ಭಾನುವಾರ, ಏಪ್ರಿಲ್ 27, 2025
Homekarnatakaದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಕಾಂಗ್ರೆಸ್‌ನಿಂದ ರಮಾನಾಥ ರೈ, ಹರೀಶ್‌ ಕುಮಾರ್‌ ಕಣಕ್ಕೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಕಾಂಗ್ರೆಸ್‌ನಿಂದ ರಮಾನಾಥ ರೈ, ಹರೀಶ್‌ ಕುಮಾರ್‌ ಕಣಕ್ಕೆ

- Advertisement -

ಲೋಕಸಭಾ ಚುನಾವಣೆಗೆ ( lok sabha Election 2024) ಕರಾವಳಿಯಲ್ಲಿ ಕಾಂಗ್ರೆಸ್‌ ಸಜ್ಜಾಗುತ್ತಿದೆ. ಮಂಗಳೂರಿನಲ್ಲಿ ಸಚಿವರಾದ ಮಧು ಬಂಗಾರಪ್ಪ (Madhu Bangarappa)  ಹಾಗೂ ದಿನೇಶ್‌ ಗುಂಡೂರಾವ್‌ (Dinesh Gundurao) ಅವರು ಕಾಂಗ್ರೆಸ್‌ ಕಾರ್ಯಕರ್ತರು (congress Workers) ಹಾಗೂ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ವೇಳೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ (Ramanath Rai) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ (Harish Kumar ಪರ ಒಲವು ವ್ಯಕ್ತವಾಗಿದೆ.

dakshina kannada lok sabha constituency Ramanath Rai vs Harish Kumar from Congress Candidates
Image Credit to Original Source

ಕಳೆದ ಎರಡೂವರೆ ಮೂರು ದಶಕಗಳಿಂದಲೂ ಕೈ ತಪ್ಪಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನ ಮರಳು ಪಡೆಯಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕಳೆದ ಬಾರಿ ಮಿಥುನ್‌ ರೈ ಕಣಕ್ಕೆ ಇಳಿದಿದ್ದರೂ ಕೂಡ ಕಾಂಗ್ರೆಸ್‌ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಆದರೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹೊಸ ಹುಮ್ಮಸ್ಸು ತರಿಸಿದೆ.

ಲೋಕಸಭಾ ಚುನಾವಣೆಗೆ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ವೀಕ್ಷಕರಾದ ಮಧು ಬಂಗಾರಪ್ಪ ಅವರು ಮಂಗಳೂರು ನಗರದ ಕದ್ರಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರಿಂದ ಅಭಿಪ್ರಾಯ ವನ್ನು ಸಂಗ್ರಹಿಸಿದ್ದಾರೆ. ರಾತ್ರಿಯ ವರೆಗೂ ಮಧು ಬಂಗಾರಪ್ಪ ಅಭಿಪ್ರಾಯವನ್ನು ಆಲಿಸಿದ್ದಾರೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ 2024: ಉಡುಪಿ ಚಿಕ್ಕಮಗಳೂರು ಕ್ಷೇತ್ರ, ಬಿಜೆಪಿಗೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್‌ಗೆ ಜಯಪ್ರಕಾಶ್‌ ಹೆಗ್ಡೆ ಫಿಕ್ಸ್‌

ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಹಾಗೂ ಮಾಜಿ ಸಚಿವ ಬಿ ರಮಾನಾಥ ರೈ ಅವರನ್ನೇ ಕಣಕ್ಕೆ ಇಳಿಸಬೇಕೆಂಬ ಕುರಿತು ಒಲವು ವ್ಯಕ್ತಪಡಿಸಿದ್ದಾರೆ. ಅದ್ರಲ್ಲೂ ಕಳೆದ ಕೆಲವು ವರ್ಷಗಳಿಂದಲೂ ಜಿಲ್ಲಾಧ್ಯಕ್ಷ ರಾಗಿರುವ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರ ಹೆಸರು ಪ್ರಸ್ತಾಪ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಜಿಲ್ಲಾಧ್ಯಕ್ಷರಾದ ನಂತರದಲ್ಲಿ ಹರೀಶ್‌ ಕುಮಾರ್‌ ಅವರು ವಿಧಾನ ಪರಿಷತ್‌ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಪಕ್ಷದ ಕಾರ್ಯಕರ್ತರು, ನಾಯಕರನ್ನು ಒಗ್ಗೂಡಿಸಿಕೊಂಡು ಹೋಗುತ್ತಾರೆ ಅನ್ನೋ ಹರೀಶ್‌ ಕುಮಾರ್‌ ಅವರ ಪರ ಒಲವು ವ್ಯಕ್ತವಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಈ ಬಾರಿ ಕಾರ್ಯಕರ್ತರನ್ನು ಸೆಳೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಪುಷ್ಪಾ, ರೂಪಾ, ವೀಣಾ, ಸೌಮ್ಯ, ರಮ್ಯ, ಕುಸುಮಾ : ಕಾಂಗ್ರೆಸ್ ಲೋಕಸಭಾ ಟಿಕೇಟ್ ಗೆ 15 ಮಹಿಳಾ ಮಣಿಗಳ ಲಾಬಿ

ಇನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ಶಾಸಕರಾಗಿ ಆಗಿದ್ದು, ಸಚಿವರಾಗಿಯೂ ಸೇವೆ ಸಲ್ಲಿಸಿರುವ ಮಾಜಿ ಸಚಿವ ರಮಾನಾಥ ರೈ ಅವರ ಬಗ್ಗೆಯೂ ಕಾರ್ಯಕರ್ತರು ಒಲವು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕರು ಕೂಡ ಈ ಎರಡೂ ನಾಯಕರ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ. ಹರೀಶ್ ಕುಮಾರ್ ಹಾಗೂ ರಮನಾಥ ರೈ ಪ್ರಬಲ ಅಭ್ಯರ್ಥಿಗಳಾಗಿ ಹೊರ ಹೊಮ್ಮಿದ್ದಾರೆ.

dakshina kannada lok sabha constituency Ramanath Rai vs Harish Kumar from Congress Candidates
Image Credit to Original Source

ಉಡುಪಿ – ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಬಂಟ ಸಮುದಾಯದ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸುವುದು ಬಹುತೇಕ ಖಚಿತ. ಆ ನಿಟ್ಟಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಹರೀಶ್‌ ಕುಮಾರ್‌ ಪರ ಒಲವು ವ್ಯಕ್ತಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : 2019 ರಿಂದ 23 ರ ಅವಧಿಯ ಅಕ್ರಮ: ಬಿಜೆಪಿಗೆ ಬಿಬಿಎಂಪಿ ಕಂಟಕ

ಬಿಜೆಪಿಯಿಂದ ನಳಿನ್‌ ಕುಮಾರ್‌ ಸ್ಪರ್ಧೆ ಮಾಡಿದ್ರೆ, ಕಾಂಗ್ರೆಸ್‌ ಬಿಲ್ಲವರನ್ನು ಬಹುತೇಕ ಕಣಕ್ಕೆ ಇಳಿಸಲಿದೆ. ಬೆಳ್ತಂಗಡಿ, ಬಂಟ್ವಾಳ, ಮೂಡಬಿದ್ರೆ, ಮಂಗಳೂರು ನಗರ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವ ಸಮುದಾಯದ ಮತಗಳಿವೆ. ಸುಳ್ಯ, ಪುತ್ತೂರು ಭಾಗದಲ್ಲಿ ಸಂಸದ ನಳಿನ್‌ ಕುಮಾರ್‌ ಅವರ ವಿರುದ್ದ ಅಲೆ ಎದ್ದಿದೆ. ಬಿಲ್ಲವರ ಟಿಕೆಟ್‌ ನೀಡುವ ಮೂಲಕ ಇದನ್ನು ಚುನಾವಣೆಯಲ್ಲಿ ಅಸ್ತ್ರವಾಗಿಸಲು ಕಾಂಗ್ರೆಸ್‌ ಸಜ್ಜಾದಂತಿದೆ.

dakshina kannada lok sabha constituency : Ramanath Rai vs Harish Kumar from Congress Candidates

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular