Former CM Kumaraswamy : ರಾಷ್ಟ್ರೀಯ ಪಕ್ಷಗಳಿಂದಲೇ ರಾಜ್ಯದ ಶಾಂತಿಗೆ ಧಕ್ಕೆ : ಮಾಜಿ ಸಿಎಂ ಹೆಚ್​ಡಿಕೆ ಕಿಡಿ

ರಾಯಚೂರು : Former CM Kumaraswamy : ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ರಾಯಚೂರಿನ ಮಾನ್ವಿಯಲ್ಲಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರು ಅಧಿಕಾರದ ಆಸೆಯಿಂದ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟಾಗಲು ಈ ರಾಷ್ಟ್ರೀಯ ಪಕ್ಷಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ಹಾಗೂ ಬಿಜೆಪಿ ಪಕ್ಷದವರಿಗೆ ಜನರ ಬಗ್ಗೆ ಕಾಳಜಿಯಲ್ಲ. ಸಣ್ಣ ಸಣ್ಣ ವಿಚಾರಗಳಿಗೆ ಹೆಚ್ಚು ಮಹತ್ವವನ್ನು ನೀಡಿ ಜನರ ದಿಕ್ಕು ತಪ್ಪಿಸುವ ಕಾರ್ಯವನ್ನು ಮಾಡ್ತಿದ್ದಾರೆ. ಜೆಡಿಎಸ್​ ಸಮಾಜದಲ್ಲಿ ಶಾಂತಿ ಬಯಸುವ ಕಾರ್ಯವನ್ನು ಮಾಡುತ್ತದೆ. ರಾಜ್ಯದ ಯುವಕರು ರಾಷ್ಟ್ರೀಯ ಪಕ್ಷಗಳ ಮಾತಿಗೆ ಕಿವಿಗೊಡದೇ ಸಮಾಜದಲ್ಲಿ ಶಾಂತಿ ಸ್ಥಾಪನೆ ಮಾಡುವ ಕಾರ್ಯವನ್ನು ಮಾಡಲಿ ಎಂದು ಕಿವಿಮಾತು ಹೇಳಿದರು.

ಬಿಜೆಪಿಯ ಕೇಂದ್ರದ ಸಂಸದೀಯ ಮಂಡಳಿಗೆ ಮಾಜಿ ಸಿಎಂ ಯಡಿಯೂರಪ್ಪ ನೇಮಕ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು ಬಿಎಸ್​ವೈ ನೇಮಕದಿಂದ ಆನೆಬಲ ಬಂದಿದೆ ಎಂದು ಬಿಜೆಪಿ ರಾಜ್ಯ ನಾಯಕರು ಹೇಳ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಇರೋದ್ರಿಂದ ಯಡಿಯೂರಪ್ಪರನ್ನು ಕೇಂದ್ರದ ಸಂಸದೀಯ ಮಂಡಳಿಗೆ ಸೇರಿಸಿಕೊಳ್ಳಲಾಗಿದೆ, ರಾಜ್ಯದಲ್ಲಿ ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರ ಬಿಜೆಪಿ ನಾಯಕರು ಯಡಿಯೂರಪ್ಪರನ್ನು ಮತ್ತೆ ಮನೆಗೆ ಕಳಿಸ್ತಾರೆ ಎಂದು ವ್ಯಂಗ್ಯವಾಡಿದರು.

ರಾಯಚೂರಿನ ವಿಚಾರವಾಗಿ ತೆಲಂಗಾಣ ಸಿಎಂ ಕೆಸಿಆರ್​ ಹೇಳಿಕೆಗೆ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಹೆಚ್​ಡಿಕೆ ಕೆಸಿಆರ್​ ನಮ್ಮ ಆತ್ಮೀಯರು. ಹಾಗೆಂದ ಮಾತ್ರಕ್ಕೆ ರಾಯಚೂರಲ್ಲ ರಾಜ್ಯದ ಯಾವುದೇ ಭಾಗವನ್ನೂ ಬಿಟ್ಟು ಕೊಡುವ ಮಾತೇ ಇಲ್ಲ. ಆಂಧ್ರದ ವಲಸಿಗರನ್ನು ನಮ್ಮವರಂತೆಯೇ ಕಂಡು ಕೃಷಿ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ. ಸೌಹಾರ್ದತೆಗೆ ನೆರೆ ರಾಜ್ಯದ ಸಿಎಂ ಧಕ್ಕೆ ತರುವ ಕಾರ್ಯ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನು ಓದಿ : janmastami in udupi : ಕೃಷ್ಣನೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ: ನಾಳೆ ವಿಟ್ಲಪಿಂಡಿ ಸಡಗರ

ಇದನ್ನೂ ಓದಿ : egg throwing case in Kodagu : ಕಾಂಗ್ರೆಸ್ಸಿಗರೇ ಮೊಟ್ಟೆ ಎಸೆದು ಬಿಜೆಪಿಗರ ಮೇಲೆ ಯಾಕೆ ಅಪವಾದ ಹೊರಿಸಿರಬಾರದು?ಸಚಿವ ಮುನಿರತ್ನ ಹೊಸ ಬಾಂಬ್​​

Former CM Kumaraswamy outraged against national parties

Comments are closed.