Fizza Recipe : ಓವನ್‌ ಇಲ್ಲದೆ ಮನೆಯಲ್ಲೇ ಮಾಡಿ ರುಚಿಯಾದ ಪಿಜ್ಜಾ

Fizza Recipe : ಪಿಜ್ಜಾ… ನೋಡಿದ ತಕ್ಷಣ ಬಾಯಲ್ಲಿ ನೀರು ಬರುವುದು ಸಹಜ ಅಲ್ವಾ? ಮಕ್ಕಳಾಗಿರಲಿ-ದೊಡ್ಡವರಾಗಿರಲಿ ಎಲ್ಲರೂ ಪಿಜ್ಜಾ(Fizza Recipe)ವನ್ನು ಇಷ್ಟಪಟ್ಟು ಸವಿಯುತ್ತಾರೆ. ಈ ಪಿಜ್ಜಾವನ್ನು ಹೊರಗಡೆಯಿಂದ ತರಿಸಿ ಸವಿಯುವುದಕ್ಕಿಂತ ನೀವೇ ಮನೆಯಲ್ಲಿ ಮಾಡಿ ತಿನ್ನಬಹುದು. ನೀವು ಮನೆಯಲ್ಲಿ ಮಾಡುವ ಪಿಜ್ಜಾ ತುಂಬಾನೇ ರುಚಿಯಾಗಿರುತ್ತೆ.

ನೀವು ಈ ರೆಸಿಪಿ ಫಾಲೋ ಮಾಡಿ ಪಿಜ್ಜಾ(Fizza Recipe) ಮಾಡಿದ್ದೇ ಆದರೆ ಒಂದೊಳ್ಳೆ ರುಚಿ ರುಚಿಯಾದ ಪಿಜ್ಜಾವನ್ನು ಮನೆಯವರೊಂದಿಗೆ ಸವಿಯಬಹುದು

ಹಾಗಿದ್ದರೆ ಕುಕ್ಕರ್‌ ಇಲ್ಲದೆ ಮನೆಯಲ್ಲಿಯೇ ಪಿಜ್ಜಾ(Fizza Recipe) ಮಾಡುವುದು ಹೇಗೆ? ತಿಳಿಯೋಣ ಬನ್ನಿ

ಬೇಕಾಗುವ ಸಾಮಗ್ರಿಗಳು :

11/4 ಕಪ್‌ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು
1/4 ಚಮಚ ಬೇಕಿಂಗ್‌ ಸೋಡಾ
1/2 ಚಮಚ ಸಕ್ಕರೆ
1/4 ಚಮಚ ಉಪ್ಪು
2 ಚಮಚ ಆಲೀವ್‌ ಎಣ್ಣೆ ಅಥವಾ ಸನ್‌ಪ್ಯೂರ್‌
1/3 ಕಪ್‌ ನೀರು + 2 ಚಮಚ
2 ಚಮಚ ಮೊಸರು
1/2 ಕಪ್ ಕ್ಯಾಪ್ಸಿಕಂ
1/4 ಕಪ್‌ ಈರುಳ್ಳಿ
2 ಚಮಚ ಆಲೀವ್‌
1/4 ಚಮಚ ಚಿಲ್ಲಿ ಫ್ಲೇಕ್ಸ್
3-4 ಸ್ಲೈಸ್ ಚೀಸ್

ಇದನ್ನೂ ಓದಿ : Banana Biscuits : ಮನೆಯಲ್ಲೇ ಮಾಡಿ ಬಾಳೆಹಣ್ಣಿನ ಬಿಸ್ಕೆಟ್

ಪಿಜ್ಜಾ ಸಾಸ್‌ ಮಾಡಲು ಬೇಕಾಗುವ ಸಾಮಗ್ರಿ
3 ದೊಡ್ಡ ಗಾತ್ರದ ಟೊಮೆಟೋ
ಚಿಕ್ಕ ಈರುಳ್ಳಿ 1/2
2 ಎಸಳು ಬೆಳ್ಳುಳ್ಳಿ ಎಸಳು (ಚಿಕ್ಕದಾಗಿ ಕತ್ತರಿಸಿದ್ದು)
11/2 ಚಮಚ ಆಲೀವ್‌ ಎಣ್ಣೆ
1/2ರಿಂದ 3/4 ಚಮಚ ಚಿಲ್ಲಿ ಫ್ಲೇಕ್ಸ್
1/4 ಚಮಚ ಕಾಳು ಮೆಣಸಿನ ಪುಡಿ
ರುಚಿಗೆ ತಕ್ಕ ಉಪ್ಪು
1/2 ಚಮಚ ಮಿಕ್ಸ್ಡ್ ಹರ್ಬ್ಸ್
1/2 ಚಮಚ ಮಿಕ್ಸ್ಡ್ ಹರ್ಬ್ಸ್ ಅಥವಾ ಒರೆಗ್ನೋ

ಇದನ್ನೂ ಓದಿ : Oil Free Chicken Sukka:ಎಣ್ಣೆ ಇಲ್ಲದೆ ಚಿಕನ್ ಸುಕ್ಕ ತಯಾರಿಸುವುದು ಹೇಗೆ ?

