Digital Advocacy: ಡಿಜಿಟಲೀಕರಣ ತಂತ್ರಜ್ಞಾನದ ಕಾನೂನು ವ್ಯವಸ್ಥೆಯತ್ತ ವಕೀಲರು

Digital Advocacy : ಡಿಜಿಟಲೀಕರಣ ತಂತ್ರಜ್ಞಾನದ ಕಾನೂನು ವ್ಯವಸ್ಥೆಯ ಕಡೆಗೆ ವಕೀಲರು ಸಾಗುತ್ತಿದ್ದು, ಇ ಕೋರ್ಟ್‌ (E-Courst) ಮಹತ್ವದ ಕುರಿತು ಉಡುಪಿಯ ವಕೀಲರಾದ ಆರೂರು ಸುಕೇಶ್‌ ಶೆಟ್ಟಿ (Aroor Sukesh Shetty) ಅವರು ಲೇಖನವನ್ನು ಬರೆದಿದ್ದಾರೆ.

Digital Advocacy : ಇತ್ತೀಚಿನ ದಿನಗಳಲ್ಲಿ ವಕೀಲರು ಡಿಜಿಟಲೀಕರಣ ತಂತ್ರಜ್ಞಾನ (Digital Technology) ಬದಲಾವಣೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕಾನೂನು ಪಾಲನೆ ಮಾಡುವುದು ಬಹುಮುಖ್ಯವಾಗಿದೆ. ಬದಲಾದ ಆಧುನೀಕತೆಯಿಂದ ಕಾನೂನು ವ್ಯವಸ್ಥೆಯು ಡಿಜಿಟಲೀಕರಣ ತಂತ್ರಜ್ಞಾನಕ್ಕೆ ಕಾಲಿಟ್ಟಿದ್ದು ನ್ಯಾಯವನ್ನು ತ್ವರಿತವಾಗಿ ಜನರಿಗೆ ದೊರಕಲು ಸುಗುಮವಾಗಿ ಅನುಕೂಲ ಮಾಡಿಕೊಡುತ್ತದೆ.  ಡಿಜಿಟಲೀಕರಣ ತಂತ್ರಜ್ಞಾನದ ಕಾನೂನು ವ್ಯವಸ್ಥೆಯ ಕಡೆಗೆ ವಕೀಲರು ಸಾಗುತ್ತಿದ್ದು, ಇ ಕೋರ್ಟ್‌ (E-Courst) ಮಹತ್ವದ ಕುರಿತು ಉಡುಪಿಯ ವಕೀಲರಾದ ಆರೂರು ಸುಕೇಶ್‌ ಶೆಟ್ಟಿ (Aroor Sukesh Shetty) ಅವರು ಬರೆದಿರುವ ಲೇಖನ ನಿಮಗಾಗಿ.

ಡಿಜಿಟಲ್ ಕ್ರಾಂತಿಯಿಂದ ಕಾನೂನು ಪ್ರಕ್ರಿಯೆ ವೇಗವಾಗಿ ವಿಲೇವಾರಿ ಆಗುತ್ತಿದ್ದು, ವಕೀಲರಿಗೆ ಕಾರ್ಯನಿರ್ವಹಿಸಲು ಹೊಸ ವಿಷಯ ಗಳನ್ನು ಪಡೆಯಲು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಲು ತುಂಬಾ ಸಹಕಾರಿಯಾಗಿದೆ. ನ್ಯಾಯಾಲಯಗಳ ಡಿಜಿಟಲೀಕರಣವು ಇಕೋರ್ಟ್ಸ್ ಪ್ರೊಜೆಕ್ಟ್ ಅಡಿಯಲ್ಲಿ ಆನ್‌ಲೈನ್ ವೇದಿಕೆಯಾಗಿ ರಚಿಸಲಾಗಿದೆ.

