HD Kumaraswamy vs DK Shivakumar : ಚನ್ನಪಟ್ಟಣ ಕೈ ಅಭ್ಯರ್ಥಿ ಜೆಡಿಎಸ್ ತೆಕ್ಕೆಗೆ: ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿತಾರಾ ಡಿ.ಕೆ.ಶಿವಕುಮಾರ್‌

ಬೆಂಗಳೂರು : ರಾಜ್ಯದ ರಾಜಕಾರಣ ಒಂದು ತೂಕವಾದರೇ, ರಾಮನಗರದ ರಾಜಕಾರಣವೇ ಇನ್ನೊಂದು ತೂಕ. ಸದ್ಯ ಡಿಕೆ ಬ್ರದರ್ಸ್ ಹಾಗೂ ಎಚ್ಡಿಕೆ (HD Kumaraswamy vs DK Shivakumar) ನಡುವಿನ ನೇರ ಹಣಾಹಣಿವೆ ವೇದಿಕೆಯಾಗಿರೋ ರಾಮನಗರದಲ್ಲಿ ಡಿಕೆ ಬ್ರದರ್ಸ್ ಗೆ ಎಚ್ಡಿಕೆ ಸಖತ್ ತಿರುಗೇಟು ನೀಡಿ ಮತ್ತೊಮ್ಮೆ ಜೆಡಿಎಸ್ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರದ ವೇಳೆಗೆ ರಾಮನಗರ ವಿಧಾನಸಭಾ ಕ್ಷೇತ್ರ ಭಾರಿ ಸುದ್ದಿಯಲ್ಲಿತ್ತು, ಆದರೆ ಈ ಬಾರಿ ಚನ್ನಪಟ್ಟಣ (Channapatna) ಕ್ಷೇತ್ರ ರಾಜ್ಯದ ಗಮನಸೆಳೆಯುತ್ತಿದೆ. ಶತಾಯ ಗತಾಯ ಮಗನನ್ನು ಶಾಸಕನಾಗಿಸುವ ಎಚ್ಡಿಕೆ ಕನಸಿಗೆ ತಣ್ಣೀರೆರೆಚಲು ಸ್ವತಃ ಡಿಕೆಸುರೇಶ್ ನಿಖಿಲ್ ಕುಮಾರಸ್ವಾಮಿ ಎದುರು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಹೀಗಾಗಿ ಈ ಭಾರಿಯೂ ನಿಖಿಲ್ ಗೆಲುವು ಕನಸು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಸ್ವತಃ ಎಚ್ಡಿಕೆಗೂ ಕೂಡ ಈ ಸುದ್ದಿ ಕೆಲಕಾಲ ಆತಂಕ ಹಾಗೂ ತಲೆನೋವು ತಂದಿದ್ದು ಸುಳ್ಳಲ್ಲ. ಆದರೆ ಡಿಕೆ ಬ್ರದರ್ಸ್ ಕೊಟ್ಟ ಈ ಚಮಕ್ ಹಾಗೂ ರಾಜಕೀಯ ಏಟಿಗೆ ಒಂದೇ ವಾರದಲ್ಲಿ ದಳಪತಿ ಎಚ್ಡಿಕೆ ಮಸ್ತ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ : Karnataka Election 2023: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಠಕ್ಕರ್ : ಲಿಂಗಾಯತ ಮತ ಬ್ಯಾಂಕ್ ಗೆ ಕೈ ಹಾಕಿದ ಕಾಂಗ್ರೆಸ್

