ಮಂಗಳವಾರ, ಏಪ್ರಿಲ್ 29, 2025
Homekarnatakaಸಚಿವ ಸ್ಥಾನಾಕಾಂಕ್ಷಿಗಳಿಗೆ ಸಿಹಿಸುದ್ದಿ: ಮಂತ್ರಿಗಿರಿ ಬದಲು ಸಿಗುತ್ತೆ‌ ನಿಗಮ ಮಂಡಳಿ ಸ್ಥಾನ

ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಿಹಿಸುದ್ದಿ: ಮಂತ್ರಿಗಿರಿ ಬದಲು ಸಿಗುತ್ತೆ‌ ನಿಗಮ ಮಂಡಳಿ ಸ್ಥಾನ

- Advertisement -

ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆಯಂತೂ ಗಣೇಶನ‌ಮದುವೆಯ ತರ ಮುಂದಕ್ಕೆ ಹೋಗುತ್ತಲೇ ಇದೆ. ಕೆಲವು ಸಚಿವ ಸ್ಥಾನಾಕಾಂಕ್ಷಿಗಳಂತೂ ನಮಗೆ ಸಚಿವ ಸ್ಥಾನ ಸಿಗೋದಿಲ್ಲ ಅಂತ ತೀರ್ಮಾನಿಸಿಯೂ ಆಗಿದೆ. ಹೀಗಿರುವಾಗಲೇ ಸಿಎಂ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಸಚಿವ ಸ್ಥಾನವಂತೂ ಸಿಗೋದಿಲ್ಲ ಕನಿಷ್ಠ ಪಕ್ಷ ನಿಗಮ ಮಂಡಳಿಯನ್ನಾದರೂ ಹಂಚಿಕೆ‌ ಮಾಡೋಣ ಎಂದು ನಿರ್ಧರಿಸಿದ್ದಾರಂತೆ.‌ ಹೀಗಾಗಿ ಆಷಾಢ ಅಮಾವಾಸ್ಯೆಗೂ ಮುನ್ನವೇ ರಾಜ್ಯದ ನಿಗಮ-ಮಂಡಳಿ ಆಕಾಂಕ್ಷಿಗಳಿಗೆ (Ministers Aspirants) ಸಿಹಿಸುದ್ದಿ ಕಾದಿದೆ.

ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಆಗಾಗ ಸಚಿವ ಸ್ಥಾನ ಹಂಚಿಕೆ, ಸಂಪುಟ ವಿಸ್ತರಣೆ, ಪುನಾರಚನೆ ಸದ್ದು ಮಾಡುತ್ತಿದೆ. ಹಲವು ಮುಹೂರ್ತ ಫಿಕ್ಸ್ ಆದರೂ ಹೈಕಮಾಂಡ್ ಮಾತ್ರ ಸಂಪುಟ ವಿಸ್ತರಣೆಯೆಂಬ ಜೇನುಗೂಡಿಗೆ ಕಲ್ಲು ಹೊಡೆಯೋ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ನಿಧಾನಕ್ಕೆ ಅಸಮಧಾನದ ಹೊಗೆ ಆಡಲಾರಂಭಿಸಿದೆ. ಅದರಲ್ಲೂ ಕೇವಲ ಸಚಿವ ಸ್ಥಾನ ಮಾತ್ರವಲ್ಲ ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೂ ಇನ್ನೂ ನೇಮಕವಾಗಿಲ್ಲ. ಹೀಗಾಗಿ ಪಕ್ಷಕ್ಕೆ ದುಡಿದು ನಿಗಮ ಮಂಡಳಿಗಳ‌ ಮೇಲೆ ಕಣ್ಣಿಟ್ಟವರಿಗೂ ಇದು ಅಸಮಧಾನ ತಂದಿತ್ತು. ಈಗ ನಿಗಮ ಮಂಡಳಿಗಳ ಅಧ್ಯಕ್ಷ , ಉಪಾಧ್ಯಕ್ಷ , ನೇಮಕಕ್ಕೆ ಮುಂದಾಗಿರೋ ಸಿಎಂ ಈಗಾಗಲೇ ಲಿಸ್ಟ್ ಸಿದ್ಧಪಡಿಸಿ ಹೈಕಮಾಂಡ್ ಒಪ್ಪಿಗೆ ಪಡೆದಿದ್ದಾರಂತೆ.

