RBI hikes rates : ಆರ್​ಬಿಐನಿಂದ ರೆಪೋ ದರ ಏರಿಕೆ : ಸಾಲದ ಮೇಲಿನ ಬಡ್ಡಿದರ ಹೆಚ್ಚಳಕ್ಕೂ ರೆಪೋಗೂ ಇರುವ ಸಂಬಂಧವೇನು : ಇಲ್ಲಿದೆ ಮಾಹಿತಿ

RBI hikes rates : ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ ಮತ್ತೊಮ್ಮೆ ದೇಶದ ಜನತೆಗೆ ಶಾಕ್​ ನೀಡಿದೆ. ಆರ್​ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡುವ ಮೂಲಕ ಶ್ರೀ ಸಾಮಾನ್ಯನ ಜೇಬಿಗೆ ಬರೆ ಏಳೆದಿದೆ. ರೆಪೋ ಮೂಲಾಂಕ ಏರಿಕೆಯಿಂದಾಗಿ ಶೇಕಡಾ 5.4ಕ್ಕೆ ರೆಪೊ ದರ ತಲುಪಿದೆ. ಈ ಹಿಂದೆ ಕೂಡ ಇದೇ ರೀತಿ ಭಾರತೀಯ ರಿಸರ್ವ್ ಬ್ಯಾಂಕ್​ ದಿಢೀರ್​ ರೆಪೋ ದರ ಏರಿಕೆ ಮಾಡಿತ್ತು.


ಏಪ್ರಿಲ್​ ತಿಂಗಳವರೆಗೂ 10 ಬಾರಿ ರೆಪೊ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್​ ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಈ ಹಿಂದೆ ಕೂಡ ಮಹತ್ವದ ನಿರ್ಧಾರವನ್ನು ಕೈಗೊಂಡಿತ್ತು. ಮೇ ತಿಂಗಳಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ ರೆಪೋ ದರವನ್ನು ಕೂಡಲೇ ಅನ್ವಯವಾಗುವಂತೆ ಏರಿಕೆ ಮಾಡಿ ಜನತೆಗೆ ಶಾಕ್​ ನೀಡಿತ್ತು.


ಮೇ ತಿಂಗಳ ಬಳಿಕ ಜೂನ್​ನಲ್ಲಿಯೂ ಮತ್ತೆ ರೆಪೋ ದರವನ್ನು ಏರಿಕೆ ಮಾಡಲಾಗಿತ್ತು. ಜೂನ್​ ತಿಂಗಳಲ್ಲಿಯೂ 50 ಮೂಲಾಂಕ ಏರಿಕೆಯಾಗಿದ್ದ ರೆಪೋ ದರ ಶೇಕಡಾ 4.90ಪ್ರತಿಶತ ತಲುಪಿತ್ತು. ಇದೀಗ ಮತ್ತೆ ಭಾರತೀಯ ರಿಸರ್ವ್ ಬ್ಯಾಂಕ್​ ರೆಪೋ ದರ 50 ಮೂಲಾಂಕ ಏರಿಕೆ ಮಾಡಿದ್ದು ಶೇಕಡಾ 5.4ಕ್ಕೆ ತಲುಪಿದೆ.


ರೆಪೋ ದರ ಏರಿಕೆಯ ಜೊತೆಯಲ್ಲಿ ಎಂಎಸ್‌ಎಫ್ ಹಾಗೂ ಬ್ಯಾಂಕ್ ದರವನ್ನು ಕೂಡ ಪರಿಷ್ಕರಣೆ ಮಾಡಲಾಗಿದೆ. ಪ್ರಸ್ತುತ ಬ್ಯಾಂಕ್​ ದರವು 5.65ಕ್ಕೆ ತಲುಪಿದೆ. ಹೀಗಾಗಿ ಬ್ಯಾಂಕ್​​ನಲ್ಲಿ ಸಾಲದ ಮೇಲಿನ ಬಡ್ಡಿ ದರ ಹಾಗೂ ಎಫ್​ಡಿ ಮೇಲಿನ ದರಗಳು ಏರಿಕೆ ಕಾಣಲಿವೆ. ಆಗಸ್ಟ್​ 2019ರ ಬಳಿಕ ಇದೇ ಮೊದಲ ಬಾರಿಗೆ ರೆಪೋ ದರವು ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡಿದೆ. ರೆಪೋ ದರದ ಏರಿಕೆಯಿಂದಾಗಿ ಬ್ಯಾಂಕುಗಳಲ್ಲಿ ರೆಪೋ ಆಧಾರಿತ ಸಾಲದ ಮೇಲಿನ ಬಡ್ಡಿದರಗಳಲ್ಲಿ ಏರಿಕೆ ಉಂಟಾಗಲಿದೆ.


ಏನಿದು ರೆಪೋ..?
ದೇಶದಲ್ಲಿರುವ ವಾಣಿಜ್ಯ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್​ ಬ್ಯಾಂಕ್​ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ರೆಪೋ ಎಂದು ಕರೆಯಲಾಗುತ್ತದೆ. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆ ಉಂಟಾದ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್​ನಿಂದ ಹಣ ಪಡೆಯುತ್ತವೆ. ಸಾಲ ಪಡೆದ ಹಣಕ್ಕೆ ನೀಡುವ ಬಡ್ಡಿದರವೇ ರೆಪೋ ಆಗಿದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್​ ರೆಪೋ ದರ ಏರಿಕೆ ಮಾಡಿದಷ್ಟು ಜನತೆಗೆ ಸಾಲದ ಮೇಲಿನ ಬಡ್ಡಿ ದರ ಹೆಚ್ಚುತ್ತಾ ಹೋಗುತ್ತದೆ.

ಇದನ್ನು ಓದಿ : Janotsava in Davangere : ಸಿದ್ಧರಾಮೋತ್ಸವಕ್ಕೆ ಟಕ್ಕರ್‌ ಕೊಡುತ್ತಾ ಬಿಜೆಪಿ : ದಾವಣಗೆರೆಯಲ್ಲೇ ಜನೋತ್ಸವಕ್ಕೆ ಕಮಲಪಡೆ ಸಜ್ಜು

ಇದನ್ನೂ ಓದಿ : BS Yediyurappa advised Amit Shah : ಸಿದ್ಧರಾಮೋತ್ಸವವನ್ನು ಗಂಭೀರವಾಗಿ ಪರಿಗಣಿಸಿ : ಅಮಿತ್ ಶಾಗೆ ಸಲಹೆ ಕೊಟ್ಟ ಬಿ.ಎಸ್.ಯಡಿಯೂರಪ್ಪ

Loan EMIs to go up after RBI hikes rates by 50 basis points to 5.4%

Comments are closed.