Digital Advocacy : Advocacy towards the legal system of digitization technology writern by Aroor Sukesh shetty
Image Credit to Original Source

ಇದು ದೇಶದ ಎಲ್ಲಾ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಪ್ರಕ್ರಿಯೆಗಳು ಮತ್ತು ಆದೇಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತಾರೆ. ಇಕೋರ್ಟ್ಸ್ ಯೋಜನೆಯನ್ನು ಇ-ಸಮಿತಿ ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಮತ್ತು ಜಸ್ಟೀಸ್ ಇಲಾಖೆಯ ಸಹಯೋಗದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ.

ನ್ಯಾಯಾಲಯದ ದಾಖಲೆಗಳ ಡಿಜಿಟಲೀಕರಣವು ಆಯಾ ಹೈಕೋರ್ಟ್‌ಗಳು ಮತ್ತು ಭಾರತದ ಸುಪ್ರೀಂ ಕೋರ್ಟ್ ಡೊಮೇನ್‌ಗೆ ಒಳಪಡಿಸುವ ಆಡಳಿತಾತ್ಮಕ ವಿಷಯವಾಗಿದೆ. ಇದರಲ್ಲಿ ವಕೀಲರು ಪ್ರಕರಣದ ಸ್ಥಿತಿಯ ಮಾಹಿತಿಯನ್ನು ಪ್ರವೇಶಿಸಿ ಕಕ್ಷಿಗಾರರಿಗೆ ಕಾನೂನು ನೆರವು ನೀಡಲು ಮತ್ತು ವಿಷಯಗಳ ಬಗ್ಗೆ ಅಳವಾಗಿ ಗಟ್ಟಿಯಾಗಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : 10 ವರ್ಷಗಳಿಂದ ಆಧಾರ್​ ಕಾರ್ಡ್ ಮಾಹಿತಿ ಅಪ್​ಡೇಟ್​ ಮಾಡಿಲ್ಲವೇ..? ಡಿ.14ರ ಒಳಗೆ ಉಚಿತವಾಗಿ ಮಾಡಿ

ಇಲ್ಲಿ ಎಲೆಕ್ಟ್ರಾನಿಕ್ ಕೇಸ್ ಮ್ಯಾನೇಜ್‌ಮೆಂಟ್ ಟೂಲ್‌ಗಳನ್ನು(electronic case management tools for advocates)  ವಕೀಲರಿಗಾಗಿ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ರಚಿಸಲಾಗಿದೆ. ಇ-ಕೋರ್ಟ್ಸ್‌ ಪ್ರಾಜೆಕ್ಟ ( (E- Courts Projects) ಭಾಗವಾಗಿ ಎಸ್ಎಂಎಸ್, ಇ-ಮೇಲ್ ಮೂಲಕ ಪ್ರಕರಣದ ಮಾಹಿತಿಯನ್ನು ವಕೀಲರಿಗೆ ಒದಗಿಸಲು ಪ್ಲಾಟ್ ಫಾರ್ಮ್‌ಗಳನ್ನು ರಚಿಸಲಾಗಿದೆ. ವರ್ಚುವಲ್ ವಿಚಾರಣೆ ವಿಡಿಯೋ ಕಾನ್ಪೆ್ಪರೆನ್ಸ್ ಉಪಕರಣವನ್ನು ಎಲ್ಲಾ ನ್ಯಾಯಾಲಯಗಳಿಗೆ ತಂದಿದ್ದು, ಜೈಲ್‌ಗಳಲ್ಲೂ ಸಕ್ರಿಯ ಗೊಳಿಸಿದೆ.

