Pro Kabaddi League : ಇಂದು ಮಹಾರಾಷ್ಟ್ರ ಡರ್ಬಿ, ಪುಣೇರಿ ವಿರುದ್ಧ ಯು ಮುಂಬಾಗೆ ಸೇಡಿನ ಪಂದ್ಯ

ಪುಣೆ : ಪ್ರೊ ಕಬಡ್ಡಿ ಲೀಗ್-9 ಟೂರ್ನಿಯಲ್ಲಿ (Pro Kabaddi League) ಶುಕ್ರವಾರ ತ್ರಿಪಲ್ ಪಂಗಾ ನಡೆಯಲಿದ್ದು, ಪುಣೇರಿ ಪಲ್ಟನ್ ಹಾಗೂ ಯು ಮುಂಬಾ ನಡುವಿನ ಪಂದ್ಯ ಮಹಾರಾಷ್ಟ್ರ ಡರ್ಬಿಗೆ ಸಾಕ್ಷಿಯಾಗಲಿದೆ.

ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಶುಕ್ರವಾರ ನಡೆಯುವ ಪುಣೇರಿ ಪಲ್ಟನ್ ವಿರುದ್ಧದ ಪಂದ್ಯ ಯು ಮುಂಬಾಗೆ ಸೇಡಿನ ಸಮರವಾಗಿದೆ. ಆಕ್ಟೋಬರ್ 16ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಪುಣೇರಿ ಪಲ್ಟನ್ 30-28ರ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಯು ಮುಂಬಾ ಮುಂದಾಗಿದೆ.

ಕರ್ನಾಟಕದ ಕಬಡ್ಡಿ ದಿಗ್ಗಜ ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್ ಆಡಿರುವ 12 ಪಂದ್ಯಗಳಲ್ಲಿ 7 ಗೆಲುವು, 3 ಸೋಲು ಹಾಗೂ 2 ಟೈ ಫಲಿತಾಂಶದೊಂದಿಗೆ 43 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬೆಂಗಳೂರು ಬುಲ್ಸ್ ತಂಡ 12 ಪಂದ್ಯಗಳಿಂದ 41 ಅಂಕ ಗಳಿಸಿ 2ನೇ ಸ್ಥಾನದಲ್ಲಿದೆ. ಯು ಮುಂಬಾ ತಂಡ 11 ಪಂದ್ಯಗಳಲ್ಲಿ 6ನ್ನು ಗೆದ್ದು 5ರಲ್ಲಿ ಸೋತು 33 ಅಂಕ ಗಳಿಸಿದ್ದು 6ನೇ ಸ್ಥಾನದಲ್ಲಿದೆ. ಪ್ರೊ ಕಬಡ್ಡಿ ಲೀಗ್’ನಲ್ಲಿ ಅಗ್ರ ಆರು ಸ್ಥಾನ ಪಡೆಯುವ ತಂಡಗಳಿಗೆ ಮಾತ್ರ ಪ್ಲೇ ಆಫ್ ಹಂತಕ್ಕೇರುವ ಅವಕಾಶವಿದೆ.

ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ಯು.ಪಿ ಯೋಧಾ ಮತ್ತು ಹರ್ಯಾಣ ಸ್ಟೀಲರ್ಸ್ ತಂಡಗಳು ಮುಖಾಮುಖಿಯಾಗಲಿದ್ರೆ, ದಿನದ ಮೂರನೇ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್, ಚೊಚ್ಚಲ ಆವೃತ್ತಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಇದನ್ನೂ ಓದಿ : Fazal Atrachali : ಪ್ರೊ ಕಬಡ್ಡಿ ಲೀಗ್‌ನಲ್ಲಿ 400 ಟ್ಯಾಕಲ್ ಪಾಯಿಂಟ್ಸ್, ಐತಿಹಾಸಿಕ ದಾಖಲೆ ಬರೆದ ಇರಾನ್ ದಿಗ್ಗಜ ಫಜಲ್ ಅತ್ರಾಚಲಿ

ಪ್ರೊ ಕಬಡ್ಡಿ ಲೀಗ್-9 : ಶುಕ್ರವಾರದ ಪಂದ್ಯಗಳು

  1. ಯು.ಪಿ ಯೋಧಾ Vs ಹರ್ಯಾಣ ಸ್ಟೀಲರ್ಸ್
  2. ಯು ಮುಂಬಾ Vs ಪುಣೇರಿ ಪಲ್ಟನ್
  3. ಪಾಟ್ನಾ ಪೈರೇಟ್ಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Pro Kabaddi League : Maharashtra derby today, Puneri vs Mumba revenge match

Comments are closed.