Rahul Gandhi Ramya : ತಂದೆ,‌ ತಾಯಿ ಬಳಿಕ ರಾಹುಲ್ ಗಾಂಧಿನೇ ಎಲ್ಲಾ : ವಿಕೆಂಡ್‌ ವಿತ್ ರಮೇಶ್ ಶೋದಲ್ಲಿ ರಮ್ಯ ಮನದಾಳ

Rahul Gandhi Ramya : ಕನ್ನಡ ಕಿರುತೆರೆ ಲೋಕದ ಜನಪ್ರಿಯ ಶೋ ವಿಕೇಂಡ್ ವಿತ್ ರಮೇಶ್. ವಿರಾಮದ ಬಳಿಕ ಆರಂಭವಾಗಿರೋ ಶೋದ ಐದನೇ ಸೀಸನ್ ಮೊದಲ ಸಂಚಿಕೆಯಲ್ಲೇ ಗಮನ ಸೆಳೆದಿದೆ. ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡ ಮೋಹಕ ತಾರೆ,ಮಾಜಿ ಸಂಸದೆ ರಮ್ಯ ತಮ್ಮ ಹಾಗೂ ರಾಹುಲ್ ಗಾಂಧಿ ನಡುವಿನ ಬಾಂಧವ್ಯದ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಹೌದು ಮೋಹಕ ತಾರೆ ರಮ್ಯ ಕನ್ನಡದ ಸಿನಿರಸಿಕರ ಪಾಲಿಗೆ ಎಂದೂ ನಂಬರ್ ಒನ್ ತಾರೆ. ಸದ್ಯ ಸಿನಿಮಾ ,ರಾಜಕೀಯ ಎರಡರಿಂದಲೂ ಬ್ರೇಕ್ ಪಡೆದಿರೋ ರಮ್ಯ ಸಿನಿಮಾ ನಿರ್ಮಾಣ ಸಂಸ್ಥೆಯ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದಾರೆ.

ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದ ಫೇಮಸ್ ಶೋ ವಿಕೇಂಡ್ ವಿತ್ ರಮೇಶ್ ಸೀಸನ್ ಐದು ಆರಂಭವಾಗಿದೆ. ಈ ಸೀಸನ್ ನ ಮೊದಲ ಅತಿಥಿಯಾಗಿ ನಟಿ ರಮ್ಯ ಪಾಲ್ಗೊಂಡಿದ್ದರು. ನಟಿ ರಮ್ಯ ಬೋರ್ಡಿಂಗ್ ಸ್ಕೂಲ್, ರಮ್ಯ ಹುಟ್ಟಿದ ಆಸ್ಪತ್ರೆ ಹೀಗೆ ಎಲ್ಲ ಸವಿ ನೆನಪುಗಳನ್ನು ವಿಕೇಂಡ್ ಟೆಂಟ್ ಬಿಚ್ಚಿಟ್ಟಿದೆ. ಆದರೆ ಇತರ ನಟ-ನಟಿಯರ ಶೋಗಳಂತೆ ನಟಿ ರಮ್ಯ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ವಿಚಾರವನ್ನು ಶೋ ತೋರಿಸದೇ ಇರೋದು ಪ್ರೇಕ್ಷಕರ ಪಾಲಿಗೆ ಕೊಂಚ ನಿರಾಸೆ ತಂದಿದೆ.

