CBI notice for DK daughter: ಚುನಾವಣೆ ಹೊತ್ತಲ್ಲಿ ಡಿಕೆ ಶಿವಕುಮಾರ್‌ ಗೆ ಮತ್ತೊಂದು ಶಾಕ್‌: ಡಿಕೆಶಿ ಪುತ್ರಿ ಐಶ್ವರ್ಯಾಗೆ ಸಿಬಿಐ ನೋಟೀಸ್‌

ಬೆಂಗಳೂರು: (CBI notice for DK daughter) ಡಿ.ಕೆ. ಶಿವಕುಮಾರ್‌ ಬಳಿಕ ಅವರ ಪುತ್ರಿ ಐಶ್ವರ್ಯಾಗೂ ಸಿಬಿಐ ಶಾಕ್‌ ಕೊಟ್ಟಿದೆ. ಡಿಕೆಶಿ ಪುತ್ರಿಗೆ ಸಿಬಿಐ ನೋಟಿಸ್‌ ನೀಡಿದ್ದು, ಹತ್ತು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಎರಡು ತಿಂಗಳು ನಿರಂತರವಾಗಿ ದಾಖಲೆಗಳನ್ನು ಪರಿಶೀಲಿಸಿ ಬಳಿಕ ಗ್ಲೋಬಲ್‌ ಕಾಲೇಜಿನಲ್ಲಿ ನಿರ್ದೇಶಕಿಯಾಗಿರುವ ಐಶ್ವರ್ಯಾ ಅವರಿಗೆ ನೋಟಿಸ್‌ ನೀಡಲಾಗಿದೆ.

ಡಿಕೆಶಿ ಅಕ್ರಮ ಆಸ್ತಿ ಸಂಪಾದನೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಎರಡು ತಿಂಗಳ ಹಿಂದೆ ಡಿಕೆಶಿ ಒಡೆತನದ ಕಾಲೇಜಿನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಎರಡು ತಿಂಗಳು ನಿರಂತರವಾಗಿ ದಾಖಲೆಗಳನ್ನು ಪರಿಶೀಲಿಸಿ ಬಳಿಕ ಗ್ಲೋಬಲ್‌ ಕಾಲೇಜಿನಲ್ಲಿ ನಿರ್ದೇಶಕಿಯಾಗಿರುವ ಐಶ್ವರ್ಯಾ ಅವರಿಗೆ ನೋಟಿಸ್‌ ನೀಡಲಾಗಿದೆ. ಹತ್ತು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಈ ಹಿಂದೆ ಡಿಕೆಶಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದಾಗ ಕಾಲೇಜು ಟ್ರಸ್ಟ್‌ ನ ಅಡಿಯಲ್ಲಿ ನಡೆಯುತ್ತಿರುವುದಾಗಿ ಹೇಳಿಕೆ ನೀಡಿದ್ದರು.

ಇದಾದ ಬಳಿಕ ತನಿಖೆ ನಡೆಸಿ ಕಾಲೇಜಿನ ಫೀಸ್‌, ಕಾಲೇಜಿನ ಆಯವ್ಯಯ ಪಟ್ಟಿಯ ಸಮೇತ ವಿಚಾರಣೆಗೆ ಹಾಜರಾಗಲು ಐಶ್ವರ್ಯಾಗೆ ನೋಟಿಸ್‌ ನೀಡಿದೆ. ಇನ್ನೂ ಐಶ್ವರ್ಯಾ ಮಾತ್ರವಲ್ಲದೇ ಕಾಲೇಜಿನ ಎಲ್ಲಾ ನಿರ್ದೇಶಕರಿಗೂ ನೋಟಿಸ್‌ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈ ಮೂಲಕ ಸಿಬಿಐ ತನಿಖೆ ಕೊನೆಯ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸುವ ಸಾಧ್ಯತೆಯಿದೆ.

ಚುನಾವಣೆ ಹೊತ್ತಲ್ಲಿ ಡಿಕೆ ಶಿವಕುಮಾರ್‌ ಗೆ ಮತ್ತೊಂದು ಶಾಕ್‌
ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಯು ಅಂತಿಮ ಘಟ್ಟಕ್ಕೆ ತಲುಪಿದ್ದು, ಸಿಬಿಐ ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ಡಿಕೆಶಿ ಹಾಗೂ ಸಂಬಂಧಿಕರ ಮನೆ ಮೇಲೆ ಸಿಬಿಐ ದಾಳಿ ಮಾಡಿತ್ತು. ಸಿಬಿಐ ಅಧಿಕಾರಿಗಳು ಮಾಡಿದ್ದ ಆಸ್ತಿ ಮೌಲ್ಯಮಾಪನದ ವೇಳೆ ಆಸ್ತಿಯಲ್ಲಿ ಏರಿಕೆ ಕಂಡುಬಂದಿರುವುದು ಬೆಳಕಿಗೆ ಬಂದಿದೆ. ತಮ್ಮ ಆದಾಯಕ್ಕಿಂತ ಹೆಚ್ಚುವರಿ ಆಸ್ತಿ ಹೊಂದಿರುವುದಾಗೊ ಸಿಬಿಐ ಎಫ್‌ ಐ ಆರ್‌ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ : KGF Babu: ಯಾರಿದು ಕೆಜಿಎಫ್ ಬಾಬು? ರಿಯಲ್‌ ಎಸ್ಟೇಟ್‌ನಿಂದ ರಾಜಕೀಯದ ಪಯಣ ಹೀಗಿದೆ

CBI notice for DK daughter: Another shock for DK Shivakumar during elections: CBI notice for DK’s daughter Aishwarya

Comments are closed.