಸಕ್ರೀಯ ರಾಜಕಾರಣಕ್ಕೆ ಧುಮುಕಿರೋದು ತೀವ್ರ ಕುತೂಹಲವನ್ನು ಮೂಡಿಸಿದೆ. ಸಿ.ಟಿ.ರವಿ ಅವರು ರಾಜಕೀಯದಲ್ಲಿದ್ದರೂ ಕೂಡ ಪಲ್ಲವಿ ಅವರು ಸಕ್ರೀಯವಾಗಿ ಬಿಜೆಪಿಯಲ್ಲಿ ಯಾವುದೇ ಹುದ್ದೆಯನ್ನೂ ಹೊಂದಿರಲಿಲ್ಲ. ಇದೀಗ ಬಿಜೆಪಿ ಚಿಕ್ಕಮಗಳೂರು ನಗರ ಮಂಡಲದ ಮಹಿಳಾ ಮೋರ್ಚಾ ಉಪಾಧ್ಯಕ್ಷರಾಗಿ ಪಲ್ಲವಿ ಸಿ.ಟಿ.ರವಿ ಅವರು ನೇಮಕಗೊಂಡಿದ್ದಾರೆ.

ಇದನ್ನೂ ಓದಿ : ಬಿಎಸ್ವೈ ಪರ್ಯಾಯ ನಾಯಕತ್ವಕ್ಕೆ ಬಿಜೆಪಿ ಸಿದ್ಧತೆ : ಸದ್ದಿಲ್ಲದೇ ಸಮರಾಂಗಣಕ್ಕೆ ಸಿ.ಟಿ.ರವಿ

ರಾಜಕೀಯದ ಅನುಭವವನ್ನು ಹೊಂದಿರುವ ಪಲ್ಲವಿ ಸಿ.ಟಿ ರವಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ಮೋದಿ ಸರಕಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ಟ್ವೀಟ್‌ಗಳಿಗೂ ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನೊಂದೆಡೆ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರು, ನಾಯಕರ ಜೊತೆಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸಿ.ಟಿ.ರವಿ ಅವರು ಪಲ್ಲವಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ಸಿದ್ದತೆ ಮಾಡಿಕೊಂಡಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ.

ಇದನ್ನೂ ಓದಿ : ಕರ್ನಾಟಕಕ್ಕೂ ಜನಸಂಖ್ಯಾ ನಿಯಂತ್ರಣ ಕಾನೂನು ಬೇಕು…! ಸಿ.ಟಿ.ರವಿ ಟ್ವೀಟ್…!!

ಒಂದೊಮ್ಮೆ ಸಿ.ಟಿ.ರವಿ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದ್ರೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿಯೂ ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಬಿಜೆಪಿ ಪಲ್ಲವಿ ಸಿ.ಟಿ.ರವಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೋದಕ್ಕೆ ಅವಕಾಶ ಕಲ್ಪಿಸುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.

Comments are closed.