ರಾಜ್ಯ ಸರಕಾರದಿಂದ ಪಂಚಮಸಾಲಿ ಸಮುದಾಯಕ್ಕೆ ಕೊಡುಗೆ : ಶ್ರೀ ವಚನಾನಂದ ಸ್ವಾಮೀಜಿ ವಿಶ್ವಾಸ

ಬೆಂಗಳೂರು : ರಾಜ್ಯದಾದ್ಯಂತ ಚುನಾವಣೆಗೆ ಬೇಕಾಗುವಂತಹ ತಯಾರಿ ಮಾಡುವುದರಲ್ಲಿ ಪ್ರತಿ ಪಕ್ಷದವರೂ ಬ್ಯುಸಿಯಾಗಿದ್ದಾರೆ. ಅದರಲ್ಲೂ ಯಾವ ಯಾವ ಕ್ಷೇತ್ರಕ್ಕೆ ಯಾರು ಎನ್ನುವ ಪಟ್ಟಿ ಕೂಡ ಬಿಡುಗಡೆಯಾಗಲಿದ್ದು, ಹರಿಹರ ಪಂಚಮಸಾಲಿ ಪೀಠದ ಸತತ ಹೋರಾಟದ ಫಲವಾಗಿ ನಾಳೆ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರಕಾರದಿಂದ ಅತ್ಯುತ್ತಮ ಕೊಡುಗೆ ಘೋಷಣೆಯಾಗುವ ವಿಶ್ವಾಸವಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮೀಜಿಗಳು (Shri Vachanananda Swamiji) ಎಂದು ಹೇಳಿದರು.

ಇಂದು (ಮಾರ್ಚ್‌ 23) ಗುರುವಾರದಂದು ಬೆಂಗಳೂರು ನಗರದ ಶ್ವಾಸ ಯೋಗ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎನ್ನುವುದರ ಹೋರಾಟದ ಹಿಂದೆ 3 ದಶಕಗಳ ಇತಿಹಾಸವಿದೆ. ಹಂತಹಂತಗಳಲ್ಲಿ ನಡೆಸಿದ ಹೋರಾಟ ಅಂತಿಮ ಹಂತಕ್ಕೆ ಬಂದು ಸೇರಿದೆ. 2 ಡಿ ಹಾಗೂ 2 ಸಿ ಮೀಸಲಾತಿಯನ್ನು ಘೋಷಣೆ ಮಾಡಿದ್ದನ್ನು ನಾವು ಸ್ವಾಗತಿಸುವುದಾಗಲಿ ಅಥವಾ ತಿರಸ್ಕರಿಸುವುದಾಗಲಿ ಮಾಡಿರಲಿಲ್ಲ.

ಈ ಘೋಷಣೆಯಲ್ಲಿ ಸ್ಪಷ್ಟತೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದೇವು. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಹಿಂದುಳಿದ ಆಯೋಗದ ಮಧ್ಯಂತರ ವರದಿಯನ್ನು ಪಡೆದುಕೊಂಡಿದೆ. ಮಧ್ಯಂತರ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಪ್ರವರ್ಗ ಯಾವುದಾರೂ ಇರಲಿ ಆದರೆ ನಮ್ಮ ಸಮುದಾಯಕ್ಕೆ ಮೀಸಲಾತಿ ದೊರೆಯುವುದು ಬಹಳ ಅಗತ್ಯ. ಅದಕ್ಕೆ ಬೇಕಾದಂತಹ ಪೂರಕ ವಾತಾವರಣ ಈಗ ಸಿದ್ದವಾಗಿದೆ. ಆಯೋಗದ ಮಧ್ಯಂತರ ವರದಿ ಹಾಗೂ ಇಂದಿನ ಹೈಕೋರ್ಟ್‌ನಲ್ಲಿನ ಪಿಐಎಲ್‌ ಕುರಿತ ತೀರ್ಪು ಬಹುದೊಡ್ಡ ಬೆಳವಣಿಗೆಗಳಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Karnataka MLA Election 2023 : ಟಿಕೆಟ್‌ಗಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಪೈಪೋಟಿ

ಇದನ್ನೂ ಓದಿ : Rahul Gandhi sentenced to jail: ಮೋದಿ ಉಪನಾಮ ಮಾನನಷ್ಟ ಪ್ರಕರಣ: ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ

ಪಂಚಮಸಾಲಿ ಮೀಸಲಾತಿ ಹೋರಾಟದ ಕಾನೂನಾತ್ಮಕ ಹೋರಾಟದ ಮುಂಚೂಣಿಯಲ್ಲಿರುವ ವಕೀಲರಾದ ಬಿ.ಎಸ್‌ ಪಾಟೀಲ್‌ ರವರು ಮಾತನಾಡಿ, ಮಧ್ಯಂತರ ವರದಿಯ ನಂತರ ಆಯೋಗ ಮತ್ತೊಮ್ಮೆ ದಾಖಲೆಗಳ ಸಲ್ಲಿಕೆಗೆ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ನಾವು 1871 ರಿಂದ ಇದುವರೆಗಿನ ಸುಮಾರು 900 ಪುಟಗಳಷ್ಟು ದಾಖಲೆಯನ್ನು ಸಲ್ಲಿಸಿದ್ದೇವೆ. 1871 ರ ವರದಿಯಲ್ಲಿ ಪಂಚಮಸಾಲಿ ಸಮುದಾಯವನ್ನು ಶೂದ್ರರ ಗುಂಪಿನಲ್ಲಿ ಸೇರಿಸಿದ್ದರ ದಾಖಲೆಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಈ ಹಿನ್ನಲೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ನೇತೃತ್ವದಲ್ಲಿ ನಡೆದಂತಹ ಕಾನೂನಾತ್ಮಕ ಹೋರಾಟಕ್ಕೆ ಜಯ ಸಿಗುವ ಸುಸಂದರ್ಭ ಬಂದಿರುತ್ತದೆ ಎಂದು ಹೇಳಿದ್ದಾರೆ.

Contribution from State Government to Panchamasali Community : Shri Vachanananda Swamiji Vishwas

Comments are closed.