Congress President Election Result:ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಅಧ್ಯಕ್ಷ ಪಟ್ಟ : ನಿಜವಾಯ್ತು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

ನವದೆಹಲಿ:(Congress President Election Result) ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (AICC) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ನೂತನ ಕಾಂಗ್ರೇಸ್‌ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಶಶಿ ತರೂರ್‌ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ನೂತನ ಕಾಂಗ್ರೇಸ್‌ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಅಲಂಕರಿಸಿದ್ದಾರೆ. ಆದ್ರೆ ಮಲ್ಲಿಕಾರ್ಜುನ ಖರ್ಗೆ ಅವರೇ ಅಧ್ಯಕ್ಷರಾಗುತ್ತಾರೆ ಅನ್ನೋ ಕುರಿತು ಕೆಲವೇ ದಿನಗಳ ಹಿಂದೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದರು. ಆದ್ರೀಗ ಸ್ವಾಮೀಜಿ ಅವರ ಭವಿಷ್ಯ ನಿಜವಾಗಿದೆ.

(Congress President Election Result)ಇಂದು ನಡೆದ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 1072 ಮತಗಳನ್ನು ಶಶಿ ತರೂರ್ ಪಡೆದರೆ 7897 ಮತಗಳನ್ನು ಮಲ್ಲಿಕಾರ್ಜುನ ಖರ್ಗೆ ಪಡೆಯುವ ಮೂಲಕ ಶಶಿ ತರೂರ್ ವಿರುದ್ದ ಗೆಲುವು ದಾಖಲಿಸಿದ್ದರು. ಬರೋಬ್ಬರಿ 24 ವರ್ಷಗಳ ಬಳಿಕ ಕಾಂಗ್ರೆಸ್‌ ಮೊದಲ ಬಾರಿಗೆ ಗಾಂಧಿಯೇತರ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿದೆ.ಅಕ್ಟೋಬರ್‌ 17 ರಂದು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಿತು. ಮತದ ಅಧಿಕಾರವನ್ನು ಪಡೆದಿದ್ದ ಒಟ್ಟು 9100 ಮಂದಿಯ ಪೈಕಿಯಲ್ಲಿ ಶೇ. 96 ರಷ್ಟು ಜನರು ಮತದಾನ ಮಾಡಿದ್ದರು. ಎಲ್ಲಾ ರಾಜ್ಯಗಳಿಂದ ಬ್ಯಾಲೆಟ್‌ ಬಾಕ್ಸ್‌ ಗಳನ್ನು ದೆಹಲಿಗೆ ತರಿಸಿಕೊಂಡು ಮತ ಎಣಿಕೆಯನ್ನು ಮಾಡಲಾಯಿತು. ಅಂತಿಮ ಫಲಿತಾಂಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಜಯವನ್ನು ಗಳಿಸಿದ್ದಾರೆ.

ಕಳೆದ ಹದಿನೆಂಟು ದಿನಗಳ (1-10-2022ರಂದು) ಹಿಂದೆ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಧಿಕಾರ ಪ್ರಾಪ್ತಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ “ಕಾಂಗ್ರೇಸ್‌ ಅಧ್ಯಕ್ಷಕ್ಕಿಂತ ” ಜನಾಧ್ಯಕ್ಷನಾಗು ಎಂದು ಆಶೀರ್ವಾದ ಮಾಡುವ ಮೂಲಕ, ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಲ್ಲಿ ಗೆಲುವನ್ನು ಸಾಧಿಸುತ್ತಾರೆ ಎಂಬ ಭವಿಷ್ಯವನ್ನು ನುಡಿದಿದ್ದರು. ಇದೀಗ ಈ ಭವಿಷ್ಯ ಸತ್ಯವಾಗಿದೆ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಇದುವರೆಗೆ ನುಡಿದ ಭವಿಷ್ಯ ಸುಳ್ಳಾಗಿಲ್ಲ ಇದಕ್ಕೆ ನಿದರ್ಶನವಾಗಿ ಈ ಹಿಂದೆ ನುಡಿದ ಭವಿಷ್ಯ ಸತ್ಯವಾಗಿದೆ.

ಇದನ್ನೂ ಓದಿ:Congress President Poll Results 2022:ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಜಯಭೇರಿ

ಇದನ್ನೂ ಓದಿ:Mallikarjuna Kharge’s political life :ಪಕ್ಷ ನಿಷ್ಠೆ, ಹುಟ್ಟು ಹೋರಾಟದ ಗುಣಗಳು : ಗಾಂಧಿ ಕುಟುಂಬದ ಮನಗೆದ್ದಿದ್ದು ಮಲ್ಲಿಕಾರ್ಜುನ ಖರ್ಗೆಯ ಈ ಗುಣಗಳು

ಉತ್ತರಾಖಂಡದಲ್ಲಿ ಅನೇಕ ಅವಘಡಗಳು ಸಂಭವಿಸುತ್ತದೆ ಎಂಬ ಸೂಚನೆಯನ್ನು ನೀಡಿದ್ದರು .ಅದರಂತೆ ಉತ್ತಾರಾಖಂಡ್‌ ನ ಫರ್ವಾಲ್‌ ನ ಹಿಮಕುಸಿತದಲ್ಲಿ ಹಲವಾರು ಸಾವು ನೊವುಗಳಾದವು, ಕರ್ನಾಟಕದಲ್ಲಿ ಅನೇಕ ಶಾಸಕರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ, ಉತ್ತರ ಭಾರತದಲ್ಲಿ ಅನೇಕ ಅನಾಹುತಗಳು ನಡೆಯುತ್ತದೆ , ಭಾರತದ ಈಶಾನ್ಯ ರಾಷ್ಟ್ರಗಳು ಆರ್ಥಿಕ ನಷ್ಟವನ್ನು ಅನುಭವಿಸಲಿವೆ ಎಂದು ಹೇಳಿದ ಭವಿಷ್ಯಗಳು ಸುಳ್ಳಾಗಿಲ್ಲ ಅನ್ನೋದು ವಿಶೇಷ.

AICC President to Mallikarjuna Kharge: Siddalinga Sivacharya Swamiji’s future came true

Comments are closed.