The Kashmir Files : ಓಟಿಟಿಗೂ ಬಂತು ದಿ ಕಾಶ್ಮೀರಿ ಫೈಲ್ಸ್ : ನಾಲ್ಕು ಭಾಷೆಯಲ್ಲಿ ಪ್ರದರ್ಶನ

ಅತಿ ಕಡಿಮೆ ಬಂಡವಾಳ ಹೂಡಿ ಅತಿ ಹೆಚ್ಚು ಗಳಿಸಿದ ಸಿನಿಮಾ ದಿ ಕಾಶ್ಮೀರಿ ಫೈಲ್ಸ್ (The Kashmir Files). ಕಾಶ್ಮೀರದಲ್ಲಿ 1990 ರ ದಶಕದಲ್ಲಿ ನಡೆದಿದೆ ಎನ್ನಲಾದ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಆಧರಿಸಿ ಈ ಸಿನಿಮಾ ತೆರೆಗೆ ಬಂದಿದೆ. ಸದ್ಯ ಯಶಸ್ವಿ ಪ್ರದರ್ಶನ ಕಂಡು ಬರೋಬ್ಬರಿ 250 ಕೋಟಿ ಗಳಿಸಿದ ಸಿನಿಮಾ ಈಗ ಥಿಯೇಟರ್ ನಿಂದ ಓಟಿಟಿಗೆ ಬರಲು ಸಿದ್ಧವಾಗಿದೆ. ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಈಗ ಜೀ5 ಆ್ಯಪ್ ಮೂಲಕ ಓಟಿಟಿಗೆ ಬರಲು ಸಿದ್ಧವಾಗಿದೆ. ಮೇ 13 ರಂದು ಈ ಸಿನಿಮಾ ಓಟಿಟಿಯಲ್ಲಿ ತೆರೆ ಕಾಣಲಿದ್ದು ಮತ್ತಷ್ಟು ಯಶಸ್ವಿ ಪ್ರದರ್ಶನಗೊಂಡು ಅಭಿಮಾನಿಗಳನ್ನು ಗಳಿಸಿಕೊಳ್ಳೋ ಸಾಧ್ಯತೆ ಇದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ ಮಾರ್ಚ್ 11 ರಂದು ತೆರೆಕಂಡಿತ್ತು. ತೆರೆ ಕಾಣುತ್ತಿದ್ದಂತೆ ರಾಜಕೀಯ ಟೀಕೆ ಹಾಗೂ ಪಕ್ಷಗಳ ನಡುವಿನ ಮೇಲಾಟಕ್ಕೆ ಕಾರಣವಾದ ಈ ಸಿನಿಮಾವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ನೋಡಿ ಚಿತ್ರತಂಡ ವನ್ನು ಅಭಿನಂದಿಸಿದ್ದರು. ಮಾತ್ರವಲ್ಲದೇ ಬಿಜೆಪಿ ಹೈಕಮಾಂಡ್ ಈ ಸಿನಿಮಾವನ್ನು ಪಕ್ಷದ ಎಲ್ಲ ಕಾರ್ಯಕರ್ತರು ನೋಡಬೇಕೆಂದು ಸೂಚನೆ ನೀಡಿತ್ತು ‌

ಕರ್ನಾಟಕದಲ್ಲಿ ಸ್ವತಃ ಸಿಎಂ ಬೊಮ್ಮಾಯಿ ಕೂಡ ಈ ಸಿನಿಮಾ ವೀಕ್ಷಿಸಿದ್ದು, ಸಿನಿಮಾಗೆ ತೆರಿಗೆ ವಿನಾಯ್ತಿ ಸಹ ಘೋಷಿಸಿದ್ದರು. ಅಲ್ಲದೇ ಇದೇ ಮೊದಲ‌ಬಾರಿಗೆ ಸ್ಪೀಕರ್ ಈ ಸಿನಿಮಾ ವೀಕ್ಷಣೆಗೆ ಪಕ್ಷಾತೀತವಾಗಿ ಎಲ್ಲರನ್ನು ಆಹ್ವಾನಿಸಿದ್ದಲ್ಲದೇ ಸದಸ್ಯರ ಸಾಮೂಹಿಕ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಿದ್ದರು.

ಈಗ ಈ ಸಿನಿಮಾ ಓಟಿಟಿಯಲ್ಲಿ ತೆರೆ ಕಾಣಲಿದ್ದು, ಪ್ರೇಕ್ಷಕರ ಸಂಭ್ರಮಕ್ಕೆ ಕಾರಣವಾಗಿದೆ. ಥಿಯೇಟರ್ ನಲ್ಲಿ ದಿ ಕಾಶ್ಮೀರಿ ಫೈಲ್ಸ್ ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಇದೇ ಕಾರಣಕ್ಕೆ ಸಿನಿಮಾ ಹಲವರಿಗೆ ಅರ್ಥವಾಗಿರಲಿಲ್ಲ. ಈಗ ಇದೇ ಸಿನಿಮಾ ಓಟಿಟಿಯಲ್ಲಿ ಹಿಂದಿ ಜೊತೆಗೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ತೆರೆ ಕಾಣುತ್ತಿದೆ.

ದಿ ಕಾಶ್ಮೀರಿ ಫೈಲ್ಸ್ ನಲ್ಲಿ ಅನುಪಮ್ ಖೇರ್, ಪಲ್ಲವಿ ಜೋಷಿ, ಮಿಥುನ್ ಚಕ್ರವರ್ತಿ ಸೇರಿದಂತೆ ಹಲವು ಬಾಲಿವುಡ್ ನಟರು ನಟಿಸಿದ್ದು, ಈ ಸಿನಿಮಾಗೆ ಬಿಜೆಪಿ ಆಡಳಿತವಿರೋ ಹಲವು ರಾಜ್ಯಗಳು ತೆರಿಗೆ ವಿನಾಯ್ತಿ ಕೂಡ ಘೋಷಿಸಿದ್ದವು.

ಇದನ್ನೂ ಓದಿ : ಪುನೀತ್ ಬದಲು ಯುವರಾಜ್ : ಏಪ್ರಿಲ್ 27 ರಂದು ಹೊಸ ಸಿನಿಮಾ ಘೋಷಿಸಲಿದೆ ಹೊಂಬಾಳೆ

ಇದನ್ನೂ ಓದಿ : KGF 2 ಗಾಗಿ ಯಶ್‌, ಪ್ರಶಾಂತ್‌ ನೀಲ್‌, ಸಂಜಯ್‌ ದತ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ZEE 5 OTT Releasing The Kashmir Files in 4 Languages

Comments are closed.