BS Yediyurappa: 6 ಸಮೀಕ್ಷೆ ಬಿಟ್ಟಿಟ್ಟ ಸತ್ಯ; ಸಿದ್ದು ಶಕ್ತಿ ತಡೆಯಲು ರಾಜಾಹುಲಿಗೆ ಜೈ ಅಂದ ಬಿಜೆಪಿ ಹೈಕಮಾಂಡ್

ಬೆಂಗಳೂರು: (BS Yediyurappa Appointed Secrete) ಬಿಜೆಪಿಯಲ್ಲಿ ಒಮ್ಮೆ ವಾನಪ್ರಸ್ಥಕ್ಕೆ ಹೋದವರು ಮತ್ತೆ ರಾಜಕೀಯವಾಗಿ ಮುನ್ನೆಲೆಗೆ ಬಂದ ನಿದರ್ಶನ ತೀರಾ ಅದ್ರೆ ತೀರಾ ಕಡಿಮೆ. ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ.. ಹೀಗೆ ಬಿಜೆಪಿ ದಿಗ್ಗಜರೆಲ್ಲಾ 75 ವರ್ಷ ದಾಟಿದ ಕೂಡಲೇ ರಾಜಕೀಯವಾಗಿ ಮೂಲೆ ಗುಂಪಾಗಿ ವಾನಪ್ರಸ್ಥದಲ್ಲಿದ್ದಾರೆ. ಆದರೆ ಇದಕ್ಕೆ ಅಪವಾದ ಕರ್ನಾಟಕದ ರಾಜಾಹುಲಿ ಬಿ.ಎಸ್ ಯಡಿಯೂರಪ್ಪ.

75 ವರ್ಷ ದಾಟಿದವರಿಗೆ ಅಧಿಕಾರವಿಲ್ಲ ಎಂಬ ಬಿಜೆಪಿಯ ಅಲಿಖಿತ ನಿಯಮದ ನಡುವೆಯೂ 76ನೇ ವಯಸ್ಸಿನಲ್ಲಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ಎರಡೇ ವರ್ಷದಲ್ಲಿ ಸಿಎಂ ಕುರ್ಚಿಯನ್ನು ಕಳೆದುಕೊಂಡಿದ್ದರು. 2021ರ ಜುಲೈ 26ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್’ನಲ್ಲಿ ಕಣ್ಣೀರು ಹಾಕುತ್ತಾ ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು.

ರಾಜೀನಾಮೆಯ ನಂತರ ಬಹುತೇಕ ತೆರೆಮರೆಗೆ ಸರಿದಿದ್ದ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಅಡ್ವಾಣಿ ಅವರಂತೆ ವಾನಪ್ರಸ್ಥಕ್ಕೆ ಕಳುಹಿಸಿತು ಎಂದೇ ಭಾವಿಸಲಾಗಿತ್ತು. ಆದರೆ ಸ್ವತಃ ಯಡಿಯೂರಪ್ಪನವರೇ ಅಚ್ಚರಿ ಪಡುವ ರೀತಿಯಲ್ಲಿ ಅವರನ್ನು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯನನ್ನಾಗಿ ಮಾಡಿದೆ. ಅಷ್ಟೇ ಅಲ್ಲ, ಕೇಂದ್ರ ಚುನಾವಣಾ ಸಮಿತಿಗೂ ಸೇರಿಸಿಕೊಂಡಿದೆ.

ಹಾಗಾದ್ರೆ ವಾನಪ್ರಸ್ಥಕ್ಕೆ ತೆರಳಿದ್ದ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಮತ್ತೆ ಮಣೆ ಹಾಕಿದ್ದೇಕೆ? ಕರ್ನಾಟಕದ ಬಿಜೆಪಿ ಪಾಲಿಗೆ ಮತ್ತೆ ರಾಜಾಹುಲಿಯೇ ಅನಿವಾರ್ಯ ಆದ್ರಾ ? ಈ ಪ್ರಶ್ನೆ ಈಗ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. ರಾಜಾಹುಲಿಗೆ ದೆಹಲಿ ಮಟ್ಟದಲ್ಲಿ ದೊಡ್ಡ ಸ್ಥಾನಮಾನ ನೀಡಿದ್ದರ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದೆ. ಇದಕ್ಕೆ ಮುಖ್ಯ ಕಾರಣ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ನಾಗಾಲೋಟ ಮತ್ತು ಕಳೆದೊಂದು ವರ್ಷದಲ್ಲಿ ಬಿಜೆಪಿ ನಡೆಸಿದ ಆರು ಸಮೀಕ್ಷೆಗಳಲ್ಲಿ ಹೊರ ಬಿದ್ದ ಫಲಿತಾಂಶ. ಮೊದಲು ಸಿದ್ದರಾಮಯ್ಯ ಫ್ಯಾಕ್ಟರ್.

