CT Ravi : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ.ರವಿಗೆ ಕೋಕ್‌ : ಕುತೂಹಲ ಮೂಡಿಸಿದ ಹೈಕಮಾಂಡ್‌ ನಡೆ

ಬೆಂಗಳೂರು : ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ (CT Ravi) ಬದಲಾವಣೆಯ ಮಾತು ಕೇಳಿಬಂದಿತ್ತು. ಈ ನಡುವಲ್ಲೇ ರಾಜ್ಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ.ರವಿ ಅವರಿಗೆ ಕೋಕ್‌ ನೀಡಲಾಗಿದೆ. ರಾಜ್ಯದಲ್ಲಿ ಎರಡು ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎಂದು ಖುದ್ದು ಅಮಿತ್‌ ಶಾ ಹೇಳಿದ್ದರು. ಇದರ ಬೆನ್ನಲ್ಲೇ ನಡೆದಿರುವ ಬದಲಾವಣೆ ತೀವ್ರ ಕುತೂಹಲ ಮೂಡಿಸಿದೆ.

ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಕೇಂದ್ರೀಯ ಸಮಿತಿಯಲ್ಲಿ ಹಲವು ಬದಲಾವಣೆಯನ್ನು ಮಾಡಲಾಗಿದೆ. ಒಟ್ಟು 13 ಮಂದಿ ಉಪಾಧ್ಯಕ್ಷರನ್ನು, 8 ಮಂದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದ್ದು, ಸಮಿತಿಯಲ್ಲಿ ಕರ್ನಾಟಕದ ಬಿ.ಎಲ್.ಸಂತೋಷ್‌ ಅವರನ್ನು ಹೊರತು ಪಡಿಸಿ, ಉಳಿದ ಯಾವ ನಾಯಕರಿಗೂ ಕೂಡ ಅವಕಾಶವನ್ನು ನೀಡಿಲ್ಲ.

ಇದನ್ನೂ ಓದಿ : Udupi College Toilet Video Case : ಉಡುಪಿ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಪ್ರಕರಣ : ಖುಷ್ಬು ಸುಂದರ್ ಮಹತ್ವದ ಮಾಹಿತಿ

ಚಿಕ್ಕಮಗಳೂರು ಶಾಸಕರಾಗಿದ್ದ ಸಿ.ಟಿ.ರವಿ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿ ಸೋಲಿನ ಬೆನ್ನಲ್ಲೇ ಹಲವು ಬದಲಾವಣೆಗಳು ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಸಿ.ಟಿ.ರವಿ ಅವರ ಹೆಸರು ಕೇಳಿಬಂದಿತ್ತು. ಇದೇ ಕಾರಣಕ್ಕೆ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೋಕ್‌ ನೀಡಲಾಗಿದೆಯಾ ಅನ್ನೋದು ಕುತೂಲಹಕ್ಕೆ ಕಾರಣವಾಗಿದೆ.

CT Ravi out from BJP National General Secretary post

Comments are closed.