ಮಾಡುವ ವಿಧಾನ:

ಮೈದಾ ಅಥವಾ ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮಿಕ್ಸ್ ಮಾಡಿ. ಅದಕ್ಕೆ ನೀರು, ಎಣ್ಣೆ, ಮೊಸರು ಹಾಕಿ ಹಿಟ್ಟನ್ನು ಮೃದುವಾಗಿ ಕಲಸಿ. ನಂತರ ಅದನ್ನು ಕವರ್‌ ಮಾಡಿ ಒಂದು ಗಂಟೆ ಬದಿಯಲ್ಲಿ ಇಡಿ.

ಇದನ್ನೂ ಓದಿ : Rasam Recipe : ಜ್ವರದಿಂದ ಬಾಯಿ ರುಚಿ ಕೆಟ್ಟಿದೆಯೇ : ಹಾಗಿದ್ದರೆ ಈ ರೀತಿ ರಸಂ ಮಾಡಿ

ಪಿಜ್ಜಾ ಸಾಸ್‌ ಮಾಡುವುದು ಹೇಗೆ?
ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಕತ್ತರಿಸಿದ ಟೊಮೆಟೊ ಹಾಕಿ. ಟೊಮೆಟೊ ಪೂರ್ತಿಯಾಗಿ ಮೆತ್ತಗಾದ ಮೇಲೆ ಉಳಿದ ಸಾಮ್ರಗ್ರಿ ( ಈರುಳ್ಳಿ, ಬೆಳ್ಳುಳ್ಳಿ, ಚಿಲ್ಲಿ ಪ್ಲೇಕ್ಸ್‌, ಕಾಳು ಮೆಣಸಿನ ಪುಡಿ , ಉಪ್ಪು, ಒರೆಗ್ನೋ)ಗಳನ್ನು ಹಾಕಿ ಅದು ಪೇಸ್ಟ್‌ ರೀತಿಯಲ್ಲಿ ತಯಾರಾದ ಮೇಲೆ ಸ್ಟೌವ್‌ ಆಫ್‌ ಮಾಡಿ.

ಓವನ್ ಇಲ್ಲದೆ ಪಿಜ್ಜಾ ಮಾಡುವುದು ಹೇಗೆ?

ಹಿಟ್ಟನ್ನು 2-3 ಭಾಗಗಳಾಗಿ ವಿಂಗಡಿಸಿ, ನೀವು ಚಪಾತಿಗೆ ತಟ್ಟುವ ರೀತಿಯಲ್ಲಿ ಹಿಟ್ಟನ್ನು ತಟ್ಟಿ, ಆದರೆ ಹಿಟ್ಟು ಚಪಾತಿಗಿಂತ ಸ್ವಲ್ಪ ದಪ್ಪವಿರಲಿ. ನಂತರ ತವಾವನ್ನು ಬಿಸಿ ಮಾಡಲು ಒಲೆಯ ಮೇಲೆ ಇಡಿ, ತವಾ ಬಿಸಿಯಾದ ಮೇಲೆ ಅದಕ್ಕೆ ತಟ್ಟಿದ ಹಿಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ಆಗಾಗ ತಿರುಗಿಸಿ ಎರಡು ಕಡೆ ಚೆನ್ನಾಗಿ ಬೇಯಿಸಿ. ಅದರ ಎರಡೂ ಬದಿ ಬೆಂದ ಮೇಲೆ ಒಂದು ಬದಿಗೆ ಸಾಸ್‌ ಸವರಿ, ನಂತರ ಕತ್ತರಿಸಿಟ್ಟ ತರಕಾರಿ ಹಾಕಿ, ಚೀಸ್‌ ಸ್ಪ್ರೆಡ್ ಮಾಡಿ, ಚೀಸ್‌ ಮೆಲ್ಟ್ ಆಗುವವರೆಗೆ ಬೇಯಿಸಿ. ನಂತರ ಬಿಸಿ-ಬಿಸಿ ಇರುವಾಗಲೇ ಸರ್ವ್‌ ಮಾಡಿ.

ಸೂಚನೆ : ತವಾದಲ್ಲಿ ಪಿಜ್ಜಾ ಮಾಡಿದರೆ ನೀವು ಓವನ್‌ನಲ್ಲಿ ಮಾಡಿದಷ್ಟೇ ಮೃದುವಾಗಿರುತ್ತೆ, ಬೇಸ್‌ ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಿ, ಆಗ ಬೇಸ್ ಮೃದುವಾಗಿರುತ್ತೆ.

Comments are closed.