Shivarame Gowda Audio Viral : ಒಂದು ಎಲೆಕ್ಷನ್ ಗೆ 30 ಕೋಟಿ ಖರ್ಚು ಮಾಡಿದ್ದೇನೆ : ವೈರಲ್ ಆಯ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆಡಿಯೋ

ಮಂಡ್ಯ : ಇನ್ನೂ ರಾಜ್ಯದಲ್ಲಿ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಾಗಲೇ ರಾಜಕೀಯ ಮೇಲಾಟಗಳು ಆರಂಭಗೊಂಡಿದ್ದು, ಮಂಡ್ಯ ಲೋಕಸಭೆಯ ಉಪಚುನಾವಣೆ ಯಲ್ಲಿ ನಾನು 30 ಕೋಟಿ ಖರ್ಚು ಮಾಡಿದ್ದೇ ಎನ್ನುವ ಮೂಲಕ ಮಾಜಿ ಸಂಸದ ಎಲ್.ಆರ್. ಶಿವರಾಮೇ ಗೌಡ (Shivarame Gowda Audio Viral) ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಮಂಡ್ಯದ ನಾಗಮಂಗಲ ಕ್ಷೇತ್ರದ ಕೊಪ್ಪಕ್ಕೆ ಕೆಲದಿನಗಳ ಹಿಂದೆ ಭೇಟಿ ನೀಡಿದ್ದ ಎಲ್.ಆರ್. ಶಿವರಾಮೇಗೌಡ ಅಲ್ಲಿನ ಜೆಡಿಎಸ್ ಕಾರ್ಯಕರ್ತೆಯೊಂದಿಗೆ ಸುದೀರ್ಘವಾಗಿ ಮಾತನಾಡಿದ್ದಾರೆ.

ಈ ವೇಳೆ ತಾವು ಚುನಾವಣೆಗೆ ಹಣ ಖರ್ಚು ಮಾಡಿದ್ದು, ಈ ಹಿಂದೆ ತಮಗೆ ರಾಜಕೀಯದಲ್ಲಿ ಆದ ಹಿನ್ನಡೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಒಟ್ಟು 37 ನಿಮಿಷಕ್ಕೂ ಅಧಿಕ ಕಾಲ ಮಾತನಾಡಿದ್ದಾರೆ. ವೈರಲ್ ಆಗಿರೋ ಆಡಿಯೋದಲ್ಲಿ ಏನಿದೆ ಅನ್ನೋದನ್ನು ಗಮನಿಸೋದಾದರೇ, ಎಂಎಲ್ ಸಿ ಚುನಾವಣೆಗೆ ನಾನು 27 ಕೋಟಿ‌ ಖರ್ಚು ಮಾಡಿದ್ದೆ. ಐದು ತಿಂಗಳಿಗೆ ಎಂಪಿ ಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ. ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 30 ಕೋಟಿ ಖರ್ಚು ಮಾಡುತ್ತೇನೆ.

ನನ್ನದು‌ 8 ಸ್ಕೂಲ್ ಇದೆ ತಿಂಗಳಿಗೆ 3 ಕೋಟಿ‌ ಸಂಬಳ ಕೊಡುತ್ತೇನೆಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 10 ತಿಂಗಳ ಸಂಬಳದಷ್ಟೆ ಹಣಬೇಕು. ಅಷ್ಟು ಹಣವನ್ನು ಖರ್ಚು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇನ್ನು ತಮಗೆ ಬೆಂಬಲ ನೀಡಬೇಕು ಎಂದು ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿರುವ ಆಡಿಯೋದಲ್ಲಿ ನಾನು ಎರಡು ಸಲ ಎಂ.ಎಲ್.ಎ ಆಗಿದ್ದೇನೆ.ಸುರೇಶ್ ಗೌಡ ಮಾಡಿದ ಕೆಲಸಕ್ಕಿಂತ ತಾತ ನಂತ ಕೆಲಸ ಮಾಡಬಹುದು.ಸುರೇಶ್ ಗೌಡ ನನಗೆ ಕಳೆದ ಲೋಕಸಭೆ ಟಿಕೆಟ್ ತಪ್ಪಿಸಿದ.ನಿಖಿಲ್ ಕುಮಾರ್ ಸ್ವಾಮಿ ಚುನಾವಣೆಗೆ ನಿಲ್ಲಿಸಿ ಅವರ ಮನೆಗೆ ಕಂಟಕ ತಂದ್ರು ನನಗು ಕಂಟಕ ತಂದ್ರು. ಮುಂದಿನ ಬಾರಿ ಚುನಾವಣೆಗೆ ನಾನು ನಿಂತುಕೊಳ್ಳುತ್ತೇನೆ. ನನಗೆ ಬೆಂಬಲ‌ಕೊಡಿ ಎಂದು ಮನವಿ‌ ಮಾಡಿದ್ದಾರೆ.

ಅಲ್ಲದೇ ಇದೇ ಆಡಿಯೋದಲ್ಲಿ ಮಾಜಿ ಸಂಸದ ಜಿ.ಮಾದೇಗೌಡರ ಬಗ್ಗೆಯು ಚರ್ಚೆ ನಡೆಸಿರುವ ಶಿವರಾಮೇ ಗೌಡ,ಐದು ಬಾರಿ ಕಾಂಗ್ರೆಸ್ ನಿಂದ ನಿಂತು ಸೋತಿದ್ದೇನೆ. ಎಲ್ಲವೂ ಕಡಿಮೆ ಅಂತರದಿಂದ ಸೋತಿದ್ದು. ಜಿ.ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ‌.ಜಿ.ಮಾದೇಗೌಡರು ಆಗ ಸಂಸದರಾಗಿದ್ದರು. ಅದರಿಂದಲೆ ಜಿ.ಮಾದೇಗೌಡರ ವಿರೋಧದಿಂದ ಸೋತೆ ಎಂದು ಹೇಳಿಕೊಂಡಿದ್ದಾರೆ. ಈ ಆಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಮಂಡ್ಯ ರಾಜಕಾರಣದ ರಾಯಲ್ಟಿ ಕಂಡು ದಂಗಾಗಿದ್ದಾರೆ.

ಇದನ್ನೂ ಓದಿ : ಖಾಕಿ ಬಿಟ್ಟು ಖಾದಿ ತೊಡ್ತಾರಾ ಖಡಕ್ ಆಫೀಸರ್ : ಮತ್ತೆ ರವಿ ಚೆನ್ನಣ್ಣನವರ್ ಬಿಜೆಪಿ ಸೇರ್ಪಡೆ ಗಾಸಿಪ್

ಇದನ್ನೂ ಓದಿ : MLA Renukacharya: ಸ್ವಪಕ್ಷಿಯರ ವಿರುದ್ಧವೇ ಗುಡುಗಿದ ಶಾಸಕ ರೇಣುಕಾಚಾರ್ಯ: 15 ಸಚಿವರ ವಿರುದ್ಧ ರಾಜ್ಯಾಧ್ಯಕ್ಷ ರಿಗೆ ದೂರು

( Former MP LR Shivarame Gowda who has spent 30 crores on the Mandya Lok Sabha election: audio viral)

Comments are closed.