Hindustan Janata Party : ಹಿಂದೂಸ್ಥಾನ್ ಜನತಾ ಪಾರ್ಟಿ: ಬಿಜೆಪಿಗೆ ಎದುರಾಯ್ತು ಹೊಸ ಶಾಕ್

ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಕಣ ನಿಧಾನಕ್ಕೆ ರಂಗೇರುತ್ತಿದೆ. ಒಂದೆಡೆ ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೇರುವ ಕನಸಿನಲ್ಲಿ ಸರ್ಕಸ್ ನಡೆಸುತ್ತಿದ್ದರೇ, ಇನ್ನೊಂದೆಡೆ ಈ ಭಾರಿ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಎನ್ನುತ್ತ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೇರುವ ಕನಸಿನಲ್ಲಿದ್ದಾರೆ. ಈ ಮಧ್ಯೆ ಹಿಂದುತ್ವದ ಹೋರಾಟಗಾರ ಪ್ರಮೋದ್ ಮುತಾಲಿಕ್ ಹೊಸ ಪಕ್ಷ ಸ್ಥಾಪಿಸುವ ಮುನ್ಸೂಚನೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ನಾಳೆ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಪಕ್ಷ ಹಿಂದೂಸ್ಥಾನ್‌ ಜನತಾ ಪಾರ್ಟಿ (Hindustan Janata Party) ಉದಯವಾಗಲಿದೆ.

ಬಿಜೆಪಿ ಹಾಗೂ ಇತರ ಪಕ್ಷಗಳಿಗೆ ಸೆಡ್ಡು ಹೊಡೆಯುವ ಉದ್ದೇಶದಿಂದ ಹಾಗೂ ಹಿಂದುತ್ವವನ್ನೇ ಅಜೆಂಡಾವಾಗಿಟ್ಟುಕೊಂಡು ಕೆಲಸ‌ ಮಾಡಲು ಪಕ್ಷವನ್ನು ಹುಟ್ಟುಹಾಕಲಾಗುತ್ತಿದೆ ಎನ್ನಲಾಗಿದ್ದು, ನಾಡಿನ ಹಲವು ಮಠಾಧೀಶರು ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರಂತೆ. ಹಿಂದೂಸ್ತಾನ ಜನತಾ ಪಾರ್ಟಿ ಎಂಬ ಹೊಸ ಪಕ್ಷ ನಾಳೆ ಸ್ಥಾಪನೆಯಾಗಲಿದೆ. ವಿನಾಯಕ್ ಮಾಳದಕರ್ ಪಕ್ಷದ ಅಧ್ಯಕ್ಷರಾಗಿದ್ದು, ಸದ್ಯದಲ್ಲೇ ಇತರ ಪದಾಧಿಕಾರಿಗಳ ನೇಮಕ ಸಹ ನಡೆಯಲಿದೆಯಂತೆ.

ನಾಳೆ ಬೆಂಗಳೂರಿನ ಶರಣ ಸೇವಾ ಸಮಾಜದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದ್ದು, ಹೊಸ ಪಾರ್ಟಿಗೆ ಮಠಾಧೀಶರಿಂದಲೇ ಚಾಲನೆ ಸಿಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದ್ದು, 225 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಪಕ್ಷದ ಪ್ರಣಾಳಿಕೆ ಕೂಡ ಸಿದ್ಧವಾಗಿದ್ದು, ಹಿಂದುತ್ವದ ಬೆಳವಣಿಗೆ ಹಾಗೂ ರಕ್ಷಣೆಗೆ ಬದ್ಧ ಎಂದು ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದೆ.

ಪಕ್ಷದ (Hindustan Janata Party) ಪ್ರಮುಖ ಧ್ಯೇಯೋದ್ಧೇಶಗಳು ಏನು ಅನ್ನೋದಾದರೇ ಗಮನಿಸೋದಾದರೇ,

  • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂ ಭವನ ನಿರ್ಮಾಣ
  • ಬಡ ಜನರಿಗೆ 100 ಯೂನಿಟ್ ವರೆಗೆ ಉಚಿತ ವಿದ್ಯುತ್
  • ಮಹಿಳೆಯರಿಗೆ ಮಹಾನಗರ ಸಾರಿಗೆ ಉಚಿತ ಪ್ರಯಾಣ
  • ಎಲ್ಲಾ ವರ್ಗದ ಶಾಲೆ ಮಕ್ಕಳಿಗೆ ಉಚಿತ ಬಸ್ ಪಾಸ್
  • ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು
  • ಸರ್ಕಾರಿ ಶಾಲೆಗಳ ಆಧುನೀಕರಣ
  • ಎಲ್ಲರಿಗೂ ವಿಶ್ವದರ್ಜೆಯ ಉಚಿತ ಶಿಕ್ಷಣ ಸೌಲಭ್ಯ
  • ಬೀದಿ ವ್ಯಾಪಾರಿಗಳಿಗೆ ಮನೆಕಟ್ಟಲು 5 ಲಕ್ಷ ರೂ. ಸಹಾಯಧನ
  • ಸ್ಥಳೀಯ ಯುವಜನರಿಗೆ ಸರ್ಕಾರಿ, ಖಾಸಗಿ ಉದ್ಯೋಗ
  • ಪ್ರತಿ ಜಿಲ್ಲೆಗಳಲ್ಲಿ ಐಟಿ-ಬಿಟಿ ಪ್ರಾರಂಭಕ್ಕೆ ಅವಕಾಶ
  • ರಿಕ್ಷಾ ಚಾಲಕರು, ಗಾರ್ಮೆಂಟ್ ನೌಕರರಿಗೆ ಉಚಿತ ವಿಮೆ
  • ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ
  • ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಏಕರೂಪ ಶುಲ್ಕ
  • ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾವೇರಿ ನೀರು ಸರಬರಾಜು.
  • ಮಹದಾಯಿ ನೀರನ್ನ ಶೀಘ್ರ ಹರಿಸುವುದು
  • ಇದು ಹೊಸ ಪಾರ್ಟಿಯ ಪ್ರಣಾಳಿಕೆಯಾಗಿದ್ದು ನಾಳೆ ಅಧಿಕೃತವಾಗಿ ಬಿಡುಗಡೆಯಾಗಲಿದೆ.ಇದು ಹೊಸ ಪಾರ್ಟಿಯ ಪ್ರಣಾಳಿಕೆಯಾಗಿದ್ದು ನಾಳೆ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಹಿಂದು ಮತದಾರರ ಮೇಲೆ ಕಣ್ಣಿಟ್ಟ ಹೊಸ ಪಕ್ಷ ಉದಯವಾಗುತ್ತಿದ್ದು, ಇದರಿಂದ ಅಧಿಕಾರದ ಕನಸಿನಲ್ಲಿರುವ ಬಿಜೆಪಿಗೆ ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ : Pramod Muthalik : ಹಿಂದುತ್ವಕ್ಕಾಗಿ ಹೊಸ ಪಕ್ಷ, ಯೋಗಿ ಮಾದರಿ ಆಡಳಿತ : ಬಿಜೆಪಿಗೆ ಶಾಕ್‌ ಕೊಟ್ಟ ಪ್ರಮೋದ್‌ ಮುತಾಲಿಕ್‌

ಇದನ್ನೂ ಓದಿ : Robbery Woman : ಕುಂದಾಪುರದಲ್ಲಿ ಶಾಲೆಯಿಂದ ಬರುವ ಮಗುವಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ, ಚಿನ್ನಾಭರಣ ದರೋಡೆ

Hindustan Janata Party Launch Tomorrow Trouble Bjp in Karnataka

Comments are closed.