Former minister KS Eshwarappa : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪರ ಬ್ಯಾಟ್​ ಬೀಸಿದ ಮಾಜಿ ಸಿಎಂ ಹೆಚ್​ಡಿಕೆ

ವಿಜಯಪುರ : ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್​​​ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ(Former minister KS Eshwarappa) ಬಂಧನಕ್ಕೊಳಗಾಗಬೇಕೆಂದು ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಈ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಪಂಚಾಯತ್​ ರಾಜ್​ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದು ಬಳಿಕ ತಮ್ಮ ಬಲ ಪ್ರದರ್ಶನ ಮಾಡಿದ್ದೂ ನಿನ್ನೆ ಕಂಡು ಬಂತು.


ಈ ಎಲ್ಲ ಬೆಳವಣಿಗೆಗಳ ನಡುವೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಪರ ಬ್ಯಾಟ್​ ಬೀಸಿದ್ರು. ವಿಜಯಪುರದ ಆಲಮಟ್ಟಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಬಳಿಕ ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಾನೂ ಆಗ್ರಹಿಸಿದ್ದೆ. ಅದರಂತೆ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆದರೆ ಈಶ್ವರಪ್ಪ ರಾಜೀನಾಮೆಗೆ ಮಾತ್ರ ಸುಮ್ಮನಾಗದ ಕಾಂಗ್ರೆಸ್​​ ಈಶ್ವರಪ್ಪರನ್ನು ಬಂಧಿಸುವಂತೆ ಪಟ್ಟು ಹಿಡಿದಿದೆ. ಈ ಪ್ರಕರಣದಲ್ಲಿ ಈಶ್ವರಪ್ಪ ಬಂಧನ ಏಕೆ ಆಗಬೇಕು..? ಇಂದು ಬೀದಿಗೆ ಇಳಿದಿರುವ ಕಾಂಗ್ರೆಸ್ಸಿಗರು ಅಂದು ರಾಜ್ಯದಲ್ಲಿ ಧರ್ಮ- ಧರ್ಮಗಳ ನಡುವೆ ಸಂಘರ್ಷ ಸಂಭವಿಸುತ್ತಿದಾಗ ಏಕೆ ಮೌನ ವಹಿಸಿದ್ದರು..? ಈಗ ಈಶ್ವರಪ್ಪ ಪರ್ಸಂಟೇಜ್​ ಬಗ್ಗೆ ಮಾತನಾಡುವ ನೀವು ಅಂದು ಸರ್ವಜನಾಂಗದ ಶಾಂತಿಯ ತೋಟ ಹಾಳಾಗುತ್ತಿದ್ದಾಗ ಎಲ್ಲಿಗೆ ಹೋಗಿದ್ದರು..? ಎಂದು ಪ್ರಶ್ನಿಸಿದ್ದಾರೆ.


ಬೆಳಗಾವಿ ಜಿಲ್ಲೆಯ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಮಾಡಿಕೊಂಡಾಗ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಾ..? ಆಗಿನ ಗೃಹ ಸಚಿವರು ರಾಜೀನಾಮೆ ಕೊಟ್ಟರಾ..? ಹಂಡಿಬಾಗ ಕೂಡ ಸರ್ಕಾರದ ನಡವಳಿಕೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡವರೇ ಅಲ್ಲವೇ..? ಇವರಿಗೆ ಚುನಾವಣೆ ಸಂದರ್ಭದಲ್ಲಿ ಮಾತನಾಡಲು ಯಾವುದೇ ವಿಷಯಗಳಿಲ್ಲ. ಜನರ ಸಮಸ್ಯೆಗಳ ವಿಚಾರ ಇವರ ಬಳಿ ಇಲ್ಲ. ಹೀಗಾಗಿ ಈಗ ಅರೆಸ್ಟ್​ ಹೋರಾಟ ಮಾಡ್ತಿದ್ದಾರೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಜನರು ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸುವ ಸಮಯ ಬಂದಿದೆ ಎಂದು ಹೇಳಿದ್ರು.

ಇದನ್ನು ಓದಿ :RBI Recruitment 2022: ರಿಸರ್ವ್ ಬ್ಯಾಂಕ್‌ನಲ್ಲಿ 950 ಹುದ್ದೆಗಳು ಖಾಲಿ; 36,091 ರೂ.ವರೆಗೂ ಸಂಬಳ, ಇನ್ನಷ್ಟು ವಿವರ ಓದಿ

ಇದನ್ನೂ ಓದಿ : Anganwadi Recruitment 2022 : ಅಂಗನವಾಡಿ ಕಾರ್ಯಕರ್ತರು, ಸಹಾಯಕರ ಖಾಲಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

Former CM H DK issued a statement on behalf of former minister KS Eshwarappa





Comments are closed.