meghana raj : ಪತಿ ಹಾಗೂ ಪುತ್ರನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ನಟಿ ಮೇಘನಾ ರಾಜ್​​

meghana raj : ಬಹುಭಾಷಾ ನಟಿ ಮೇಘನಾ ರಾಜ್​ರ ಜೀವನದ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ. ಅತ್ಯಂತ ಕಷ್ಟದ ಘಳಿಗೆಯನ್ನೂ ಮೆಟ್ಟಿ ನಿಂತು ಮತ್ತೆ ಬಣ್ಣದ ಲೋಕಕ್ಕೆ ಕಮ್​ ಬ್ಯಾಕ್​ ಮಾಡಿರುವ ಈ ನಟಿಯ ಗಟ್ಟಿತನಕ್ಕೆ ಎಷ್ಟು ಸಲಾಂ ಹೊಡೆದರೂ ಅದು ಕಡಿಮೆಯೇ ಸರಿ. ಪ್ರೀತಿಸಿ ಮದುವೆಯಾದ ಪತಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅಗಲಿದ್ದ ವೇಳೆಯಲ್ಲಿ ಮೇಘನಾ ರಾಜ್​ ಕಣ್ಣೀರಿಟ್ಟ ಪರಿಯನ್ನು ಕಂಡು ಇಡೀ ಕರುನಾಡೇ ಮರುಗಿತ್ತು.


ಮನೆಯ ಮಗಳಿಗೆ ಇಂತಹ ಪರಿಸ್ಥಿತಿ ಬಂದಿದೆ ಎಂಬ ರೀತಿಯಲ್ಲಿ ಕರುನಾಡಿನ ಪ್ರತಿ ಮನೆಯೂ ಶೋಕವನ್ನು ಆಚರಿಸಿತ್ತು. ಇದಾದ ಬಳಿಕ ಮುದ್ದಾದ ಗಂಡು ಮಗುವಿಗೆ ಜನ್ಮವನ್ನು ನೀಡಿ, ಆತನ ಲಾಲನೆ ಪೋಷಣೆ ಜೊತೆಯಲ್ಲಿ ಕಿರುತೆರೆ ಹಾಗೂ ಬೆಳ್ಳಿ ತೆರೆ ಕಡೆಗೆ ಮೇಘನಾ ರಾಜ್​ ಅದಾಗಲೇ ಮುಖ ಮಾಡಿದ್ದಾರೆ.ಇದರ ಜೊತೆಯಲ್ಲಿ ಅವರಿಗೆ ಕ್ಯಾಲಿಫೋರ್ನಿಯಾ ದಲ್ಲಿ ನೀಡಲಾಗುವ ಪ್ರತಿಷ್ಠಿತ ಫಾಗ್​ ಹಿರೋ ಗೌರವ ಕೂಡ ಸಂದಿದ್ದು ಈ ಪ್ರಶಸ್ತಿಯನ್ನು ಸ್ವೀಕರಿಸಲು ವಿದೇಶಕ್ಕೆ ಹಾರಿದ್ದ ನಟಿ ಮೇಘನಾ ರಾಜ್​ ಹಲವು ವಿಶೇಷ ಕ್ಷಣಗಳನ್ನು ಎಂಜಾಯ್​ ಮಾಡಿದ್ದಾರೆ,


ಕ್ಯಾಲಿಫೋರ್ನಿಯಾದ ಬಳಿಕ ಅಮೆರಿಕದ ವಿವಿಧ ನಗರಗಳಿಗೆ ಭೇಟಿ ನೀಡಿರುವ ಮೇಘನಾ ರಾಜ್​ ತಮ್ಮ ವಿದೇಶಿ ಪ್ರವಾಸದ ಇಂಚಿಂಚೂ ಅಪ್​ಡೇಟ್​ಗಳನ್ನು ಇನ್​ಸ್ಟಾಗ್ರಾಂ ಮೂಲಕ ಅಭಿಮಾನಿಗಳ ಜೊತೆಯಲ್ಲಿ ಹಂಚಿಕೊಳ್ತಿದ್ದಾರೆ . ಇದರ ಜೊತೆಯಲ್ಲಿ ಇನ್ನೊಂದು ಸ್ಪೆಷಲ್​ ಫೋಟೋವನ್ನು ಮೇಘನಾ ರಾಜ್​ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ನೆಟ್ಟಿಗರ ಕಣ್ಣಂಚನ್ನು ತೇವವಾಗಿಸಿದೆ.


ವಿದೇಶದಲ್ಲಿರುವ ಮೇಘನಾ ರಾಜ್​ ತಮ್ಮ ಕೈ ಮೇಲೆ ಚಿರು ಹಾಗೂ ರಾಯನ್​ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇಂಗ್ಲೀಷ್​ನಲ್ಲಿ ಚಿರು ಹಾಗೂ ರಾಯನ್​ ಹೆಸರನ್ನು ತಮ್ಮ ಎಡಗೈ ಮೇಲೆ ಟ್ಯಾಟೂ ಹಾಕಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಇನ್​ಫಿನಿಟಿ ಟ್ಯಾಟೂ ಇರೋದನ್ನೂ ಸಹ ಕಾಣಬಹುದಾಗಿದೆ.


ಮೇಘನಾ ರಾಜ್​ ಸ್ವೀಕರಿಸಿರುವ F0G HERO ಅವಾರ್ಡ್ ಸಾಮಾನ್ಯದ್ದೇನಲ್ಲ. ಭಾರತದಲ್ಲಿ ಈ ಪ್ರಶಸ್ತಿಯನ್ನು ಆಶಾ ಪರೇಕ್, ಅಮಿತಾಬ್ ಬಚ್ಚನ್, ದೇವಾನಂದ್, ವಿನೋದ್ ಖನ್ನಾ, ಧರ್ಮೇಂದ್ರರಂತಹ ಸಿನಿಮಾ ರಂಗದ ದೊಡ್ಡ ಸಾಧಕರು ಸ್ವೀಕರಿಸಿದ್ದರು. ಇದೀಗ ಈ ಸಾಲಿಗೆ ಚಂದನವನದ ನಟಿ ಕೂಡ ಸೇರಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.

ಇದನ್ನು ಓದಿ : Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್‌ ಸರ್ಜಾ ಫಾರಿನ್ ಟ್ರಿಪ್ ಪೋಟೋ ವೈರಲ್

ಇದನ್ನೂ ಓದಿ : Alia Bhatt : ಬರೋಬ್ಬರಿ 3 ಲಕ್ಷ ರೂ. ಉಡುಗೆ ಧರಿಸಿ ಬೇಬಿಬಂಪ್​ ಪ್ರದರ್ಶಿಸಿದ ಆಲಿಯಾ ಭಟ್​

meghana raj gets chiranjeevi and raayan inked on her hand

Comments are closed.