Gujarat model : ಗುಜರಾತ್ ಮಾದರಿ ಕರ್ನಾಟಕಕ್ಕೂ ಜಾರಿ : ಹಿರಿಯ ಶಾಸಕರಿಗೆ ಶಾಕ್ ಕೊಟ್ಟ ಲೆಹರ್ ಸಿಂಗ್ ಟ್ವೀಟ್

ಬೆಂಗಳೂರು : Gujarat model: ರಾಜ್ಯದಲ್ಲಿ ಇನ್ನೇನು ವಿಧಾನಸಭಾ ಚುನಾವಣೆ ಘೋಷಣೆಗೆ ಕಾಲ‌ಸನ್ನಿಹಿತವಾಗಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ಚುನಾವಣೆ ಸಿದ್ಧತೆಯಲ್ಲಿ ತೊಡಗಿವೆ. ಈ ಮಧ್ಯೆ ಈಗಾಗಲೇ ವಯೋಮಿತಿ ಕಾರಣಕ್ಕೆ ಬಿಜೆಪಿ ನಾಯಕರು ಸೀಟ್ ಪಡೆಯಲು, ಟಿಕೇಟ್ ಪಡೆಯಲು ಪರದಾಡುತ್ತಿದ್ದಾರೆ.ಇದರ ಮಧ್ಯೆ ಬಿಜೆಪಿಯ ರಾಜ್ಯ ಸಭಾ ಸದಸ್ಯ ಹಾಗೂ ಬಿಎಸ್ವೈ ಆಪ್ತ ಲಹರ್ ಸಿಂಗ್ ಹಿರಿಯ ಬಿಜೆಪಿ ಟಿಕೇಟ್ ಆಕಾಂಕ್ಷಿಗಳಿಗೆ ಶಾಕ್ ನೀಡಿದ್ದಾರೆ.

ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟ ವರಿಗೆ ಚುನಾವಣೆ ಸ್ಪರ್ಧಿಸುವ ಅವಕಾಶವಿಲ್ಲ ಎಂದು ಈಗಾಗಲೇ ಬಿಜೆಪಿ ಹೈಕಮಾಂಡ್ ಹಲವು ಭಾರಿ ಘೋಷಿಸಿದೆ. ಹೀಗಾಗಿ ಸ್ವತಃ ಬಿಎಸ್ವೈ ಸೇರಿದಂತೆ ಹಲವು ಬಿಜೆಪಿ ನಾಯಕರು ರಾಜಕೀಯ ಭವಿಷ್ಯದ ಆತಂಕದಲ್ಲಿದ್ದಾರೆ. ಇದರ ಮಧ್ಯೆಯೇ ಬಿಜೆಪಿಯ ಹಿರಿಯ ನಾಯಕರು ಕಿರಿಯರಿಗೆ ಅವಕಾಶ ನೀಡಬೇಕು ಎಂದು ಬಹಿರಂಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡೋ ಮೂಲಕ ಬಿಜೆಪಿಯ ರಾಜ್ಯಸಭಾ ಸದಸ್ಯ ಲಹರಸಿಂಗ್ ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದಾರೆ.

ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಟ್ವೀಟ್ ಮಾಡಿದ್ದು,”ಗುಜರಾತಿನಲ್ಲಿ ನಡೆದಿರುವುದು ಕರ್ನಾಟಕಕ್ಕೂ ಮಾದರಿಯಾಗಬೇಕು.ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ, ಮಾಜಿ ಡಿಸಿಎಂ ನಿತಿನ್ ಪಟೇಲ್ ಹಮಾಜಿ ಸಚಿವರಾದ ಭೂಪೇಂದ್ರ ಸಿನ್ಹ್ ಚುಡಸಾಮ ,ಪ್ರದೀಪ್ ಸಿನ್ಹ್ ಜಡೇಜಾವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.”“ಮುಂದಿನ ಪೀಳಿಗೆಯ ಬದಲಾವಣೆಗೆ ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಶ್ಲಾಘನೀಯ.

ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ.ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ರಾಜ್ಯದ ಹಿರಿಯ ನಾಯಕರು ಕಿರಿಯರಿಗೆ ದಾರಿ ಮಾಡಿಕೊಡಬೇಕು.” ಎಂದು ಲಹರಸಿಂಗ್ ಟ್ವೀಟ್ ಮಾಡಿದ್ದಾರೆ.ಕರ್ನಾಟಕದ ಹಿರಿಯ ಶಾಸಕರು ಹಾಗು ಸಚಿವರಿಗೆ ಗುಜರಾತ್ ಉದಾಹರಣೆ ನೀಡಿದ ಲಹರ್ ಸಿಂಗ್ ಟ್ವೀಟ್ ಈಗ ಸೋಷಿಯಲ್ ಮೀಡಿಯಾ ಹಾಗೂ ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಗುಜರಾತ್ ಮಾದರಿ ಕರ್ನಾಟಕದಲ್ಲಿ ಅನ್ವಯವಾದರೇ ಯಾವೆಲ್ಲ ನಾಯಕರಿಗೆ ಟಿಕೇಟ್ ಸಿಗೋದು ಅನುಮಾನ ಅನ್ನೋದನ್ನು ಗಮನಿಸೋದಾದರೇ ಜಗದೀಶ್ ಶೆಟ್ಟರ್,ಗೋವಿಂದ್ ಕಾರಜೋಳ, ತಿಪ್ಪಾ ರೆಡ್ಡಿ,ವಿ ಸೋಮಣ್ಣ,ಎಸ್ ಅಂಗಾರ ಸೇರಿದಂತೆ ಹಲವರಿಗೆ ಟಿಕೇಟ್ ಸಿಗೋದು ಅನುಮಾನ. ಆದರೆ ಇವರೆಲ್ಲರೂ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಲಹರಸಿಂಗ್ ಟ್ವೀಟ್ ಬಿಜೆಪಿಯಲ್ಲಿ ಸಂಘರ್ಷ ಹುಟ್ಟುಹಾಕುವ ನೀರಿಕ್ಷೆ ಇದೆ.

ಇದನ್ನೂ ಓದಿ : LDF v/s Kerala Governor: ತಾರಕಕ್ಕೇರಿದ ಸಂಘರ್ಷ; ಡೀಮ್ಡ್ ವಿವಿ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರ ಕೆಳಗಿಳಿಸಿದ ಸರ್ಕಾರ

ಇದನ್ನೂ ಓದಿ : Crime News : ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪತಿ !

Gujarat model implemented in Karnataka too, Lahar Singh Siroya tweet tension senior BJP MLAs

Comments are closed.