ಬೆಂಗಳೂರು; Congress Twitter war: ಪ್ರಧಾನಿ ಮೋದಿಯವರ ಆರ್ಥಿಕತೆಯಿಂದ ರಾಜ್ಯದ ಕಂದಾಯ ಸಚಿವರಿಗೂ ಪಕೋಡಾ ಮಾರುವ ಪರಿಸ್ಥಿತಿ ಬಂದಿದೆ ಎಂದು ಸಚಿವ ಆರ್,ಅಶೋಕ್ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಟ್ವಿಟರ್ ನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್, ಮೋದಿಯವರ #Pakodanomics ಆರ್ಥಿಕತೆಯಲ್ಲಿ ರಾಜ್ಯದ ಕಂದಾಯ ಸಚಿವರಿಗೂ ಪಕೋಡಾ ಮಾರುವ ಪರಿಸ್ಥಿತಿ ಬಂದಿದೆ. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್ ಟಿ ಬಾಕಿ ಕೊಡಲಿಲ್ಲ. ಕನ್ನಡಿಗರಿಗೆ ನಿಲ್ಲದ ಅನ್ಯಾಯಕ್ಕಾಗಿ ಈ ಸ್ಥಿತಿಯೇ ಅಶೋಕ್ ಅವರೇ ಎಂದು ಸಚಿವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದೆ. ಪಕೋಡಾ ಅಂಗಡಿ ಭದ್ರಗೊಳಿಸಿ, ಚುನಾವಣೆ ನಂತರ ಉಪಯೋಗಕ್ಕೆ ಬರಲಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಮೋದಿಯವರ #Pakodanomics ಆರ್ಥಿಕತೆಯಲ್ಲಿ ರಾಜ್ಯದ ಕಂದಾಯ ಸಚಿವರಿಗೂ ಪಕೋಡಾ ಮಾರುವ ಸ್ಥಿತಿ ಬಂದಿದೆ!
— Karnataka Congress (@INCKarnataka) October 31, 2022
ಕೇಂದ್ರ ಸರ್ಕಾರ ರಾಜ್ಯದ ಪಾಲಿನ GST ಬಾಕಿ ಕೊಡಲಿಲ್ಲ, ಯೋಜನೆಗಳಿಗೆ ಅನುದಾನ ಕೊಡಲಿಲ್ಲ, ಕನ್ನಡಿಗರಿಗೆ ನಿಲ್ಲದ ಅನ್ಯಾಯಕ್ಕಾಗಿ ಈ ಸ್ಥಿತಿಯೇ @RAshokaBJP ಅವರೇ?
ಪಕೋಡಾ ಅಂಗಡಿ ಭದ್ರಗೊಳಿಸಿ, ಚುನಾವಣೆಯ ನಂತರ ಉಪಯೋಗಕ್ಕೆ ಬರಲಿದೆ! pic.twitter.com/QDAPufsvwK
ಅಷ್ಟಕ್ಕೆ ಸುಮ್ಮನಾಗದ ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಸಿಎಂ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದಿದೆ. ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ, ಅನ್ನ ಹಾಕುವುದು ಅಲ್ಲ. 20 ಕ್ಯಾಂಟೀನ್ ಗಳಿಗೆ ಬೀಗ ಹಾಕಿದ ಬೊಮ್ಮಾಯಿ ಅವರೇ, ಬಡವರ ಹಸಿವಿಗೂ ಬೀಗ ಹಾಕುವಿರಾ? ಬಡವರ ಬದುಕನ್ನೂ ಮುಚ್ಚುವಿರಾ? ಬಡವರ ಹೊಟ್ಟೆಗೆ ಹೊಡೆಯುವುದೇ ನಿಮ್ಮ ದಮ್ಮು, ತಾಕತ್ತೇ..? ಜನಪರ ಯೋಜನೆ ರೂಪಿಸುವುದಿರಲಿ, ಇರುವುದನ್ನು ಉಳಿಸದಿರುವುದೇಕೆ? ಎಂದಿದೆ.
ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ, ಅನ್ನ ಹಾಕುವುದಲ್ಲ.
— Karnataka Congress (@INCKarnataka) October 31, 2022
20 ಕ್ಯಾಂಟೀನ್ಗಳಿಗೆ ಬೀಗ ಹಾಕಿದ @BSBommai ಅವರೇ, ಬಡವರ ಹಸಿವಿಗೂ ಬೀಗ ಹಾಕುವಿರಾ? ಬಡವರ ಬದುಕನ್ನೂ ಮುಚ್ಚುವಿರಾ?
ಬಡವರ ಹೊಟ್ಟೆಗೆ ಹೊಡೆಯುವುದೇ ನಿಮ್ಮ ದಮ್ಮು, ತಾಕತ್ತೇ?
ಜನಪರ ಯೋಜನೆ ರೂಪಿಸುವುದಿರಲಿ, ಇರುವುದನ್ನು ಉಳಿಸದಿರುವುದೇಕೆ?#SayCM pic.twitter.com/Y2ZmVGOzdJ
5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದು ಮಾತಿನಲ್ಲಿ ಮುತ್ತಿನ ಹಾರ ಪೋಣಿಸುವ ಬೊಮ್ಮಾಯಿ ಅವರೇ, ನಿಮ್ಮ ರಸ್ತೆಗುಂಡಿಗಳು ಹೂಡಿಕೆದಾರರಿಗೆ ಆಕರ್ಷಣೆಯೇ? 40% ಕಮಿಷನ್ ನಿಂದಾಗಿ ಬ್ರಾಂಡ್ ಬೆಂಗಳೂರು ಕಳೆದುಹೋಗಿದೆ. ಹೂಡಿಕೆದಾರರು ಇತರ ರಾಜ್ಯದತ್ತ ಮುಖ ಮಾಡುತ್ತಿದ್ದಾರೆ. ಇಂತಹ ಅವಮಾನಕರ ಸ್ಥಿತಿ ನಿರ್ಮಿಸಿದ್ದು ನಿಮ್ಮ ಸಾಧನೆಯೇ ಎಂದು ಕಾಂಗ್ರೆಸ್ ಕುಟುಕಿದೆ.
5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದು ಮಾತಿನಲ್ಲಿ ಮುತ್ತಿನ ಹಾರ ಪೋಣಿಸುವ @BSBommai ಅವರೇ,
— Karnataka Congress (@INCKarnataka) October 31, 2022
ನಿಮ್ಮ ರಸ್ತೆಗುಂಡಿಗಳು ಹೂಡಿಕೆದಾರರಿಗೆ ಆಕರ್ಷಣೆಯೇ?#40PercentSarkara ದಿಂದಾಗಿ ಬ್ರಾಂಡ್ ಬೆಂಗಳೂರು ಕಳೆದುಹೋಗಿದೆ, ಹೂಡಿಕೆದಾರರು ಇತರ ರಾಜ್ಯದತ್ತ ಮುಖ ಮಾಡುತ್ತಿದ್ದಾರೆ.
ಇಂತಹ ಅವಮಾನಕರ ಸ್ಥಿತಿ ನಿರ್ಮಿಸಿದ್ದು ನಿಮ್ಮ ಸಾಧನೆಯೇ?
ರಸ್ತೆಗುಂಡಿಗಳಿಗೆ ದಿನಕ್ಕೊಂದು ಸಾವುಗಳಾಗುತ್ತಿವೆ. ಸರ್ಕಾರದ ಬೇಜವಾಬ್ದಾರಿತನ ಮಿತಿ ಮೀರಿದೆ. ರಸ್ತೆಗುಂಡಿಗಳಿಂದಾದ ಸಾವುಗಳನ್ನು ಸರ್ಕಾರಿ ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳು, ಸಚಿವರನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಬೇಕು. ಬೊಮ್ಮಾಯಿ ಅವರೇ, ನಿಮ್ಮ ‘ಮರಣಪಥ’ವನ್ನು ಸರಿಪಡಿಸುವ ದಮ್ಮು ತಾಕತ್ತು ತೋರಿಸುತ್ತಿಲ್ಲವೇಕೆ ಎಂದು ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದೆ.
