former cm yadiyurappa :ಶಿಕಾರಿಪುರದಿಂದ ವಿಜಯೇಂದ್ರ ಸ್ಫರ್ಧೆ ಹೈಕಮಾಂಡ್​ಗೆ ಬಿಟ್ಟ ವಿಚಾರ : ಹೇಳಿಕೆ ಬದಲಿಸಿದ ಬಿಎಸ್​ವೈ

ಬೆಂಗಳೂರು : former cm yadiyurappa: ನಿನ್ನೆ ಶಿಕಾರಿಪುರದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಘೋಷಣೆ ಮಾಡಿದ್ದ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ತಮಗೆ ರಾಜಕೀಯವಾಗಿ ಜನ್ಮ ನೀಡಿದ ಶಿಕಾರಿಪುರ ಕ್ಷೇತ್ರವನ್ನು ತಮ್ಮ ಪುತ್ರ ಬಿ.ವೈ ವಿಜಯೇಂದ್ರರಿಗೆ ಬಿಟ್ಟುಕೊಡ್ತಿರೋದಾಗಿ ಹೇಳಿದ್ದರು. ಬಿ.ಎಸ್​ ಯಡಿಯೂರಪ್ಪರ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.


ಇಂದು ಈ ವಿಚಾರವಾಗಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸ್ಪಷ್ಟನೆ ನೀಡಿರುವ ಬಿ.ಎಸ್​ ಯಡಿಯೂರಪ್ಪ , ನಾನು ನಿನ್ನೆ ನೀಡಿದ ಹೇಳಿಕೆಯ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿರುವುದು ನನ್ನ ಗಮನಕ್ಕೆ ಬಂದಿದ್ದೆ. ಆ ಮಾತನ್ನು ನಾನು ಹೇಳಿದ್ದಲ್ಲ. ಶಿಕಾರಿಪುರದ ಜನರು ನನಗೆ ಒತ್ತಾಯ ಮಾಡಿದ್ದಕ್ಕೆ ಆ ಹೇಳಿಕೆ ನೀಡುವಂತಾಯ್ತು. ಪಕ್ಷದಲ್ಲಿ ಯಾರಿಗೆ ಟಿಕೆಟ್​ ನೀಡಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ .


ಮುಂದಿನ ರಾಜ್ಯ ವಿಧಾನಸಭೆಯಲ್ಲಿ ನೀವು ಶಿಕಾರಿಪುರದಿಂದಲೇ ಸ್ಪರ್ಧೆ ಮಾಡಿ ಅಂತಾ ಜನರು ಒತ್ತಾಯ ಮಾಡುತ್ತಿದ್ದರು. ಅದಿಕ್ಕೆ ನಾನು ಮುಂದಿನ ಚುನಾವಣೆಯಿಂದ ನಾನು ಸ್ಫರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದೆ. ಬಳಿಕ ನನ್ನ ಬದಲು ನನ್ನ ಪುತ್ರ ಈ ಕ್ಷೇತ್ರದಿಂದ ನಿಲ್ಲುತ್ತಾರೆ ಎಂದು ಹೇಳಿದ್ದು ಕೇವಲ ಸಲಹೆ ಮಾತ್ರ. ಇದೇ ಅಂತಿಮ ನಿರ್ಧಾರವಲ್ಲ. ಜನರ ಒತ್ತಾಯಕ್ಕೆ ಮಣಿದು ಆ ರೀತಿ ಮಾತನಾಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.


ಬಿ.ವೈ ವಿಜಯೇಂದ್ರ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದರೂ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ಹಳೆ ಮೈಸೂರಾದರೂ ಓಕೆ, ಶಿಕಾರಿಪುರದಲ್ಲೇ ಟಿಕೆಟ್​ ಸಿಕ್ಕರೂ ಓಕೆ. ಹೀಗಾಗಿ ಶಿಕಾರಿಪುರದ ಟಿಕೆಟ್​ ಯಾರಿಗೆ ಸಿಗುತ್ತೆ ಅನ್ನೋದು ಹೈಕಮಾಂಡ್​ಗೆ ಬಿಟ್ಟ ವಿಚಾರ. ನಾನು ನಾಳೆ ಅಥವಾ ನಾಡಿದ್ದಿಂದ ನಾನು ರಾಜ್ಯಾದ್ಯಂತ ಪ್ರವಾಸ ಆರಂಭಿಸಲಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳನ್ನು ಗೆಲ್ಲುವಂತೆ ಮಾಡುವುದೇ ನನ್ನ ಗುರಿ ಎಂದು ಹೇಳಿದರು.

ಇದನ್ನು ಓದಿ : poonam pandey : ರಣವೀರ್​ ಸಿಂಗ್ ನನ್ನ ಆಟದಲ್ಲಿ​​ ನನ್ನನ್ನೇ ಸೋಲಿಸಿಬಿಟ್ಟರು ಎಂದ ಪೂನಂ ಪಾಂಡೆ

ಇದನ್ನೂ ಓದಿ : Minister Dr. K Sudhakar : ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಗೊಂದಲ : ನಮ್ಮ ಪಕ್ಷ ನೋಡಿ ಕಲಿತುಕೊಳ್ಳಿ ಎಂದ ಸುಧಾಕರ್​

former cm yadiyurappa statement about vijayendra in banglore

Comments are closed.