tumkur english student : ಇಂಗ್ಲಿಷ್​ ಓದಲು ಬರುವುದಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ 7ನೇ ತರಗತಿ ಬಾಲಕ

ತುಮಕೂರು : tumkur english student : ಎಲ್ಲಾ ಮಕ್ಕಳು ಓದಿನಲ್ಲಿ ಮುಂದೆ ಇರ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಮಕ್ಕಳಿಗೆ ಓದು ಬೇಗನೆ ಅರ್ಥವಾದರೆ. ಇನ್ನು ಕೆಲವು ಮಕ್ಕಳಿಗೆ ಓದು ಎನ್ನುವುದು ಕಬ್ಬಿಣದ ಕಡಲೆಯೇ ಸರಿ. ಹಾಗಂತ ಪ್ರಯತ್ನ ಬಿಡದೇ ವ್ಯಾಸಂಗ ಮಾಡಿದಲ್ಲಿ ಓದು ಎಲ್ಲರಿಗೂ ಅರ್ಥವಾಗುತ್ತದೆ. ಆದರೆ ತುಮಕೂರಿನ ಊರ್ಡಿಗೆರೆಯ 7 ನೇ ತರಗತಿ ಬಾಲಕನೊಬ್ಬ ತನಗೆ ಇಂಗ್ಲಿಷ್​ ಅರ್ಥವಾಗುತ್ತಿಲ್ಲವೆಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್​ ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಸೋಮಶೇಖರ್​ ಹಾಗೂ ಜಯಮ್ಮ ದಂಪತಿಯ ಪುತ್ರ ಅಜಯ್​​ ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಕೋತಿ ತೋಪು ಗ್ರಾಮದಲ್ಲಿದ್ದ ಈ ದಂಪತಿ ಕೆಲವು ದಿನಗಳ ಹಿಂದೆಯಷ್ಟೇ ಊರ್ಡಿಗೆರೆ ಗ್ರಾಮಕ್ಕೆ ಶಿಫ್ಟ್​ ಆಗಿದ್ದರು. ಹೀಗಾಗಿ ಆರನೇ ತರಗತಿವರೆಗೆ ಕೋತಿ ತೋಪುವಿನಲ್ಲಿ ಓದುತ್ತಿದ್ದ ಅಜಯ್ ಈ ಶೈಕ್ಷಣಿಕ ವರ್ಷದಿಂದ ಊರ್ಡಿಗೆರೆ ಸರ್ಕಾರಿ ಶಾಲೆಗೆ ದಾಖಲಾಗಿದ್ದ ಎನ್ನಲಾಗಿದೆ.


ನನಗೆ ಇಂಗ್ಲೀಷ್​ ಅರ್ಥವಾಗ್ತಿಲ್ಲ. ಹೀಗಾಗಿ ನಾನು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕ ಅಜಯ್​ ಪೋಷಕರ ಬಳಿ ಹೇಳಿಕೊಂಡಿದ್ದ. ಆದರೆ ಬುದ್ಧಿವಾದ ಹೇಳಿದ ಪೋಷಕರು ಅಜಯ್​ನನ್ನು ಶಾಲೆಗೆ ಹೋಗಬೇಕೆಂದು ತಾಕೀತು ಮಾಡಿದ್ದರು. ಇಷ್ಟಕ್ಕೇ ಬೇಸರ ಮಾಡಿಕೊಂಡ ಬಾಲಕ ಅಜಯ್​​ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.


ಕೂಡಲೇ ಪೋಷಕರು ಅಜಯ್​ನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮ ನಾಯಕ್​ ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನು ಓದಿ : ಕುಂದಾಪುರ ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸಾವಿನ ಹಿಂದೆ ಲವ್‌ ಜಿಹಾದ್‌ ಆರೋಪ

ಇದನ್ನೂ ಓದಿ : RCB WIN : ಕನ್ನಡಿಗ ಕೆ.ಎಲ್.ರಾಹುಲ್‌ ಆರ್ಭಟ ವ್ಯರ್ಥ : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಭರ್ಜರಿ ಗೆಲುವು

tumkur english student primary school english study govt school boy

Comments are closed.