ಬೆಂಗಳೂರುYeddyurappa should resign :ಕಾಂಗ್ರೆಸ್ನವರಿಗೆ ಎಲ್ಲಿ ಯತ್ನಾಳ್ ಸಿಎಂ ಆಗಿ ಬರ್ತಾರೋ ಎಂಬ ಭಯವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾದರೆ ಒಬ್ಬರು ಜೈಲಿಗೆ ಹೋಗಬೇಕು, ಕಾಡಿಗೆ ಮತ್ತೊಬ್ಬರು ಹೋಗಬೇಕಾಗುತ್ತದೆ. ಕಾಂಗ್ರೆಸ್ಗೆ ಬೊಮ್ಮಾಯಿ ಭಯವಿಲ್ಲ. ಅವರಿಗೆ ಯಡಿಯೂರಪ್ಪ ಭಯ ಕೂಡ ಇಲ್ಲ. ಕಾಂಗ್ರೆಸ್ಗೆ ನನ್ನ ಭಯವಿದೆ. ತಿಹಾರ್ ಜೈಲಿನಲ್ಲಿ ಯಾವ ಬಂಡೆನೂ ಇಲ್ಲ, ಪಂಡೆನೂ ಇಲ್ಲ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಎಫ್ಐಆರ್ಗೆ ಕೋರ್ಟ್ ಆದೇಶ ನೀಡಿರುವ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಯಾರು ಎಷ್ಟೇ ದೊಡ್ಡ ರಾಜಾಹುಲಿಯಾದರೂ ಸಹ ಕಾನೂನಿನ ಮುಂದೆ ತಲೆಬಾಗಲೇಬೇಕು. ಹಿಂದೊಮ್ಮೆ ಎಲ್.ಕೆ ಅಡ್ವಾಣಿ ಮೇಲೆ ಆರೋಪ ಕೇಳಿ ಬಂದಿತ್ತು. ಆಗ ತಮ್ಮ ಸ್ಥಾನಕ್ಕೆ ಎಲ್.ಕೆ ಅಡ್ವಾಣಿ ರಾಜೀನಾಮೆ ನೀಡಿದ್ದರು.ಇವರೇನು ಎಲ್.ಕೆ ಅಡ್ವಾಣಿ. ವಾಜಪೇಯಿಗಿಂತಾ ದೊಡ್ಡವರಾ..? ಇವರೂ ಎಲ್.ಕೆ ಅಡ್ವಾಣಿ ರೀತಿಯಲ್ಲಿ ವರ್ತಿಸಬೇಕು. ಆರೋಪ ಎದುರಾಗಿದೆ ಎಂದ ಮೇಲೆ ರಾಜಹುಲಿಯಾಗಲಿ ಅಥವಾ ಇನ್ಯಾರೇ ಆಗಿರಲಿ ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ .
ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಸಲ್ಲಿಸಿದ್ದ ದೂರಿನ ಅನ್ವಯ ಹೈಕೋರ್ಟ್ ಬಿಎಸ್ಐ ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿದೆ , ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಟಿ,ಜೆ ಅಬ್ರಾಹಂ ಸಲ್ಲಿಸಿದ್ದ ಅರ್ಜಿಯನ್ನು 2021ರ ಜುಲೈ ತಿಂಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದು ಮಾಡಿತ್ತು. ಆದರೆ ವಿಶೇಷ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಅಬ್ರಾಹಂ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : Asad Rauf died : ಮಾಜಿ ಐಸಿಸಿ ಅಂಪೈರ್, ಪಾಕಿಸ್ತಾನದ ಅಸಾದ್ ರೌಫ್ ಹೃದಯಾಘಾತದಿಂದ ನಿಧನ
BS Yeddyurappa should resign : Yatnal