cbi conducts searches : ಪಿ.ಚಿದಂಬರಂ, ಕಾರ್ತಿ ಚಿದಂಬರಂಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ಸಿಬಿಐ ದಾಳಿ

cbi conducts searches : ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ಪಿ.ಚಿದಂಬರಂಗೆ ಇಂದು ಬೆಳ್ಳಂ ಬೆಳಗ್ಗೆ ಸಿಬಿಐ ಶಾಕ್​ ನೀಡಿದೆ. ಕಾರ್ತಿ ಚಿದಂಬರಂಗೆ ಸಂಬಂಧಿಸಿದ ಪ್ರಕರಣವೊಂದರ ಸಂಬಂಧ ಸಿವಿಐ ಇಂದು ಪಿ.ಚಿದಂಬರಂಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ಇಂದು ದಾಳಿಯನ್ನು ನಡೆಸಿದೆ. ದಾಳಿ ನಡೆಸಿದ ಬಳಿಕ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ತಿಳಿದು ಬಂದಿದೆ.


ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬಂರ ಸಿಬಿಐ ವಿಚಾರಣೆಗೆ ಒಳಪಟ್ಟಿದ್ದಾರೆ ಎನ್ನಲಾಗಿದೆ. ದೆಹಲಿ, ಚೆನ್ನೈ ಹಾಗೂ ಮುಂಬೈ ಸೇರಿದಂತೆ ದೇಶದ ಒಟ್ಟು 7 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಯು 2010-14ರ ನಡುವೆ ವಿದೇಶಕ್ಕೆ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ವಿರುದ್ಧ ಹೊಸದೊಂದು ಪ್ರಕರಣ ದಾಖಲಾಗಿದೆ. ಇದೇ ಪ್ರಕರಣದ ಸಂಬಂಧ ಸಿಬಿಐ ಏಳು ಕಡೆಗಳಲ್ಲಿ ಇಂದು ದಾಳಿ ನಡೆಸಿದೆ ಎನ್ನಲಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆಯು ನಡೆಸಿರುವ ದಾಳಿಯನ್ನು ಕಾರ್ತಿ ಚಿದಂಬರಂ ಕಚೇರಿಯು ದೃಢಪಡಿಸಿದೆ.

ಸಿಬಿಐ ದಾಳಿ ಆರಂಭಿಸುತ್ತಿದ್ದಂತೆಯೇ ಟ್ವೀಟಾಯಿಸಿದ ಕಾರ್ತಿ ಚಿದಂಬರಂ, ನನ್ನ ಮೇಲೆ ಇಲ್ಲಿಯವರೆಗೆ ಒಟ್ಟು ಎಷ್ಟು ಬಾರಿ ದಾಳಿ ನಡೆಸಲಾಗಿದೆ ಎಂಬುದರ ಬಗ್ಗೆ ಲೆಕ್ಕವೇ ಸಿಗುತ್ತಿಲ್ಲ. ನಾನು ಈ ಬಗ್ಗೆ ಇನ್ಮುಂದೆ ದಾಖಲೆ ಇಟ್ಟುಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದಾರೆ.


2019ರ ಆಗಸ್ಟ್​ 21ರಂದು ಐಎನ್​ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ರಾಜ್ಯ ಸಭಾ ಸದಸ್ಯ ಪಿ.ಚಿದಂಬರಂರನ್ನು ಬಂಧಿಸಿದ್ದರು. ಇದಾದ ಬಳಿಕ 2019ರ ಅಕ್ಟೋಬರ್​ 16ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಚಿದಂಬರಂರನ್ನು ವಶಕ್ಕೆ ಪಡೆದಿತ್ತು. ಇದಾಗಿ ಆರು ದಿನಗಳ ಬಳಿಕ ಸಿಬಿಐ ದಾಖಲಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನಿಂದ ಚಿದಂಬರಂಗೆ ಜಾಮೀನು ಸಿಕ್ಕಿದ್ದರೂ ಸಹ ಇಡಿ ಪ್ರಕರಣದಲ್ಲಿ ಸಿಲುಕಿದ್ದರಿಂದ ಚಿದಂಬರಂ ಜೈಲಿನಲ್ಲಿಯೇ ಇರಬೇಕಾಗಿ ಬಂದಿತ್ತು. ಇಡಿ ಪ್ರಕರಣದಲ್ಲಿ 100 ದಿನಗಳ ಜಾಮೀನು ಪಡೆಯುವಲ್ಲಿ ಯಶಸ್ವಿಯಾದ ಚಿದಂಬರಂ ಐಎನ್​ಎಕ್ಸ್​​ ಮೀಡಿಯಾ ಪ್ರಕರಣದಲ್ಲಿ ಚಾರ್ಜ್​ಶೀಟ್​ನ್ನು ಐಎನ್​ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಇದನ್ನು ಓದಿ : Gyanvapi Mosque Issue: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ಎಸ್ ಎಲ್ ಭೈರಪ್ಪ ಅವರ ಆವರಣ ಕಾದಂಬರಿಯಲ್ಲಿ ಈ ಮುಂಚೆಯೇ ಉಲ್ಲೇಖ!

ಇದನ್ನೂ ಓದಿ : Womens T20 Challenge 2022 : ಮಹಿಳಾ T20 ಚಾಲೆಂಜ್ 2022 ತಂಡಗಳನ್ನು ಪ್ರಕಟಿಸಿದ BCCI

cbi conducts searches at p chidambaram son karti premises

Comments are closed.