ಆದರೆ ನಟಿ ರಮ್ಯ ಅವರ ಬದುಕಿನ ಮಹತ್ವದ ಘಟ್ಟವಾದ ರಾಜಕೀಯದ ಬಗ್ಗೆ ಮಾತ್ರ ವಿಸ್ಕೃತ ವಿಚಾರಗಳನ್ನು ಶೋ ಒಳಗೊಂಡಿತ್ತು. ಈ ವೇಳೆ ನಟಿ ರಮ್ಯ ತಮ್ಮ ಬದುಕಿನಲ್ಲಿ ತಾವು ಅಕಸ್ಮಾತ ರಾಜಕೀಯಕ್ಕೆ ಪ್ರವೇಶಿಸಿದ್ದು, ಸಂಸದೆಯಾಗಿದ್ದನ್ನು ನೆನಪಿಸಿಕೊಂಡರು. ಮಾತ್ರವಲ್ಲ ಮಂಡ್ಯ ಜನರ ಪ್ರೀತಿಯನ್ನು ನೆನಪಿಸಿಕೊಂಡರು. ಇದೆಲ್ಲದಕ್ಕಿಂತ ಮುಖ್ಯವಾಗಿ ನಟಿ ರಮ್ಯ ತಮ್ಮ ಹಾಗೂ ರಾಹುಲ್ ಗಾಂಧಿ ಒಡನಾಟವನ್ನು ನೆನಪಿಸಿಕೊಂಡರು.‌ಅಷ್ಟೇ ಅಲ್ಲ ತಮಗೆ ಬದುಕಿನಲ್ಲಿ ತಾಯಿ, ತಂದೆಯನ್ನು ಬಿಟ್ಟರೇ ಅತ್ಯಂತ ಆಪ್ತ ಹಾಗೂ ಪ್ರಭಾವ ಬೀರಿದ ವ್ಯಕ್ತಿ ಎಂದರೇ ಅದು ರಾಹುಲ್ ಗಾಂಧಿ (Rahul Gandhi Ramya) ಎನ್ನುತ್ತ ಭಾವುಕರಾದರು.

ನಾನು ತಂದೆಯನ್ನು ಕಳೆದುಕೊಂಡಾಗ ತುಂಬ ಕುಗ್ಗಿದ್ದೇ, ಈ ವೇಳೆ ರಾಹುಲ್ ಗಾಂಧಿ ನನಗೆ ಧೈರ್ಯ ತುಂಬಿದ್ದರು. ಸಂಸತ್ತಿನಲ್ಲಿ ಮಾರ್ಗದರ್ಶನ ಮಾಡಿದ್ದರು. ಹುಟ್ಟು ಸಾವಿನ ಅರ್ಥ ತಿಳಿಸಿ ಜೊತೆ ನಿಂತಿದ್ದರು. ನನ್ನ ಕಷ್ಟಗಳಲ್ಲಿ ಜೊತೆ ನಿಂತ ಅವರಿಗೆ ನಾನೆಂದೂ ಚಿರ ಋಣಿ ಎಂದು ರಮ್ಯ ಹೇಳಿದ್ದಾರೆ. ಆದರೆ ನಟಿ ರಮ್ಯ ತಮಗೆ ಸದಾ ಪ್ರೋತ್ಸಾಹಿಸಿದ ರೆಬೆಲ್ ಸ್ಟಾರ್ ಅಂಬರೀಶ್ ರನ್ನು ಮಾತ್ರ ನೆನಪಿಸಿಕೊಂಡಿಲ್ಲ. ಆದರೆ ಅವರು ಕೊಟ್ಟ ನಾಯಿಮರಿಯನ್ನು ಉಲ್ಲೇಖಿಸಿದ್ದಾರೆ. ಆದರೆ ನಟಿ ರಮ್ಯ ಅವರು ರಾಹುಲ್ ಗಾಂಧಿ ಬಗ್ಗೆ ಹೇಳಿದ ಮಾತುಗಳಿಂದಲೇ ಸದ್ಯ ವಿಕೇಂಡ್ ಶೋ ಸದ್ದು ಮಾಡ್ತಿದೆ.

ಇದನ್ನೂ ಓದಿ : ಧನುಷ್‌ ಜೊತೆ ಮೀನಾ ಮದುವೆ : ಕೊನೆಗೂ ಮೌನ ಮುರಿದ ನಟಿ

ಇದನ್ನೂ ಓದಿ : HD Kumaraswamy vs DK Shivakumar : ಚನ್ನಪಟ್ಟಣ ಕೈ ಅಭ್ಯರ್ಥಿ ಜೆಡಿಎಸ್ ತೆಕ್ಕೆಗೆ: ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿತಾರಾ ಡಿ.ಕೆ.ಶಿವಕುಮಾರ್‌

Comments are closed.