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ

ವಿ.ಸಿ ಸೌಲಭ್ಯಗಳಿಂದ ಜನರಿಗೆ ನ್ಯಾಯಾಲಯವು ವಕೀಲರ ಮುಖಾಂತರ ತುಂಬಾ ಹತ್ತಿರವಾಗಿದೆ. ಇ-ಕೋರ್ಟ್‌ಗಳ ಉದ್ದೇಶವು ಸಮಾಜದ ಪ್ರತಿಯೊಂದು ವರ್ಗಕ್ಕೂ ನ್ಯಾಯವನ್ನು ಹೆಚ್ಚು ಪ್ರವೇಶಿಸುವಂತೆ ಮಾಡುವುದು. ನ್ಯಾಯಾಲಯದ ಕೋಣೆಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ಕಾಗದದ ಬಳಕೆಯಲ್ಲಿ ಇಳಿಕೆಯಾಗುತ್ತಿದೆ.

Digital Advocacy : Advocacy towards the legal system of digitization technology writern by Aroor Sukesh shetty
Image Credit to Original Source

ವಿದ್ಯುನ್ಮಾನವಾಗಿ ಮಾಹಿತಿಯನ್ನು ಪಡೆಯುವ ಸೇವೆಯಿಂದ ನ್ಯಾಯಲಯದ ದಾಖಲೆ ಪ್ರತಿಗಳನ್ನು ಪಡೆಯಲು ವಕೀಲರನ್ನು ಶಕ್ತಗೊಳಿಸುತ್ತದೆ. ನ್ಯಾಯಾಲಯಕ್ಕೆ ಅದರ ಕಾಗದದ ಹಾಳೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇ-ಕೋರ್ಟ್‌ನ ಪ್ರಾಜೆಕ್ಟ್ ಬಹುಭಾಷಾದಲ್ಲಿ ಸೇವೆಗಳಿದ್ದು ಪ್ರಕರಣದ ಇ-ಫೈಲಿಂಗ್‌ಗೆ ನ್ಯಾಯಾಲಯದ ಶುಲ್ಕಗಳು, ದಂಡಗಳನ್ನು ಎಲೆಕ್ಟಾçನಿಕ್ ಪಾವತಿಯಿಂದ ನೇರವಾಗಿ ಪಾವತಿಸಲಾಗುತ್ತದೆ.

ಇದನ್ನೂ ಓದಿ : UPI ಪಾವತಿಯಲ್ಲಿ ಬಾರೀ ಬದಲಾವಣೆ : ಮೋದಿ ಸರಕಾರದಿಂದ ಹೊಸ ರೂಲ್ಸ್‌ ಜಾರಿ

ಇ-ಸಹಿ, ಇ-ಪಾವತಿ ವೈಶಿಷ್ಟಗಳೊಂದಿಗೆ ಇ-ಫೈಲಿಂಗ್ ಸಿಸ್ಟಮ್ ಆವೃತ್ತಿಯನ್ನು ಹೊರತಂದಿದೆ. ತೀರ್ಪುಗಳ ಪ್ರತಿಗಳನ್ನು ಉಚಿತವಾಗಿ ಒದಗಿಸಲು ಜಡ್ಜ್ಮೆಂಟ್ ಸರ್ಚ್ ಪೋರ್ಟಲ್‌ನ್ನು ಪರಿಚಯಿಸಿದೆ. ಡಿಜಿಟಲೀಕರಣವು ಯುವ ವಕೀಲರಿಗೆ ಕಾನೂನಿನ ಬಗ್ಗೆ ಅಧ್ಯಯಿಸಲು ಉತ್ತೇಜನ ನೀಡುತ್ತಿದ್ದು, ಅದನ್ನು ಹೆಚ್ಚಾಗಿ ಅಳವಡಿಸಿಕೊಂಡು ಸದುಪಯೋಗ ಪಡಿಸಿಕೊಂಡಾಗ ವಕೀಲರರಿಂದ ಉತ್ತಮ ನಾಗರೀಕ ಸಮಾಜ ಬೆಳೆಯಲು ಸಹಾಯ ಮಾಡುತ್ತದೆ.

Digital Advocacy : Advocacy towards the legal system of digitization technology writern by Aroor Sukesh shetty

Comments are closed.