ಜನೋತ್ಸವ Vs ಕಾರ್ಯಕಾರಿಣಿ : ಮತ್ತೆ ಸಂಕಷ್ಟಕ್ಕೆ ಸಿಲುಕಿದ ಸಿಎಂ ಬೊಮ್ಮಾಯಿ

ಬೆಂಗಳೂರು : (CM Bommai in trouble) ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ಅದ್ದೂರಿ ಜನೋತ್ಸವ ಹಮ್ಮಿಕೊಳ್ಳಲಾಗಿತ್ತು. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ಈ ಸಂಭ್ರಮಕ್ಕೆ ಬ್ರೇಕ್ ಹಾಕಿತ್ತು. ಈಗ ಎರಡನೇ ಸಲ ಹಮ್ಮಿಕೊಂಡ ಜನೋತ್ಸವಕ್ಕೂ ಮತ್ತೆ ವಿಘ್ನ ಎದುರಾಗಿದ್ದು, ಸಪ್ಟೆಂಬರ್ 11 ಹಾಗೂ 12 ರಂದು ಜನೋತ್ಸವ ನಡೆಯೋದು ಅನುಮಾನ ಎನ್ನಲಾಗ್ತಿದೆ.

ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರೋ ಬಿಜೆಪಿ ಸರ್ಕಾರ ತಮ್ಮ ಸಾಧನೆಯನ್ನು ಬಿಂಬಿಸಿಕೊಂಡು ಜನರನ್ನು ಸೆಳೆಯೋದಿಕ್ಕೆ ಇನ್ನಿಲ್ಲದ ಸರ್ಕಸ್ ನಡೆಸಿದೆ. ಅದಕ್ಕಾಗಿಯೇ ಬೊಮ್ಮಾಯಿ‌ ಸರ್ಕಾರದ ಹಾಗೂ ಬಿಎಸ್ವೈ ಸಾಧನೆಗಳನ್ನು ಬಣ್ಣಿಸಲು ಜನೋತ್ಸವ ಹಮ್ಮಿಕೊಂಡಿದೆ. ಈ‌ ಕಾರ್ಯಕ್ರಮದಲ್ಲಿ ಬಿಜೆಪಿ ಸಾಧನೆ, ಘೋಷಿಸಿದ ಯೋಜನೆ ಸೇರಿದಂತೆ ಎಲ್ಲವನ್ನು ಜನರ ಮುಂದಿಡಲು ಬಿಜೆಪಿ ಪ್ಲ್ಯಾನ್ ಮಾಡಿದೆ‌. ಅಲ್ಲದೇ ಇದೇ ಕಾರ್ಯಕ್ರಮಕ್ಕೆ ಹೈಕಮಾಂಡ್ ನ್ನು ಕರೆಸಿ ಅವರಿಂದಲೂ ಬೆನ್ನು ತಟ್ಟಿಸಿಕೊಳ್ಳುವ ಆಸೆ ಬಿಜೆಪಿಗಿತ್ತು.

ಆದರೆ ಮೊದಲ ಬಾರಿಯಂತೆ ಎರಡನೇ ಬಾರಿಯೂ ಜನೋತ್ಸವ ರದ್ದಾಗೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಸಪ್ಟೆಂಬರ್ 11 ಮತ್ತು 12 ರಂದು ಜನೋತ್ಸವ ನಡೆಸೋದಾಗಿ ಸಚಿವ ಸುಧಾಕರ್ ಘೋಷಿಸಿದ್ದರು. ಆದರೆ ಈಗ ಬಿಜೆಪಿ ಸಂಪ್ರದಾಯದಂತೆ ಮೂರು ತಿಂಗಳಿಗೊಮ್ಮೆ ನಡೆಯುವ ಕಾರ್ಯಕಾರಿಣಿಯನ್ನು ಸಪ್ಟೆಂಬರ್ 11 ಮತ್ತು 12 ರಂದು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲೇ ಈ ಕಾರ್ಯಕಾರಿಣಿ ನಡೆಯೋದರಿಂದ ಅಂದೇ ಜನೋತ್ಸವ ನಡೆಸೋದು ಬಹುತೇಕ ಅನುಮಾನ ಎನ್ನಲಾಗ್ತಿದೆ.