ರಾಜ್ಯದ ಕೆಲ ನಿಗಮ ಮಂಡಳಿಗೆ ಹಳಬರನ್ನು ಮುಂದುವರಿಸಿರೋ ಸಿಎಂ ೩೦ ಕ್ಕು ಹೆಚ್ಚು ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳಿಗೂ ನೇಮಕದಲ್ಲಿ ಒತ್ತು ನೀಡಿದ್ದಾರೆ ಎನ್ನಲಾಗ್ತಿದೆ. ನಿಗಮ- ಮಂಡಳಿ ನೇಮಕ ಆಗದೇ ಇರುವುದಕ್ಕೆ ಅಸಮಾಧಾನಗೊಂಡಿದ್ದ ಕೆಲ ನಾಯಕರು ಹಾಗೂ ಕಾರ್ಯಕರ್ತರು ಚುನಾವಣೆ ಎದುರಿಸೋದು ಕಷ್ಟವಾಗಲಿದೆ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಬರಲಿರುವ ಬಿಬಿಎಂಪಿ ಹಾಗೂ ಜಿಪಂ – ತಾಪಂ ಚುನಾವಣೆ ದೃಷ್ಟಿಯಿಂದ ಸಂಘಟನೆ ಹಾಗೂ ಪ್ರಚಾರವನ್ನು ಗಮನದಲ್ಲಿಟ್ಟುಕೊಂಡು ಸಿಎಂ ಬಸವರಾಜ್ ಬೊಮ್ಮಾಯಿ ಅರ್ಹರನ್ನು ನೇಮಿಸಲು ಮುಂದಾಗಿದ್ದಾರೆ.

ಹೈಕಮಾಂಡ್ ಸೂಚನೆ ಮೇರೆಗೆ ನೇಮಕ ಮಾಡಲು ಸಿಎಂ ನಿರ್ಧರಿಸಿದ್ದು, ಶನಿವಾರ ಸಂಜೆಯೊಳಗೆ ಅಥವಾ ಸೋಮವಾರದ ವೇಳೆಗೆ ರಾಜ್ಯದಲ್ಲಿ ನಿಗಮ ಹಾಗೂ ಮಂಡಳಿಗಳಿಗೆ ನೇಮಕ ಆದೇಶ ಹೊರಬೀಳೋ ಸಾಧ್ಯತೆ ಇದೆ. ಸಚಿವ ಸಂಪುಟ ಇನ್ನೂ ವಿಸ್ತರಣೆಯಾಗೋದು ಅನುಮಾನ. ಹೀಗಾಗಿ ಸಚಿವ ಸ್ಥಾನವನ್ನು ನೀರಿಕ್ಷೆ ಮಾಡ್ತಿರೋರಿಗೆ ನಿಗಮ ಮಂಡಳಿ ಕೊಟ್ಟು Something Is Better Then Nothing ಅಂತ ಸಮಾಧಾನ ಮಾಡೋ ಪ್ರಯತ್ನ ಬೊಮ್ಮಾಯಿಯವರದ್ದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

ಇದನ್ನೂ ಓದಿ : Maharashtra Politics : ಮಹಾ ಸರ್ಕಾರದ ಪತನಕ್ಕೆ ಕರ್ನಾಟಕದ ಮಾಸ್ಟರ್ ಮೈಂಡ್ : ಆಫರೇಶನ್ ಕಮಲದ ಹಿಂದೆ ರಮೇಶ್‌ ಜಾರಕಿಹೊಳಿ ?

ಇದನ್ನೂ ಓದಿ : Karnataka cabinet expansion : ಮತ್ತೊಮ್ಮೆ ದೆಹಲಿಗೆ ಸಿಎಂ ಬೊಮ್ಮಾಯಿ : ಮುನ್ನಲೆಗೆ ಬಂತು ಸಂಪುಟ ವಿಸ್ತರಣೆ ಸರ್ಕಸ್

Good news for Ministers Aspirants, Appointment to a corporation board

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular