Sapta Sagaradaache Yello Movie : ನಟ ರಕ್ಷಿತ್‌ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್

ಸಿಂಪಲ್‌ ಆಗಿ ಒಂದು ಲವ್‌ ಸ್ಟೋರಿ ಸಿನಿಮಾ ಮೂಲಕ ಸಿಂಪಲ್‌ ಸ್ಟಾರ್ ನಟ ರಕ್ಷಿತ್‌ ಶೆಟ್ಟಿ ಕನ್ನಡ ಸಿನಿರಂಗದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಸದ್ಯ ಸಾಂಡಲ್‌ವುಡ್‌ನಲ್ಲಿ ನಟ ರಕ್ಷಿತ್‌ ಶೆಟ್ಟಿ (Sapta Sagaradaache Yello Movie) ಬಹು ಬೇಡಿಕೆಯ ನಟ ಹಾಗೂ ನಿರ್ದೇಶಕರಾಗಿ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕೆಲವು ತಿಂಗಳ ಹಿಂದೆ ಅಷ್ಟೇ ಮುಂಬುರುವ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಶೂಟಿಂಗ್‌ ಪೂರ್ಣಗೊಂಡಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಈಗಾಗಲೇ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರ ಗಮನವನ್ನು ಸೆಳೆದಿದೆ. ಇದೀಗ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ.

ನಟ ರಕ್ಷಿತ್‌ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ, “ಅವನಲ್ಲಿ ಮೊದಲನೆಯವನು.. ಮತ್ತು ಉಳಿದವನು! SSE ಸೈಡ್ ಎ – ಸೆಪ್ಟೆಂಬರ್ 1 ರಂದು ಬಿಡುಗಡೆ. SSE ಸೈಡ್ ಬಿ – ಅಕ್ಟೋಬರ್ 20 ರಂದು ಬಿಡುಗಡೆಯಾಗುತ್ತಿದೆ” ಎಂದು ಸಿನಿಮಾದ ಪೋಸ್ಟರ್‌ ಮೂಲಕ ಸಿನಿಮಾ ರಿಲೀಸ್‌ ಡೇಟ್‌ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಬಿಡುಗಡೆಯಾದ ಚಾರ್ಲಿ 777 ಮೂಲಕ ಸಿನಿಪ್ರೇಕ್ಷರ ಮನ ಗೆದ್ದಿದ್ದಾರೆ. ಹಾಗೆಯೇ ಈ ಸಿನಿಮಾವು ಬಾಕ್ಸ್‌ ಆಫೀಸ್‌ ಉತ್ತಮ ಕಲೆಕ್ಷನ್‌ನ್ನು ಪಡೆಯುವ ಮೂಲಕ ಯಶಸ್ಸನ್ನು ಕಂಡಿದ್ದಾರೆ. ಇದೀಗ ಮುಂದಿನ ಸಿನಿಮಾದ ಸಪ್ತ ಸಾಗರದಾಚೆ ಎಲ್ಲೋ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ. ತಮ್ಮ ಮೆಚ್ಚಿನ ನಟನ ಸಿನಿಮಾಕ್ಕಾಗಿ ಒಂದು ವರ್ಷದಿಂದ ಅಭಿಮಾನಿಗಳು ಕಾಯುತ್ತಿದ್ದು, ರಿಲೀಸ್‌ ಡೇಟ್‌ ಕಂಡು ಇನ್ನಷ್ಟು ಖುಷಿಯಾಗಿದ್ದಾರೆ.

ಕನ್ನಡ ಸಿನಿರಂಗಕ್ಕೆ ನಟ ರಕ್ಷಿತ್‌ ಶೆಟ್ಟಿ ಸದಾ ಹೊಸ ಹೊಸ ಕಥೆಗಳ ಮೂಲಕ ಪ್ರೇಕ್ಷಕರ ಮನ ಮೆಚ್ಚಿಸಿದ್ದಾರೆ. ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೂಡ ವಿಭಿನ್ನ ರೀತಿಯ ಕಥೆಯನ್ನು ಒಳಗೊಂಡಿದ್ದು, ನಾಯಕ ನಟನ ಜೀವನದ ಹಿಂದಿನ ಹಾಗೂ ಮುಂದಿನ ಕಥಾಹಂದರವನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ : Dhruva Sarja : ನಟ ಸುದೀಪ್ ಬಳಿಕ ಧ್ರುವ ಸರ್ಜಾ ಸರದಿ : ಸ್ನೇಹಿತನಿಗೆ 40 ಲಕ್ಷದ ಬೆಲೆಬಾಳುವ‌ ಕಾರ್ ಗಿಫ್ಟ್ ಕೊಟ್ಟ ನಟ

ನಟ ರಕ್ಷಿತ ಶೆಟ್ಟಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹೇಮಂತ್ ರಾವ್ ನಿರ್ದೇಶನವಿದೆ. ಬೀರಬಲ್ ಸಿನಿಮಾದ ಖ್ಯಾತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ 36 ಸೆಕೆಂಡ್ ಇರುವ ಟೀಸರ್‌ನ್ನು ಪ್ರೇಮಿಗಳ ದಿನದಂದು​ ಬಿಡುಗಡೆ ಮಾಡಲಾಗಿದೆ. ಟೀಸರ್​ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಾತ್ರ ಕಾಣಿಸಿಕೊಂಡಿದ್ದಾರೆ. ಮನು-ಸುರಭಿ ಪ್ರೇಮ ಕಥೆಯ ಝಲಕ್​ ಅನ್ನು ಟೀಸರ್​ ನಲ್ಲಿ ಕಾಣಬಹುದಾಗಿದೆ. ಈಗಾಗಲೇ ಟೀಸರ್‌ ನೋಡಿದ ಪ್ರೇಕ್ಷಕರಿಗೆ ರಕ್ಷಿತ್ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.

Sapta Sagaradaache Yello Movie : Rakshit Shetty Starrer Sapta Sagaradaache Yello Movie Release Date Announced

Comments are closed.