Shimoga : ಹರ್ಷ ಕೊಲೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮುಸ್ಲಿಂ ಯುವಕನ ಕೊಲೆಗೆ ಸ್ಕೆಚ್​..!

ಶಿವಮೊಗ್ಗ : ಶಿವಮೊಗ್ಗದಲ್ಲಿ(Shimoga ) ನಡೆದಿದ್ದ ಹಿಂದೂ ಯುವಕ ಹರ್ಷನ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ಕೋಮು ಗಲಭೆ ನಡೆಸಲು ನಡೆದಿದ್ದ ಭಾರೀ ದೊಡ್ಡ ಸಂಚೊಂದು ಬೆಳಕಿಗೆ ಬಂದಿದೆ. ಕೊಲೆಯಾದ ಹರ್ಷನ ಸ್ನೇಹಿತರೇ ಮುಸ್ಲಿಂ ಯುವಕನನ್ನು ಕೊಲೆ ಮಾಡಿ ಗೆಳೆಯನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದರು ಎಂಬ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಬೆಳಕಿಗೆ ಬಂದಿದೆ.


ಶಿವಮೊಗ್ಗದಲ್ಲಿ ಕೆಲ ತಿಂಗಳ ಹಿಂದೆ ಹರ್ಷನ ಸ್ನೇಹಿತ ಹಾಗೂ ಹರ್ಷ ಚ್ಯಾರಿಟೇಬಲ್​ ಟ್ರಸ್ಟ್​ನ ಪದಾಧಿಕಾರಿ ಸಚಿನ್​ ರಾಯ್ಕರ್​ ಸೇರಿದಂತೆ ಇನ್ನೂ 13 ಮಂದಿ ಸೇರಿ ಈ ಕೊಲೆಗೆ ಪ್ಲಾನ್​ ಮಾಡಿದ್ದರು ಎನ್ನಲಾಗಿದೆ. ಮುಸ್ಲಿಂ ಯುವಕನನ್ನು ಕೊಲೆಗೈಯುವ ಮೂಲಕ ಮೃತ ಹರ್ಷನ ಸಾವಿನ ಸೇಡನ್ನು ತೀರಿಸಿಕೊಳ್ಳಬೇಕು ಎಂದು ಕೊಂಡಿದ್ದ ಸಚಿನ್​ ರಾಯ್ಕರ್​ & ಟೀಂ ಬಂಕ್​ ಬಾಬು ಕೊಲೆ ಪ್ರಕರಣದಲ್ಲಿ ಜಾಮೀನನಲ್ಲಿ ಹೊರಗಿರುವ ಪ್ರವೀಣ್​ ಸಹಾಯವನ್ನು ಪಡೆದಿತ್ತು. ಪ್ರವೀಣ್​ ಕೆಲ ಸಮಯದ ಹಿಂದಷ್ಟೇ ಶಿವಮೊಗ್ಗ ಸೆಂಟ್ರಲ್​ ಜೈಲಿನಿಂದ ಬಿಡುಗಡೆಯಾಗಿದ್ದ. ರೌಡಿ ಶೀಟರ್ ಪ್ರವೀಣ್​ ಈ ಕೊಲೆಯನ್ನು ನಡೆಸಲು ಮಾಸ್ಟರ್​ ಮೈಂಡ್​ ಆಗಿದ್ದ ಎನ್ನಲಾಗಿದೆ.


ಆದರೆ ಈ ಕೊಲೆಯ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ಅಲರ್ಟ್ ಆದ ಶಿವಮೊಗ್ಗ ಪೊಲೀಸರು ಈತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸುಮಾರು 13 ಮಂದಿ ಆರ್ಗನೈಸ್ ಆಗಿ ವ್ಯವಸ್ಥಿತವಾಗಿ ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದರು.ಹತ್ಯೆಗಾಗಿ ಎಲ್ಲಾ ಪ್ರಿಪರೇಷನ್ ಗಳು ಮುಗಿದು ಹೋಗಿದ್ದವು. ಇನ್ನೇನ್ನು ಪ್ಲಾನ್ ಎಕ್ಸಿಕ್ಯೂಟಿವ್ ಮಾಡೋದಷ್ಟೆ ಬಾಕಿಯಿತ್ತು.

ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಯುವಕನೊಬ್ಬನ ಕೊಲೆಗೆ ಸಂಚು ರೂಪಿತವಾಗಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಎಸ್ಪಿ ಲಕ್ಷ್ಮಿ ಪ್ರಸಾದ್ ತುಂಬಾನೇ ಹೈ ಅಲರ್ಟ್ ಆಗಿದ್ದರು.ಕೊಲೆ ಸಂಚನ್ನು ಭೇದಿಸುವುದಕ್ಕಾಗಿಯೇ ಖಡಕ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಿದ್ದಾರೆ.ಯಾರೆಲ್ಲಾ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ರೋ ಅಂತವರನ್ನೆಲ್ಲಾ ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಹರ್ಷಾ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿ ಸಚಿನ್ ರಾಯ್ಕರ್ ಕೂಡ ಸಂಚಿನಲ್ಲಿ ಭಾಗಿಯಾಗಿದ್ದಾನೆ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ. ಹಿಂದುಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಚಿನ್ ರಾಯ್ಕರ್ ವಿರುದ್ಧ ಕೂಡ ದೊಡ್ಡಪೇಟೆ ಪೊಲೀಸರು ಎಪ್.ಐ.ಆರ್ ದಾಖಲಿಸಿದ್ದಾರೆ.ಪೊಲೀಸರು ದಾಖಲಿಸಿರುವ ಎಫ್​ಐಆರ್​​ನಲ್ಲಿ ಸಚಿನ್​ ರಾಯ್ಕರ್​ 9ನೇ ಆರೋಪಿಯಾಗಿದ್ದು ಈತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ : santosh patil death row : ಕೆ.ಎಸ್​ ಈಶ್ವರಪ್ಪ ನಿವಾಸಕ್ಕೆ 9 ಶ್ರೀಗಳ ದಿಢೀರ್​ ಭೇಟಿ

ಇದನ್ನೂ ಓದಿ : Anganwadi Recruitment 2022 : ಅಂಗನವಾಡಿ ಕಾರ್ಯಕರ್ತರು, ಸಹಾಯಕರ ಖಾಲಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

Sketch of the murder of a Muslim youth in Shimoga: Arrest of accused

Comments are closed.