ರಸ್ತೆಗುಂಡಿಗಳಿಗೆ ದಿನಕ್ಕೊಂದು ಸಾವುಗಳಾಗುತ್ತಿವೆ, ಸರ್ಕಾರದ ಬೇಜವಾಬ್ದಾರಿತನ ಮಿತಿ ಮೀರಿದೆ.
— Karnataka Congress (@INCKarnataka) October 31, 2022
ರಸ್ತೆಗುಂಡಿಗಳಿಂದಾದ ಸಾವುಗಳನ್ನು ಸರ್ಕಾರಿ ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳು, ಸಚಿವರನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಬೇಕು.@BSBommai ಅವರೇ, ನಿಮ್ಮ 'ಮರಣಪಥ'ವನ್ನು ಸರಿಪಡಿಸುವ ದಮ್ಮು ತಾಕತ್ತು ತೋರಿಸುತ್ತಿಲ್ಲವೇಕೆ?#SayCM pic.twitter.com/ppUQodpkPe
ಸಿನಿಮಾ ಪ್ರಿಯ ಬೊಮ್ಮಾಯಿ ಅವರು ಪ್ರತಿದಿನವೂ ಥೇಟ್ ಸಿನಿಮಾ ಶೈಲಿಯಲ್ಲಿ ದಮ್ಮು ತಾಕತ್ತಿನ ಡೈಲಾಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳೇ, ಸಿನಿಮಾ ಗುಂಗು ಬಿಟ್ಟು ವಾಸ್ತವ ಜಗತ್ತಿನಲ್ಲಿ ಕಣ್ಬಿಟ್ಟು ನೋಡಿ, ರಸ್ತೆ ಗುಂಡಿಗಳು ಕಾಣುತ್ತವೆ. ಪ್ರಾಣ ಬಿಟ್ಟವರ ಕುಟುಂಬದ ರೋಧನೆ ಕಾಣುತ್ತದೆ. ನಿಮ್ಮ ವೈಫಲ್ಯಗಳು ಕಾಣುತ್ತವೆ. ಬೆಂಗಳೂರು ಉಸ್ತುವಾರಿಗಾಗಿ ಕಿತ್ತಾಡುವ ಸಚಿವರು ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಅದೇ ಹೋರಾಟ ತೋರುತ್ತಿಲ್ಲವೇಕೆ? ಬೊಮ್ಮಾಯಿ ವರ್ಷನ್ ಅಚ್ಛೆ ದಿನಗಳ ಭಾಷಣ ಕುಟ್ಟುವ ಬೊಮ್ಮಾಯಿ ಅವರೇ, ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ನಿಮಗೆ ದಮ್ಮು ತಾಕತ್ತು ಇಲ್ಲದಾಗಿರುವುದೇಕೆ? ನಿಮ್ಮ ಪ್ರಲಾಪ ಮೈಕ್ ಮುಂದೆ ಮಾತ್ರವೇ? ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದೆ.
ಇದನ್ನೂ ಓದಿ: Kannada Rajyotsava 2022 : ಪುನೀತ್ ರಾಜ್‌ಕುಮಾರ್‌ಗೆ ನಾಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ
ಇದನ್ನೂ ಓದಿ: Sharad Pawar: ಶರದ್ ಪವಾರ್ ಆರೋಗ್ಯದಲ್ಲಿ ವ್ಯತ್ಯಯ: ದಿಢೀರ್ ಆಸ್ಪತ್ರೆಗೆ ದಾಖಲು
Congress Twitter war: Congress attacked BJP through a series of tweets