Nothing Ear (2): ವಿಶಿಷ್ಟ ವಿನ್ಯಾಸ ಮತ್ತು ಸ್ಮಾರ್ಟ್‌ ಕೇಸ್‌ನೊಂದಿಗೆ ನಥಿಂಗ್‌ ಇಯರ್‌ (2) ವೈರ್‌ಲೆಸ್‌ ಬಡ್‌ ಬಿಡುಗಡೆ

ವಿಶಿಷ್ಟ ವಿನ್ಯಾಸ ಮತ್ತು ಸ್ಮಾರ್ಟ್ ಕವರ್ ಕೇಸ್‌ನೊಂದಿಗೆ, ನಥಿಂಗ್ ಭಾರತದಲ್ಲಿ ನಥಿಂಗ್ ಇಯರ್ (2) (Nothing Ear (2)) ವೈರ್‌ಲೆಸ್ ಬಡ್‌ಗಳನ್ನು ಬಿಡುಗಡೆ ಮಾಡಿದೆ. ಈ ಇಯರ್‌ ಬಡ್‌ಗಳು LHDC 5.0 ಬ್ಲೂಟೂತ್, ANC ಬೆಂಬಲ ಮತ್ತು ಸೆಮಿ–ಟ್ರನ್ಸ್‌ಫರಂಟ್‌ ಡಿಸೈನ್‌ನ್‌ ಹೊಂದಿದೆ. ನಥಿಂಗ್ ಇಯರ್ (1) ನ ಯಶಸ್ಸಿನಂತೆ ಕಂಪನಿಯು ಈ ಇಯರ್‌ಬಡ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಇದುವರೆಗೆ ತನ್ನ ಮೊದಲ ಇಯರ್‌ಬಡ್‌ಗಳನ್ನು 6 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಅಂದರೆ ಮಾರಾಟವಾಗಿದೆ. ಈ ಇಯರ್‌ಬಡ್‌ನ ವೈಶಿಷ್ಟ್ಯ, ಬೆಲೆ ಮತ್ತು ಲಭ್ಯತೆ ಇಲ್ಲಿದೆ ಓದಿ.

ವೈಶಿಷ್ಟ್ಯಗಳು :
ನಥಿಂಗ್ ಇಯರ್ (2) LHDC 5.0 ತಂತ್ರಜ್ಞಾನದ ಬೆಂಬಲವನ್ನು ಪಡೆದುಕೊಂಡಿದೆ. ಇದರಿಂದ ಹೆಚ್ಚಿನ ರೆಸಲ್ಯೂಶನ್ ಆಡಿಯೊವನ್ನು ಕೇಳಬಹುದು. ಕರೆ ಮಾಡಲು ಇಯರ್‌ಬಡ್‌ಗಳಲ್ಲಿ ನಥಿಂಗ್‌ ಕ್ಲಿಯರ್‌ ವಾಯ್ಸ್‌ ಟೆಕ್ನಾಲಜಿಯನ್ನು ಬಳಸಲಾಗಿದೆ. ಇದರಿಂದ ಉತ್ತಮ ಕರೆ ಮಾಡುವ ಅನುಭವವನ್ನು ನೀಡುತ್ತದೆ. ಕಂಪನಿಯು ಎರಡೂ ಇಯರ್‌ಬಡ್‌ಗಳಲ್ಲಿ 3 ಮೈಕ್ರೊಫೋನ್‌ಗಳನ್ನು ನೀಡಿದೆ. ನಥಿಂಗ್ ಇಯರ್ 2 ಇಯರ್‌ಫೋನ್‌ಗಳು ಪೂರ್ಣ ಚಾರ್ಜ್‌ನಲ್ಲಿ 36 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ನೀಡುತ್ತದೆ. ಅವುಗಳನ್ನು ವೇಗದ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಿದರೆ, ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ 8 ಗಂಟೆಗಳ ಕಾಲ ಬಳಸಬಹುದು. ನಥಿಂಗ್ ಇಯರ್ (2) ಬಡ್‌ಗಳು ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತವೆ ಮತ್ತು 2.5W ವರೆಗೆ ಬೆಂಬಲದೊಂದಿಗೆ ಬರುತ್ತವೆ. ಈ ಇಯರ್‌ಬಡ್‌ಗಳು ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತವೆ ಆದರೆ ಇದು ನಥಿಂಗ್‌ ಫೋನ್ 1 ಕ್ಕೆ ಮಾತ್ರ ಸೀಮಿತವಾಗಿದೆ.

ಇದನ್ನೂ ಓದಿ : Tata Motors Price Hike: ಏಪ್ರಿಲ್ 1 ರಿಂದ ಟಾಟಾ ವಾಹನಗಳ ಬೆಲೆ ಏರಿಕೆ

ಬೆಲೆ ಮತ್ತು ಲಭ್ಯತೆ :
ನಥಿಂಗ್ ಇಯರ್ (2) ಅನ್ನು 9,999 ರೂ. ಕ್ಕೆ ಭಾರತದಲ್ಲಿ ಖರೀದಿಸಬಹುದು. ಇದನ್ನು ಮಾರ್ಚ್ 28 ರ ನಂತರ ನೀವು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್, ಮೈಂತ್ರಾ ಮತ್ತು ಆಯ್ದ ಸ್ಟೋರ್‌ಗಳ ಮೂಲಕ ಈ ಇಯರ್‌ಬಡ್‌ಗಳನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಈ ಇಯರ್‌ಬಡ್‌ಗಳಲ್ಲಿ ಆಕ್ಟೀವ್‌ ನಾಯ್ಸ್‌ ರಿಡಕ್ಷನ್‌ನೊಂದಿಗೆ ಡ್ಯುಯಲ್ ಸಂಪರ್ಕ ಬೆಂಬಲವನ್ನು ಪಡೆಯಬಹುದು. ಇದು ಡ್ಯೂಯಲ್‌ ಕನೆಕ್ಷನ್‌ ಅನ್ನು ಬೆಂಬಲಿಸುವುದರ ಜೊತೆಗೆ, ಎರಡು ಸಾಧನಗಳ ನಡುವೆ ಸುಲಭವಾಗಿ ಬದಲಾಯಿಸಬಹುದಾಗಿದೆ. ಈ ಇಯರ್‌ ಬಡ್‌ಗಳನ್ನು EMI ಮುಖಾಂತರವೂ ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್‌ ಮಾಸಿಕ EMI ಆಯ್ಕೆಯನ್ನು ನೀಡುತ್ತದೆ. 352 ರೂ.ಗಳ EMI ನಲ್ಲಿ ಮನೆಗೆ ತರಬಹುದು.

ಇದನ್ನೂ ಓದಿ : US Tourist Visa : ಈಗ ಅಮೇರಿಕಾದಲ್ಲಿ ಪ್ರವಾಸಿ ವೀಸಾ ಮತ್ತು ಬಿಸಿನೆಸ್‌ ವೀಸಾದಲ್ಲಿ ಉದ್ಯೋಗ ಹುಡುಕಬಹುದು; ಅನುಮತಿ ನೀಡಿದ USCIS

(Nothing Ear (2) launched. Know the price and specifications)

Comments are closed.