Former CM Siddaramaiah : ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಪಣ: ಕ್ಷೇತ್ರದಲ್ಲೇ ಬೀಡುಬಿಟ್ಟ ಪುತ್ರ ಯತೀಂದ್ರ

ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡ್ತಿರೋ ರಾಜಕಾರಣಿ ಸಿದ್ಧರಾಮಯ್ಯ.‌(Former CM Siddaramaiah) ಚುನಾವಣೆಯ ಸಿದ್ಧತೆ ಆರಂಭವಾದ ದಿನದಿಂದಲೂ ಸಿದ್ಧರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಕುತೂಹಲ ಮನೆ ಮಾಡಿತ್ತು. ಈ ಮಧ್ಯೆ ಸಿದ್ಧರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಇದಾದ ಮೇಲೂ ಅವರು ವರುಣಾ ಕ್ಷೇತ್ರಕ್ಕೆ ಮರಳುತ್ತಾರೆ ಎಂಬ ಉಹಾಪೋಹವಿತ್ತು. ಈಗ ಈ ಅನುಮಾನಕ್ಕೆ ಪುತ್ರ ಯತೀಂದ್ರ್ ತೆರೆ ಎಳೆದಿದ್ದಾರೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಿದ್ಧರಾಮಯ್ಯನವರಿಗೆ ವಿಶಿಷ್ಟವಾದ ಸ್ಥಾನವಿದೆ. ಸದಾ ವರ್ಣರಂಜಿತ ರಾಜಕಾರಣ ಮಾಡೋ ಸಿದ್ಧರಾಮಯ್ಯನವರು ಕಳೆದ ಎರಡು ಚುನಾವಣೆಗಳಿಂದ ಸ್ಥಾನ ಬದಲಾವಣೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋಲು ಕಂಡ ಸಿದ್ಧರಾಮಯ್ಯನವರು ಬಳಿಕ ಬಾದಾಮಿಯಲ್ಲಿ ಸ್ಪರ್ಧಿಸಿದ್ದು, ಗೆದ್ದಿದ್ದು ಈಗ ಇತಿಹಾಸ. ಆದರೆ ಈ ಭಾರಿ ಸಿದ್ದರಾಮಯ್ಯ ಅವರು ಮತ್ತೆ ಕ್ಷೇತ್ರ ಬದಲಾಯಿಸೋದು ಖಚಿತ ಎಂಬುದು ವರ್ಷಗಳಿಂದ ಚರ್ಚೆಯಲ್ಲಿತ್ತು.

ಕೊನೆಗೆ ಅಳೆದು ಸುರಿದು ತೂಗಿದ ಸಿದ್ಧರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದರು. ಆದರೆ ಈ ಘೋಷಣೆಗೆ ಹೈಕಮಾಂಡ್ ಒಪ್ಪಿಗೆ ಕೂಡ ಮುಖ್ಯ ಎಂದೂ ಸಿದ್ಧರಾಮಯ್ಯನವರ ಹೇಳೋದನ್ನು ಮರೆತಿರಲಿಲ್ಲ. ಇದಾದ ಮೇಲೆ ಸಿದ್ಧರಾಮಯ್ಯನವರ ನಿರ್ಧಾರದ ಮೇಲೆ ಸಾಕಷ್ಟು ಟೀಕೆಗಳು ಹಾಗೂ ಕಮೆಂಟ್ ಗಳು ಹರಿದು ಬಂದಿದ್ದವು. ಈ ಪೈಕಿ ಸಿದ್ಧರಾಮಯ್ಯನವರು ಚುನಾವಣಾ ತಂತ್ರವಾಗಿ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆದರೆ ಅವರು ಕೊನೆಗೆ ವರುಣಾ ಕ್ಷೇತ್ರಕ್ಕೆ ಮರಳುತ್ತಾರೆ. ತಂದೆಗಾಗಿ ಮಗ ಯತೀಂದ್ರ್ ಸಿದ್ಧರಾಮಯ್ಯನವರು ತಮ್ಮ ಕ್ಷೇತ್ರ ಬಿಟ್ಟು ಕೊಡುತ್ತಾರೆ ಎಂದು ಹೇಳಲಾಗುತ್ತಿತ್ತು.

ಆದರೆ ಈ ಎಲ್ಲ ಅನುಮಾನಗಳಿಗೆ ಈಗ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ಪುತ್ರ ತೆರೆ ಎಳೆದಿದ್ದಾರೆ.ಖುದ್ದು ಕೋಲಾರದಲ್ಲಿ ಬೀಡು ಬಿಟ್ಟಿರೋ ಯತೀಂದ್ರ್ ಸಿದ್ಧರಾಮಯ್ಯ, ಕಾಂಗ್ರೆಸ್ ನಾಯಕರು ಹಾಗೂ ಪ್ರಮುಖರ ಜೊತೆ ಸರಣಿ ಸಭೆಗಳನ್ನು ಮಾಡುತ್ತಿದ್ದಾರೆ. ವಾರದಲ್ಲಿ ಎರಡು ದಿನ ಕೋಲಾರದಲ್ಲೇ ಕಳೆಯುತ್ತಿರುವ ಯತೀಂದ್ರ, ತಂದೆಗಾಗಿ ವಾಸ್ತುಪ್ರಕಾರವೇ ಇರೋ ಮನೆಯನ್ನು ಕೂಡ ಹುಡುಕಿದ್ದಾರೆ.

ಹೀಗಾಗಿ ಸಿದ್ಧರಾಮಯ್ಯನವರು ವರುಣಾಗೆ ಮರಳೋದು ಬಹುತೇಕ ಅನುಮಾನವಾಗಿದೆ. ಯತೀಂದ್ರ್ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಜೊತೆ ಯತೀಂದ್ರ ಮತ್ತೊಮ್ಮೆ ವರುಣಾ ಮತದಾರರ ಮುಂದೇ ನಿಲ್ಲೋದು ಫಿಕ್ಸ್ ಎನ್ನಲಾಗಿದೆ. ಆದರೆ ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಕೋಲಾರದಲ್ಲಿ ಸಿದ್ಧರಾಮಯ್ಯನವರ ಗೆಲುವು ಕಷ್ಟ ಎನ್ನಲಾಗ್ತಿದ್ದು, ಕಾಂಗ್ರೆಸ್ ಒಳಜಗಳ, ಬಣ ರಾಜಕೀಯವೇ ಸಿದ್ದು ಗೆಲುವಿಗೆ ಮುಳುವಾಗುವ ಸಾಧ್ಯತೆ ಇದೆ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಇದನ್ನೂ ಓದಿ : ಕಾಪುಗೆ ಗುರ್ಮೆ, ಉಡುಪಿಗೆ ಪ್ರಮೋದ್‌, ಬೈಂದೂರಿಗೆ ಕೊಡ್ಗಿ ಏನಿದು ಬಿಜೆಪಿ ಲೆಕ್ಕಾಚಾರ ?

ಇದನ್ನೂ ಓದಿ : BL Santhosh : ಹಿರಿಯರಿಗೆ ಕೋಕ್, ಕುಟುಂಬ ರಾಜಕಾರಣಕ್ಕೆ ಬ್ರೇಕ್ : ಟಿಕೇಟ್ ಹಂಚಿಕೆ ಬಿ.ಎಲ್.ಸಂತೋಷ್ ಹೆಗಲಿಗೆ

English News : newsnext.live

Former CM Siddaramaiah is contesting elections from Kolar Yathindra visits Kolar

Comments are closed.