ಬಿಜೆಪಿ ಶಿಸ್ತಿನ ಪಕ್ಷ ಎಂದೇ ಹೆಸರಾಗಿರೋದರಿಂದ ಪಕ್ಷದ ಕಾರ್ಯಕ್ರಮಗಳನ್ನು ಮುಂದೂಡೋದು ಅನುಮಾನ. ಹೀಗಾಗಿ ಈ ಭಾರಿಯೂ ಜನೋತ್ಸವವನ್ನೇ ರದ್ದು ಮಾಡಬಹುದು ಎನ್ನಲಾಗ್ತಿದೆ. ಈ‌ ಮಧ್ಯೆ ಬಿಜೆಪಿಯ ವಲಸಿಗ ಸಚಿವ ಡಾ.ಸುಧಾಕರ್ ತಮ್ಮ ತವರು ಜಿಲ್ಲೆಯಲ್ಲಿ ಈ ಜನೋತ್ಸವ ನಡೆಸಲು ಸಿದ್ದತೆ ನಡೆಸಿದ್ದರು. ಅದು ರದ್ದಾಗಿರೋದರಿಂದ ಮುಖಭಂಗಕ್ಕೆ ಒಳಗಾದ ಡಾ.ಸುಧಾಕರ್ ಎರಡನೇ ಭಾರಿ ಜನೋತ್ಸವ ನಡೆಸಲು ಮೊದಲಿಗಿಂತ ಉತ್ಸಾಹದಲ್ಲಿದ್ದು ಇದೇ ಕಾರಣಕ್ಕೆ ಬಿಜೆಪಿ ಒಪ್ಪಿಗೆ ಪಡೆಯೋ ಮುನ್ನವೇ ಜನೋತ್ಸವವನ್ನು ಘೋಷಿಸಿದ್ದರು ಎನ್ನಲಾಗಿದೆ.

ಇದೇ ವಿಚಾರಕ್ಕೆ ಸ್ವತಃ ಸಿಎಂಗೂ ಮುಜುಗರ ತಂದಿದೆ ಎನ್ನಲಾಗ್ತಿದೆ. ನಾಳೆ ಬಿಜೆಪಿ ನಾಯಕರಾದ ನಿರ್ಮಲ್ ಕುಮಾರ್ ಸುರಾನಾ ಹಾಗೂ ಇತರ ನಾಯಕರು ಬಿಜೆಪಿ ಸಿಎಂ ಭೇಟಿ ಮಾಡಲಿದ್ದು ಈ ವೇಳೆ ಜನೋತ್ಸವದ ಭವಿಷ್ಯ ನಿರ್ಧಾರವಾಗಲಿದೆಯಂತೆ. ಒಟ್ಟಿನಲ್ಲಿ ಬಿಜೆಪಿ ಪಾಲಿಗೆ ಸಚಿವ ಸಂಪುಟದಂತೆ ಜನೋತ್ಸವವೂ ತಲೆನೋವಾಗಿರಂದೂ ಸತ್ಯ.

ಇದನ್ನೂ ಓದಿ : Govinda Karajola : ‘ಮುಪ್ಪಿನಲ್ಲಿ ಸಿದ್ದರಾಮಯ್ಯಗೆ ಮಠ-ಮಾನ್ಯಗಳ ಬಗ್ಗೆ ಜ್ಞಾನೋದವಾಗಿದೆ’ : ಗೋವಿಂದ ಕಾರಜೋಳ ವ್ಯಂಗ್ಯ

ಇದನ್ನೂ ಓದಿ : ಈಗಾಗಲೇ ಐವರನ್ನ ಕೊಂದಿದ್ದೇವೆ ಎಂದ ಬಿಜೆಪಿ ಮಾಜಿ ಶಾಸಕ..!

Janothsava Vs Bjp Executive Committee Meeting CM Bommai in trouble again

Comments are closed.