ದೆಹಲಿ : bs yeddiyurappa : ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ಆಯ್ಕೆಯಾದ ಬಳಿಕ ಬಿ.ಎಸ್ ಯಡಿಯೂರಪ್ಪ ಇದೇ ಮೊದಲ ಬಾರಿಗೆ ದಿಢೀರ್ ದೆಹಲಿಗೆ ತೆರಳಿದ್ದಾರೆ. ದೆಹಲಿ ತಲುಪಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ರಾಜ್ಯ ರಾಜಕಾರಣದ ಮಹತ್ವದ ಚರ್ಚೆಯನ್ನು ವರಿಷ್ಠರ ಜೊತೆ ನಡೆಸಲಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಬಿ.ಎಸ್ ಯಡಿಯೂರಪ್ಪ ದೆಹಲಿ ತಲುಪಿದ್ದಾರೆ. ದೆಹಲಿ ತಲುಪುತ್ತಿದ್ದಂತೆಯೇ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಯಡಿಯೂರಪ್ಪ ರಾಜ್ಯದಲ್ಲಿ ಶೀಘ್ರದಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯಾಗಲಿದೆ ಎಂಬ ಮಹತ್ವದ ಸುಳಿವನ್ನು ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಇಂದು ರಾತ್ರಿ 8 ಗಂಟೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ,ಪಿ ನಡ್ಡಾರನ್ನು ಭೇಟಿಯಾಗಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯನ್ನು ಶೀಘ್ರದಲ್ಲಿಯೇ ಭೇಟಿಯಾಗಲಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲು ಸಮಯಾವಕಾಶವನ್ನು ಕೇಳಿದ್ದೇನೆ. ಮೂವರನ್ನು ಇಂದು ಭೇಟಿ ಮಾಡುತ್ತೇನೆ. ನನಗೆ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ ಬಳಿಕ ಪಕ್ಷದ ವರಿಷ್ಠರಿಗೆ ಧನ್ಯವಾದ ಸಲ್ಲಿಸುವುದು ನನ್ನ ಕರ್ತವ್ಯ. ನಾವು ಅದಕ್ಕಾಗಿಯೇ ಇಲ್ಲಿಗೆ ಆಗಮಿಸಿದ್ದೇನೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆಯೂ ವರಿಷ್ಠರ ಜೊತೆಯಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಂತೆ ಚರ್ಚೆಗಳು ಹೆಚ್ಚುತ್ತಿರುವ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ನಾನು ಈ ವಿಚಾರವನ್ನು ಚರ್ಚೆ ಮಾಡಬೇಕೆಂದು ದೆಹಲಿಗೆ ಆಗಮಿಸಿದ್ದೇನೆ.ಆದರೆ ಈ ಬಗ್ಗೆ ವರಿಷ್ಠರು ಕೇಳಿದರೆ ಚರ್ಚೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ.
ಇದನ್ನು ಓದಿ : DK Shivakumar : ಮತ್ತೊಮ್ಮೆ ಸಿಎಂ ಸ್ಥಾನದ ಅಭಿಲಾಷೆ ಹೊರಹಾಕಿದ ಡಿಕೆಶಿ : ಒಕ್ಕಲಿಗರ ಬಳಿ ಆಶೀರ್ವಾದ ಬೇಡಿದ ಕನಕಪುರ ಬಂಡೆ
ಇದನ್ನೂ ಓದಿ : Rahul Gandhi is actually a blessing for BJP : ‘ರಾಹುಲ್ ಬಿಜೆಪಿ ಪಾಲಿಗೆ ವರದಾನವಿದ್ದಂತೆ’ : ಆಸ್ಸಾಂ ಸಿಎಂ ವ್ಯಂಗ್ಯ
bs yeddiyurappa keeps state bjp chief change issue open