Earthquake : ಕೊಡಗು, ದ.ಕ ಜಿಲ್ಲೆಯ ಗ್ರಾಮಗಳಲ್ಲಿ ಲಘು ಭೂ ಕಂಪನ

ಮಂಗಳೂರು /ಮಡಿಕೇರಿ : ಕಳೆದ ಮೂರು ದಿನಗಳ ಹಿಂದೆಯಷ್ಟೇ ಹಾಸನ ಜಿಲ್ಲೆಯಲ್ಲಿ ಲಘು ಭೂಕಂಪನ (earthquake) ಸಂಭವಿಸಿದ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿಯೂ ಲಘು ಭೂಕಂಪನ ಸಂಭವಿಸಿದೆ. ಲಘು ಭೂಕಂಪನದಿಂದಾಗಿ ಜನರು ಭೀತಿಗೊಂಡಿದ್ದಾರೆ.

ಇಂದು ಬೆಳಗ್ಗೆ ಸುಮಾರು 9.10 ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಕೊಡಗು ಜಿಲ್ಲೆಯ ಕರಿಕೆ, ತೋಡಿಕಾನ, ಪೆರಾಜೆ, ಸಂಪಾನೆ ಗ್ರಾಮಗಳಲ್ಲಿನ ಜನರಿಗೆ ಭೂಕಂಪನದ ಅನುಭವವಾಗಿದೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಕಂಪನ ಕಂಡು ಬಂದಿದೆ. ಸುಳ್ಯ ತಾಲೂಕಿನ ಮರ್ಕಂಜ, ಕೊಡಪ್ಪಾಲ, ಗೋನಡ್ಕ, ಅರಂತೋಡು ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ.

ಎಷ್ಟು ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದೆ ಅನ್ನೋದು ಇನ್ನೂ ಖಚಿತವಾಗಿಲ್ಲ. ಆದ್ರೆ ಈ ಗ್ರಾಮಗಳಲ್ಲಿನ ಜನರಿಗೆ ಭೂಕಂಪನದ ಅನುಭವವಾಗಿದ್ದು, ಜನರು ಭೀತಿಗೆ ಒಳಗಾಗಿದ್ದಾರೆ. ಹಾಸನದಲ್ಲಿ ಭೂಮಿ ನಡುಗಿದ ಬೆನ್ನಲ್ಲೇ ಇದೀಗ ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಭೂಕಂಪನ ಸಂಭವಿಸುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಉತ್ತಮ ಮಳೆ ಸುರಿಯುತ್ತಿದೆ. ಈ ನಡುವಲ್ಲೇ ಭೂಮಿ ಕಂಪಿಸಿದೆ. ಇನ್ನೊಂದೆಡೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಮಳೆಗಾಲದಲ್ಲಿ ಗುಡ್ಡಕುಸಿತ ಉಂಟಾಗುತ್ತಿದೆ.

ಈ ಬಾರಿ ಮಳೆಗಾಲದ ಆರಂಭದಲ್ಲಿಯೇ ಭೂಮಿ ಕಂಪಿಸಿರುವುದು ಜನರನ್ನು ಸಹಜವಾಗಿಯೇ ಆತಂಕಕ್ಕೆ ನೂಕಿದೆ. ಭೂ ಕಂಪನದ ಕುರಿತು ಅಧಿಕಾರಿಗಳು ಮಾಹಿತಿಯನ್ನು ಪಡೆಯುವ ಕಾರ್ಯವನ್ನು ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದ ಜಿಲ್ಲೆಗಳಲ್ಲಿಯೇ ಭೂ ಕಂಪನ ಉಂಟಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : 10ರೂಪಾಯಿಯಲ್ಲಿ ದೃಷ್ಟಿ ತೆಗೆದು 25 ಸಾವಿರಕ್ಕೆ ಡಿಮ್ಯಾಂಡ್‌ : ಗೃಹ ಪ್ರವೇಶದ ಮನೆಯಲ್ಲಿ ಮಂಗಳಮುಖಿಯರ ದಾಂಧಲೆ

ಇದನ್ನೂ ಓದಿ : ಡೇಟಿಂಗ್ ಆ್ಯಪ್‌ ಮೋಹ : ಚೆಲುವೆ ಅಂದಕ್ಕೆ ಮರುಳಾಗಿ 6 ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌

ಇದನ್ನೂ ಓದಿ : Murali Vijay : ಡಿಕೆ ಕಂಬ್ಯಾಕ್ ಮಾಡಿದ್ದನ್ನು ನೋಡಿ ರೊಚ್ಚಿಗೆದ್ದ ಮುರಳಿ ವಿಜಯ್ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : Ayodhya Sarayu River : ಅಯೋಧ್ಯೆಯ ಸರಯೂ ನದಿಯಲ್ಲಿ ತೀರ್ಥಸ್ನಾನದ ನಡುವಲ್ಲೇ ರೋಮ್ಯಾನ್ಸ್‌ ಮಾಡಿದ ದಂಪತಿಗೆ ಧರ್ಮದೇಟು

earthquake in Dakshina Kannada and Kodagu District

Comments are closed.