20 Aspirants : ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ : ಹೈಕಮಾಂಡ್ ಕೈಸೇರಿದೆ 20 ಆಕಾಂಕ್ಷಿಗಳ ಲಿಸ್ಟ್

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಈಗ ಸಂಪುಟ ವಿಸ್ತರಣೆಯದ್ದೇ ಮಾತು. ಸದ್ಯ ಕೈಬಿಡೋ ಸಚಿವರ ಪಟ್ಟಿ ಹಾಗೂ ಸಂಪುಟ ಸೇರೋ ಶಾಸಕರ ಪಟ್ಟಿ (20 aspirants) ಹೆಚ್ಚು ಸದ್ದು ಮಾಡಲಾರಂಭಿಸಿದೆ. ಇನ್ನೊಂದು ವಾರದಲ್ಲಿ ಸಚಿವ ಸಂಪುಟಕ್ಕೆ (Karnataka Cabinet Expansion) ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗಲಿದೆ ಎನ್ನಲಾಗಿದ್ದು, ಅದಕ್ಕಾಗಿ ಸಿಎಂ ಬೊಮ್ಮಾಯಿ ಕೂಡ ವರಿಷ್ಠರ ಮನವೊಲಿಸುವ ಪ್ರಯತ್ನ ನಡೆಸಿದ್ದಾರಂತೆ.

ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷದ ಸಂಘಟನೆ, ಭಾಷೆ, ಪ್ರಾದೇಶಿಕತೆ, ಜಾತಿ,ಧರ್ಮ,ಆರ್ ಎಸ್ ಎಸ್ ಹಿನ್ನೆಲೆ‌ ಸೇರಿದಂತೆ ನಾನಾ ಮಾನದಂಡ ಆಧರಿಸಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಅನ್ನೋ ಮಾತು ಬಿಜೆಪಿ ವಲಯದಿಂದಲೇ ಕೇಳಿಬಂದಿದೆ. ಕಳೆದ ಒಂದು ವರ್ಷಗಳಿಂದ ನಾನಾ ಕಾರಣಕ್ಕೆ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಯನ್ನು ಬಿಜೆಪಿ ಹೈಕಮಾಂಡ್ ಮುಂದೂಡಿಕೊಂಡು ಬಂದಿತ್ತು. ಆದರೆ ಈಗ ಸಂಪುಟ ವಿಸ್ತರಣೆಯನ್ನು ಸಂಪೂರ್ಣ ಮುಂದೂಡಲು ಬಿಜೆಪಿ ಬಳಿ ಕಾರಣಗಳಿಲ್ಲ. ಚುನಾವಣೆ ಹಾಗೂ ಪಕ್ಷ ಸಂಘಟನೆಯ ಕಾರಣಕ್ಕಾಗಿ ಹಾಗೂ ಪಕ್ಷದ ಶಾಸಕರಲ್ಲಿ ವಿಶ್ವಾಸ ತುಂಬಲು ಬಿಜೆಪಿ ಸಂಪುಟ ವಿಸ್ತರಣೆ ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಈಗ ರಾಜ್ಯ ಬಿಜೆಪಿಯಿಂದ ಪಟ್ಡಿ ತರಿಸಿಕೊಂಡಿದೆಯಂತೆ.

ಮೂಲಗಳ ಮಾಹಿತಿ ಪ್ರಕಾರ ಮೈಸೂರು ಭಾಗದ ಪಕ್ಷ ಸಂಘಟನೆಯ ಕಾರಣವನ್ನು ಮುಂದಿಟ್ಟುಕೊಂಡು ಸಿಪಿವೈಗೂ ಅವಕಾಶ ಸಿಗಲಿದೆ ಎನ್ನಲಾಗ್ತಿದೆ. ಇದಲ್ಲದೇ ಪೂರ್ಣಿಮಾ ಸೇರಿದಂತೆ ಒಟ್ಟು 20 ಆಕಾಂಕ್ಷಿಗಳ ಹೆಸರು ಹೈಕಮಾಂಡ್ ಕೈ ಸೇರಿರೋ ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿಯಲ್ಲಿದೆ. ಯಾವುದೇ ಬೆದರಿಕೆ ಸೇರಿದಂತೆ ಸಚಿವರ ಸ್ಥಾನಾಕಾಂಕ್ಷಿಗಳ ಒತ್ತಡಕ್ಕೆ ಮಣಿಯದೇ ಬಿಜೆಪಿ ಹೈಕಮಾಂಡ್ ಕೇವಲ ಪಕ್ಷದ ಹಿತ ಹಾಗೂ ಮುಂಬರುವ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿ ಮಾತ್ರ ಸಚಿವ ಸ್ಥಾನ ಹಂಚಲು ಅಮಿತ್ ಶಾ ಹಾಗೂ ಮೋದಿ ಪಡೆ ತೀರ್ಮಾನಿಸಿದೆಯಂತೆ.

ಇನ್ನೂ ಸಚಿವ ಸ್ಥಾನಾಕಾಂಕ್ಷಿತ ಬಿಜೆಪಿ ಶಾಸಕರು ಈ ಬಗ್ಗೆ‌ಮಾಹಿತಿ ನೀಡಿದ್ದಾರೆ. ಹೊಸ ಪೇಟೆಯಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ಶಾಸಕ ಲಕ್ಷ್ಮಣ್ ಸವದಿ, ನಾನು ಹಾಗೂ ಬಿಎಸ್ವೈ ಪುತ್ರ ವಿಜಯೇಂದ್ರ ಅವರು ಸೇರಿದಂತೆ ಒಟ್ಟು 20 ಜನ ಆಕಾಂಕ್ಷಿತರ ಹೆಸರು ರಾಜ್ಯ ಬಿಜೆಪಿಯಿಂದ ರವಾನೆಯಾಗಿದೆ. ಆದರೆ ನಾವೆಲ್ಲ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳು. ಹೀಗಾಗಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಬಿಜೆಪಿಯ ಸಂಪುಟ ಸರ್ಕಸ್ ಕುತೂಹಲದ ಹಂತಕ್ಕೆ ಬಂದು ತಲುಪಿದೆ.

ಇದನ್ನೂ ಓದಿ : ಚುನಾವಣೆ ಗೆಲುವಿಗೆ ಕಾಂಗ್ರೆಸ್​ ಹೊಸ ಕಾರ್ಯತಂತ್ರ: ಒಂದು ಕುಟುಂಬಕ್ಕೆ ಒಂದೇ ಟಿಕೆಟ್​

ಇದನ್ನೂ ಓದಿ : ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ಫಿಕ್ಸ್‌ : ಸಿಎಂ ಸ್ಥಾನ ಕೊಟ್ಟು ಸಚಿವ ಸ್ಥಾನ ಪಡೆದ ಯಡಿಯೂರಪ್ಪ

climax stage Karnataka Cabinet Expansion High Command has reached the list of 20 aspirants

Comments are closed.