ಸಿದ್ದರಾಮಯ್ಯ ಫ್ಯಾಕ್ಟರ್:

  • ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಪ್ರಭಾವ, ಅಬ್ಬರ ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ಹೆಚ್ಚುತ್ತಿದೆ.
  • ಹುಟ್ಟುಹಬ್ಬದ ನೆಪದಲ್ಲಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ನಂತರವಂತೂ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಾಗಿದೆ.
  • ಮಾಸ್ ಲೀಡರ್ ಎಂಬ ಸಿದ್ದರಾಮಯ್ಯನವರ ವರ್ಚಸ್ಸಿಗೆ ಸರಿಸಾಟಿಯಾಗುವಂತಹ, ಸಿದ್ದರಾಮಯ್ಯನವರನ್ನ ಎದುರಿಸಿ ನಿಲ್ಲುವಂತಹ ಮತ್ತೊಬ್ಬ ಮಾಸ್ ಲೀಡರ್ ರಾಜ್ಯ ಬಿಜೆಪಿಯಲ್ಲಿ ಕಾಣುತ್ತಿಲ್ಲ.
  • ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿ ಸಿದ್ದರಾಮಯ್ಯ ಮುಂದೆ ನಿಲ್ಲಿಸಿದ್ರೂ, ಸಿದ್ದು ಹತ್ತಿರಕ್ಕೂ ಬೊಮ್ಮಾಯಿ ಸುಳಿಯುತ್ತಿಲ್ಲ.
  • ಹೀಗಾಗಿ ಸಿದ್ದರಾಮಯ್ಯನವರ ಅಬ್ಬರ ತಡೆಯಲು ತನ್ನ ಸೇನೆಯ ಏಕೈಕ ಮಾಸ್ ಲೀಡರ್ ಯಡಿಯೂರಪ್ಪನವರಿಗೇ ಮತ್ತೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.

6 ಸಮೀಕ್ಷೆಗಳು ಹೇಳಿದ ಸತ್ಯ:

  • ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದು, ಬೊಮ್ಮಾಯಿ ಸಿಎಂ ಆದ ನಂತರ ಕಳೆದ ಒಂದು ವರ್ಷದಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಒಟ್ಟು 6 ಸಮೀಕ್ಷೆಗಳನ್ನು ನಡೆಸಿದೆ.
  • ಮೂರು ಬೇರೆ ಬೇರೆ ಕಂಪೆನಿಗಳಿಂದ ಆರು ಬಾರಿ ಒಟ್ಟು 18 ಸಮೀಕ್ಷೆಗಳನ್ನು ನಡೆಸಲಾಗಿದೆ.
  • ಆ ಆರೂ ಸಮೀಕ್ಷೆಗಳಲ್ಲಿ ಹೊರ ಬಂದ ಫಲಿತಾಂಶವನ್ನು ನೋಡಿ ಬಿಜೆಪಿ ಹೈಕಮಾಂಡ್ ದಂಗಾಗಿ ಹೋಗಿದೆ.
  • ಸಮೀಕ್ಷೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಹೆಚ್ಚು ಎಂಬ ಫಲಿತಾಂಶ ಬಂದಿದೆ.
  • ಹೀಗಾಗಿ ಕಾಂಗ್ರೆಸ್ ಅಬ್ಬರವನ್ನು ತಡೆದು ನಿಲ್ಲಿಸಲು ಬಿಜೆಪಿ ರಾಷ್ಟ್ರಮಟ್ಟದಲ್ಲಿ ಯಡಿಯೂರಪ್ಪನವರಿಗೆ ಸ್ಥಾನಮಾನ ನೀಡಿದೆ.

ಲಿಂಗಾಯತ ಫ್ಯಾಕ್ಟರ್:

  • ಯಡಿಯೂರಪ್ಪನವರಿಗೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಲು ಮತ್ತೊಂದು ಕಾರಣ ಲಿಂಗಾಯತ ಫ್ಯಾಕ್ಟರ್.
  • ಬಿ.ಎಸ್ ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಲಿಂಗಾಯತ ಸಮುದಾಯ ಬಿಜೆಪಿಯಿಂದ ವಿಮುಖವಾಗುತ್ತಿರುವ ಸೂಚನೆ ಬಿಜೆಪಿ ಹೈಕಮಾಂಡ್’ಗೆ ಸಿಕ್ಕಿದೆ.
  • ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲ ಚುನಾವಣೆಗಳಲ್ಲಿ ಇದು ಸಾಬೀತಾಗಿದೆ.
  • ಸಿಎಂ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು, ಎಲ್ಲಾ ಕಡೆ ಕಾಂಗ್ರೆಸ್ ಗೆದ್ದಿದೆ.
  • ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲೇ ಬಿಜೆಪಿ ಸೋತಿರುವುದು ಹೈಕಮಾಂಡ್’ನ ಆತಂಕಕ್ಕೆ ಕಾರಣವಾಗಿದ್ದು, ಲಿಂಗಾಯತ ವೋಟ್ ಬ್ಯಾಂಕನ್ನು ಹಿಡಿದಿಟ್ಟುಕೊಳ್ಳುವ ದೃಷ್ಠಿಯಿಂದ ಮತ್ತೆ ಯಡಿಯೂರಪ್ಪನವರ ಮೊರೆ ಹೋಗಿದೆ.

ಇದನ್ನೂ ಓದಿ : Former minister KS Eshwarappa : ಡಿ.ಕೆ ಶಿವಕುಮಾರ್​, ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಗುಡುಗು

ಇದನ್ನೂ ಓದಿ : Minister ST Somashekhar : ಸಿದ್ದರಾಮಯ್ಯ ಒಳ್ಳೆಯ ಮಾತನಾಡಲಿ ಎಂದು ಚಾಮುಂಡಿಯಲ್ಲಿ ಪ್ರಾರ್ಥಿಸುವೆ : ಎಸ್​.ಟಿ ಸೋಮಶೇಖರ್​ ವ್ಯಂಗ್ಯ

6 factor of survey and Siddaramaiah Power BS Yediyurappa Appointed Secrete for BJP Parliamentary Board and Central Election Committee

Comments are closed.