karnataka congress president dk shivakumar : ಅಕ್ರಮ ಹಣ ವರ್ಗಾವಣೆ ಪ್ರಕರಣ : ಡಿ.ಕೆ ಶಿವಕುಮಾರ್​ ವಿರುದ್ಧ ಹೊಸ ಚಾರ್ಜ್​ಶೀಟ್​ ಸಲ್ಲಿಕೆ

ಬೆಂಗಳೂರು : karnataka congress president dk shivakumar : ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಜಾರಿ ನಿರ್ದೇಶನಾಲಯ ಹೊಸ ಶಾಕ್​ ನೀಡಿದೆ. 2019ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಬಂಧನಕ್ಕೊಳಗಾಗಿ ಸಧ್ಯ ಜಾಮೀನಿನ ಮೇಲೆ ಹೊರಗಿರುವ ಡಿ.ಕೆ ಶಿವಕುಮಾರ್​ ವಿರುದ್ಧ ಜಾರಿ ನಿರ್ದೇಶನಾಲಯವು ಹೊಸದೊಂದು ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದೆ. ಇದರಿಂದ ಡಿ.ಕೆ ಶಿವಕುಮಾರ್​ಗೆ ಮತ್ತೆ ಇಡಿ ಉರುಳು ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.


ಗುಜರಾತ್​ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗುಜರಾತ್​ ಕಾಂಗ್ರೆಸ್​ ಶಾಸಕರನ್ನು ಡಿ.ಕೆ ಶಿವಕುಮಾರ್​​ ರೆಸಾರ್ಟ್​ನಲ್ಲಿರಿಸಿ ಅಹ್ಮದ್​ ಪಟೇಲ್​​ ಗೆಲುವಿಗೆ ಶ್ರಮಿಸಿದ್ದರು. ಇದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಡಿ.ಕೆ ಶಿವಕುಮಾರ್​ ಮೇಲೆ ಅಕ್ರಮ ಹಣ ಗಳಿಕೆಯ ಆರೋಪವನ್ನು ಮಾಡಿತ್ತು.


ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್​​ ಆರೋಪ ಮಾಡುತ್ತಿದ್ದ ಬೆನ್ನಲ್ಲೇ ದಾಳಿ ವೇಳೆ ಡಿ.ಕೆ ಶಿವಕುಮಾರ್​ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಇದಾದ ಬಳಿಕ ಆದಾಯ ತೆರಿಗೆ ನೀಡಿದ ದೂರನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಡಿ.ಕೆಶಿವ ಕುಮಾರ್​ರನ್ನು ಬಂಧಿಸಿ ತಿಹಾರ್​ ಜೈಲಿನಲ್ಲಿ ಇರಿಸಿತ್ತು. ಈ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್​ ಸಧ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಇದೀಗ ಜಾರಿ ನಿರ್ದೇಶನಾಲಯ ಹೊಸ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುರುವುದು ಡಿ.ಕೆ ಶಿವಕುಮಾರ್​ ಹೊಸ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.

ಇದನ್ನು ಓದಿ : RCB WIN : ಕನ್ನಡಿಗ ಕೆ.ಎಲ್.ರಾಹುಲ್‌ ಆರ್ಭಟ ವ್ಯರ್ಥ : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಭರ್ಜರಿ ಗೆಲುವು

ಇದನ್ನೂ ಓದಿ : Tilak Varma : IPL ಮೂಲಕ ಕನಸು ಬೆನ್ನತ್ತಿರುವ ಯುವ ಆಟಗಾರ ತಿಲಕ್ ವರ್ಮ

Comments are closed.