ಪಂಚರತ್ನ ಯಾತ್ರೆ ಸಮಾರೋಪದ ವೇಳೆ ಎಚ್ಡಿಕೆ ಚನ್ನಪಟ್ಟಣದ ಕಾಂಗ್ರೆಸ್ ನ ಸಂಭಾವ್ಯ ಅಭ್ಯರ್ಥಿ ಪ್ರಸನ್ನ ರನ್ನು ಜೆಡಿಎಸ್ ಗೆ ತೆರೆದ ಹೃದಯದಿಂದ ಸ್ವಾಗತಿಸಿಕೊಂಡಿದ್ದಾರೆ. ಇನ್ನೇನು ಕಾಂಗ್ರೆಸ್ ನಿಂದ ಟಿಕೇಟ್ ಪಡೆದುಕೊಂಡು ಕಣಕ್ಕಿಳಿಯಬೇಕಿದ್ದ ಪ್ರಸನ್ನ ಇದ್ದಕ್ಕಿದ್ದಂತೆ ಜೆಡಿಎಸ್ ಪಾಳಯ ಸೇರಿರೋದು ಡಿಕೆಶಿ ಬ್ರದರ್ಸ್ ಗೆ ತೀವ್ರ ಮುಜುಗರ ತಂದಿದೆ. ಪ್ರಸನ್ನ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕುಮಾರಸ್ವಾಮಿ ಡಿಕೆಶಿವಕುಮಾರ್ ಹಾಗೂ ಡಿಕೆಸುರೇಶ್ ಗೆ ತಮ್ಮ ತಂಟೆಗೆ ಬಂದರೇ ನಿಮಗೂ ತಿರುಗೇಟು ನೀಡಲಾಗುವುದು ಎಂದು ಉದಾಹರಣೆ ಸಮೇತ ವಿವರಿಸಿದ್ದಾರೆ. ಇದರಿಂದ ಚನ್ನಪಟ್ಟಣ ಕಾಂಗ್ರೆಸ್ ನಲ್ಲಿ ಗೊಂದಲ ಉಂಟಾಗಿದ್ದರೇ, ಡಿಕೆಶಿ ಬ್ರದರ್ಸ್ ಗೆ ಸ್ವಕ್ಷೇತ್ರದಲ್ಲಿ ತೀವ್ರ ಮುಖಭಂಗವಾಗಿದೆ.

ಈ ಮಧ್ಯೆ ಪ್ರಸನ್ನ ಚನ್ನಪಟ್ಟಣದಿಂದ (Channapatna) ಕಾಂಗ್ರೆಸ್ ಟಿಕೇಟ್ ಪಡೆಯೋ ಬದಲು ಜೆಡಿಎಸ್ ಸೇರಿರೋದರಿಂದ ಸ್ವತಃ ಡಿಕೆಶಿ ಯೇ ಚನ್ನಪಟ್ಟಣದಿಂದ ಕಣಕ್ಕಿಳಿತಾರೇ ಎಂಬ ಸಂಗತಿಯೂ ಸುದ್ದಿಯಾಗಿದ್ದು ಸಖತ್ ಕುತೂಹಲ ಮೂಡಿಸಿದೆ. ಒಂದೊಮ್ಮೆ ಚನ್ನಪಟ್ಟಣದಿಂದ ಡಿಕೆಶಿ ಕಣಕ್ಕಿಳಿದರೇ (HD Kumaraswamy vs DK Shivakumar) ಮಾಜಿಸಿಎಂ ಹಾಗೂ ಹಾಲಿ ಕೆಪಿಸಿಸಿ ಅಧ್ಯಕ್ಷರ ನಡುವಿನ ಫೈಟ್ ಗೆ ಕ್ಷೇತ್ರ ಸಾಕ್ಷಿಯಾಗಲಿದ್ದು, ರಾಜ್ಯದ ಹಾಟ್ ಹಾಟ್ ಎಲೆಕ್ಷನ್ ಸ್ಪಾಟ್ ಗಳ ಪೈಕಿ ಚನ್ನಪಟ್ಟಣವೂ ಒಂದಾಗಲಿದೆ. ಒಟ್ಟಿನಲ್ಲಿ ವರ್ಷಗಳ ಹಿಂದೆ ಪರಸ್ಪರ ಕೈ ಜೋಡಿಸಿದ್ದ ಎಚ್ಡಿಕೆ, ಡಿಕೆಶಿ ಈಗ ಪರಸ್ಪರ ಗುದ್ದಾಟಕ್ಕೆ ಸಿದ್ಧವಾಗಿರೋದು ಮಾತ್ರ ರಾಜಕೀಯದ ಮೇಲಾಟಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ : Karnataka Election candidate list: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರವೂ ಕ್ಷೇತ್ರ ಬದಲಾವಣೆಯ ಸೂಚನೆ ನೀಡಿದ ಸಿದ್ದರಾಮಯ್ಯ

ಇದನ್ನೂ ಓದಿ : Horoscope Today : ದಿನಭವಿಷ್ಯ – ಮಾರ್ಚ್ 27 ಸೋಮವಾರ

Comments are closed.