CBI Report: ಸಾಯುವ ಮೊದಲು ಪರೇಶ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ

ಕಾರವಾರ : Paresh Mesta case CBI report : ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಹತ್ಯೆಗೆ ಸಂಬಧಿಸಿದತೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಮಹತ್ವದ ಅಂಶಗಳು ಬಹಿರಂಗಗೊಂಡಿವೆ. ಪರೇಶ್ ಸಾಯುವ ಮೊದಲು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ಸಿಬಿಐ ವರದಿಯಲ್ಲಿ ಉಲ್ಲೇಖಗೊಂಡಿವೆ.

2017 ರ ಡಿ.6 ರಂದು ಕುಮಟಾದಲ್ಲಿ ಕಾಂಗ್ರೆಸ್ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇದೇ ವೇಳೆ ಪರೇಶ್ ಕೂಡಾ ಪಾಲ್ಗೊಂಡಿದ್ದ. ಇದಕ್ಕಾಗಿ ಪರೇಶ್ ಸುಮಾರು 25 ಕಿ.ಮೀ ಪ್ರಯಾಣಿಸಿದ್ದು, ಕಾರ್ಯಕ್ರಮ ಮುಗಿದ ಬಳಿಕ ಪರೇಶ್ ಮನೆಗೆ ತೆರಳಿ ಅಲ್ಲಿಂದ ಸ್ನೇಹಿತರ ಭೇಟಿಗೆ ಹೋಗಿದ್ದ ಎಂದು ಸಿಬಿಐ ತಿಳಿಸಿದೆ.

ಪರೇಶ್‌ನನ್ನು ಕೊಲೆಗೈದಿರುವ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರೇಶ್ ಮೇಸ್ತಾ ಸ್ನೇಹಿತರು, ಒಡನಾಡಿಗಳು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಹಲವು ಮಹತ್ತರ ಸಾಕ್ಷಗಳನ್ನು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದೆ. ಪರೇಶ್ ಮೇಸ್ತಾ ಯಾವುದೇ ಹುಡುಗಿಯನ್ನು ಪ್ರೀತಿಸುತ್ತಿರಲಿಲ್ಲ. ಶಬರಿಮಲೆಗೆ ತೆರಳಲು ತನ್ನ ಅಪ್ಪನ ಬಳಿ ಸಮ್ಮತಿಯನ್ನು ಕೂಡಾ ಪಡೆದಿದ್ದ. ಆದರೆ ಕೆಲವೊಮ್ಮೆ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ, ಆಗಾಗ ಸ್ನೇಹಿತರ ಮನೆಯಲ್ಲೂ ಇರುತ್ತಿದ್ದ ಎಂದು ಸಿಬಿಐ ಉಲ್ಲೇಖಿಸಿದೆ.

2017 ರ ಡಿ.6 ರಂದು ನಡೆದ ಹೊನ್ನಾವರದಲ್ಲಿ ನಡೆದ ಕೋಮುಗಲಭೆ ವೇಳೆ ಓಡುತ್ತಿದ್ದಾಗ ಶೆಟ್ಟಿಕೆರೆಯಲ್ಲಿ ಕಾಲುಜಾರಿ ಕೆರೆಯಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ. ಪರೇಶ್‌ನನ್ನು ಕೊಲೆಗೈದಿರುವ ಬಗ್ಗೆ ಯಾವುದೇ ಸಾಕ್ಷಧಾರಗಳು ಲಭ್ಯವಾಗಿಲ್ಲ. ಹೀಗಾಗಿ ಆರೋಪಿಯನ್ನು ದೋಷಮುಕ್ತಗೊಳಿಸಬಹುದು ಎಂದು ಸಿಬಿಐ ವರದಿಯಲ್ಲಿ ತಿಳಿಸಿದೆ.

ಈ ಹಿಂದೆ ಅ.3 ರಂದು ಸಿಬಿಐ ಅಧಿಕಾರಿಗಳು ಹೊನ್ನಾವರ ನ್ಯಾಯಾಲಯಕ್ಕೆ ಮೊದಲ ವರದಿ ಸಲ್ಲಿಸಿದ್ದರು. ಪರೇಶ್ ಮೇಸ್ತಾ ಕೊಲೆಯಾಗಿಲ್ಲ. ಆತನ ಸಾವು ಆಕಸ್ಮಿಕ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದರು. 2017ರಲ್ಲಿ ನಡೆದಿದ್ದ ಪರೇಶ್ ಮೇಸ್ತಾ ಕೊಲೆ ರಾಜ್ಯಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ತೀವ್ರ ಒತ್ತಡಗಳ ನಡುವೆ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸುದೀರ್ಘ ನಾಲ್ಕೂವರೆ ವರ್ಷಗಳ ಕಾಲ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳ ತಂಡ ಪರೇಶ್ ಕೊಲೆ ನಡೆದಿಲ್ಲ, ಆಕಸ್ಮಿಕ ಸಾವು ಎಂದು ತನ್ನ ಅಂತಿಮ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಇದನ್ನು ಓದಿ : Woman Battling For Life : ಐವರು ಕಾಮುಕರಿಂದ ಮಹಿಳೆ ಮೇಲೆ ಸತತ 2 ದಿನ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : Roger Binny BCCI president : ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ಅವಿರೋಧ ಆಯ್ಕೆ

Paresh Mesta case CBI report: Mesta participated in Congress program before his death

Comments are closed.