BS Yeddyurappa – BL Santosh : ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಹುದ್ದೆ ಮೇಲೆ ಬಿಎಸ್ ಯಡಿಯೂರಪ್ಪ ಕಣ್ಣು: ಪಟ್ಟು ಬಿಡದ ಬಿಎಲ್ ಸಂತೋಷ್ !

ಬೆಂಗಳೂರು : (BS Yeddyurappa – BL Santosh) ಸೋತು ಸುಣ್ಣವಾಗಿರೋ ರಾಜ್ಯ ಬಿಜೆಪಿ ಪಾಲಿಗೆ ಸದ್ಯ ಮುಂಬರುವ ಲೋಕಸಭಾ ಚುನಾವಣೆಗಿಂತ ಹೆಚ್ಚು ಸವಾಲಾಗಿರೋದು ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಸ್ಥಾನದ ಆಯ್ಕೆ. ಈಗ ಈ ಎರಡೂ ಸ್ಥಾನಗಳ ಆಯ್ಕೆ ವಿಚಾರದಲ್ಲಿ ಬಿಎಸ್ವೈ ಹಾಗೂ ಬಿ‌.ಎಲ್.ಸಂತೋಷ್ ನಡುವೆ ಫೈಟ್ ಆರಂಭವಾಗಿದ್ದು ತಮ್ಮ ತಮ್ಮ ಆಪ್ತರ ಪರ ಬಿಎಸ್ವೈ ಹಾಗೂ ಬಿಎಲ್ ಎಸ್ ಬ್ಯಾಟಿಂಗ್ ಆರಂಭಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಕಾಂಗ್ರೆಸ್ ಪ್ರಚಂಡ ಬಹುಮತದೊಂದಿಗೆ ಅಧಿಕಾರ ಪಡೆದು ಸರಕಾರ ರಚಿಸಿದೆ. ಇನ್ನೇನು ಮುಂಗಾರು ಅಧಿವೇಶನ ಕ್ಕೆ ದಿನಗಣನೆ ನಡೆದಿದೆ. ಈ ಮಧ್ಯೆ ಸೋಲಿನ ನೋವು,ಅವಮಾನದಲ್ಲೇ ಇರೋ ಬಿಜೆಪಿ ವಿಧಾನಸಭೆಯಲ್ಲಿ ಸಿಎಂ ಸಿದ್ಧರಾಮಯ್ಯನವರನ್ನು ಎದುರಿಸಬಲ್ಲಂತ ಸಮರ್ಥ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಸರ್ಕಸ್ ನಡೆಸಿದೆ. ಶಾಸಕರಾದ ಅಶ್ವತ್ಥ ನಾರಾಯಣ್, ಆರ್.ಅಶೋಕ್, ಬಸನಗೌಡಪಾಟೀಲ್ ಯತ್ನಾಳ, ಬಸವರಾಜ್ ಬೊಮ್ಮಾಯಿ ಹೆಸರು ಮುಂಚೂಣಿಯಲ್ಲಿದ್ದರೂ ಇದುವರೆಗೂ ಸೂಕ್ತ ತೀರ್ಮಾನ ಕೈಗೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ.

ಇದರ ಮಧ್ಯೆಯೇ ಈಗ ಕಮಲ ಪಾಳಯದಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನು ನೇಮಿಸಬೇಕೆಂಬ ವಿಚಾರ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಬಿಎಸ್ವೈ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಡುವೆ ಪೈಪೋಟಿಗೆ ಕಾರಣವಾಗಿದೆ ಎನ್ನಲಾಗಿದೆ. ಬಿಎಸ್ವೈ ಮೊದಲ ಬಾರಿಗೆ ಶಾಸಕನಾಗಿರೋ ತಮ್ಮ ಪುತ್ರನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಆಪ್ತರಾದ ಆರ್.ಅಶೋಕ್ ಹಾಗೂ ಬಸವರಾಜ್ ಬೊಮ್ಮಾಯಿ ಆಯ್ಕೆಗೆ ಒಲವು ತೋರುತ್ತಿದ್ದಾರೆ.

ಆದರೆ ಸಿದ್ಧರಾಮಯ್ಯನವರ ವಾಗ್ಬಾಣವನ್ನು ಸಹಿಸಿಕೊಳ್ಳುವಂತ ಹಾಗೂ ಸಮರ್ಥವಾಗಿ ಚರ್ಚೆಯನ್ನು ಮುಂದುವರೆಸುವಂತ ನಾಯಕನ ಹುಡುಕಾಟದಲ್ಲಿರೋ ಬಿ.ಎಲ್.ಸಂತೋಷ್ ಇದಕ್ಕಾಗಿ ಡಾ.ಅಶ್ವತ್ ನಾರಾಯಣ ಹಾಗೂ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಯ್ಕೆ ಸೂಕ್ತ ಎನ್ನುತ್ತಿದ್ದಾರಂತೆ. ಹೀಗಾಗಿ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕರು ಯಾರಾಗಬೇಕೆಂಬುದೇ ಇನ್ನು ಸ್ಪಷ್ಟವಾಗಿಲ್ಲ. ಇನ್ನೇನು ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಇನ್ನೂ ಕೂಡ ಸಿದ್ಧರಾಮಯ್ಯನವರಿಗೆ ಎದುರಾಳಿ ಯಾರೆಂಬುದು ಬಿಜೆಪಿ ಪಾಳಯಕ್ಕೆ ತಿಳಿಯುತ್ತಿಲ್ಲ.

ಇದನ್ನೂ ಓದಿ : ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್‌, ಉತ್ತರ ಕನ್ನಡಕ್ಕೆ ಮಂಕಾಳ್‌ ವೈದ್ಯ : ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ

ವಿಧಾನಸಭಾ ಚುನಾವಣೆಯನ್ನು ಸಂಪೂರ್ಣವಾಗಿ ಮೋದಿ ನಾಮಬಲದಿಂದ ಎದುರಿಸಲು ಮುಂದಾಗಿದ್ದ ಕರ್ನಾಟಕ ಬಿಜೆಪಿಗೆ ಜನರು ಪಾಠ ಕಲಿಸಿದ್ದು, ಕೇವಲ‌ಮೋದಿ ಹೆಸರೊಂದರಿಂದಲೇ‌ ಸದಾ ಜನಬೆಂಬಲವನ್ನು ಗಳಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪಕ್ಷ ಸಂಘಟನೆ, ನಾಯಕತ್ವ ಎಲ್ಲವನ್ನೂ ನಿಭಾಯಿಸಬಲ್ಲ ನಾಯಕನ ಆಯ್ಕೆ ಬಿಜೆಪಿಗೆ ಅನಿವಾರ್ಯವಾಗಿದೆ. ಹೀಗಾಗಿ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಪಟ್ಟ ಏರುವವರ್ಯಾರು ಹಾಗೂ ವಿರೋಧ ಪಕ್ಷದ ಚುಕ್ಕಾಣಿ ಹಿಡಿಯುವವರ್ಯಾರು ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.

BS Yeddyurappa – BL Santosh : BS Yeddyurappa’s eye on the post of state president, opposition leader: BL Santosh is unyielding!

Comments are closed.