Raksha Bandhan 2022 : ನೀವು ರಕ್ಷಾ ಬಂಧನದ ಬೆಸ್ಟ್‌ ಗಿಫ್ಟ್‌ ಹುಡುಕಾಟದಲ್ಲಿದ್ದರೆ, ಈ ಐಡಿಯಾಗಳನ್ನೊಮ್ಮೆ ಗಮನಿಸಿ

ರಕ್ಷಾ ಬಂಧನ (Raksha Bandhan 2022) ಹಬ್ಬ ಇದು ಸಹೋದರ ಬಾಂಧ್ಯವದ ಪ್ರತೀಕ. ಚಂದದ ರಾಖಿಯನ್ನು ಸಹೋದರರಿಗೆ ಕಟ್ಟುವ ಮೂಲಕ ಈ ಸಂಬಂಧ ಗಟ್ಟಿಯಾಗಿರಲಿ ಎಂದು ಹಾರೈಸುವ ಹಬ್ಬ. ಕೆಲವರಿಗೆ ಚಂದದ ರಾಖಿ ಆಯ್ಕೆ ಮಾಡುವುದು ಕಷ್ಟವಾದರೆ, ರಾಖಿ ಕಟ್ಟಿಸಿಕೊಂಡವರಿಗೆ, ಏನು ಗಿಫ್ಟ್‌ (Gift) ಕೊಡುವುದು ಎಂಬ ಯೋಚನೆ. ಕೆಲವು ಮನೆಗಳಲ್ಲಿ ಹಣ ಕೊಡುವುದು ರೂಢಿ. ಆದರೆ ಪ್ರೀತಿಯಿಂದ ಗಿಫ್ಟ್‌ ಆರಿಸಿದಾಗ ರಕ್ಷಾ ಬಂಧನ ಹಬ್ಬಕ್ಕೆ ಇನ್ನಷ್ಟು ಮೆರಗು. ಏಕೆಂದರೆ, ಈ ಹಬ್ಬದ ವಿಶೇಷವೇ, ರಾಖಿ ಕಟ್ಟಿದವರಿಗೆ ‘ಗಿಫ್ಟ್‌’ ಕೊಡುವುದಾಗಿದೆ. ಅವರು ಇಷ್ಟಪಡುವ ವಸ್ತುವನ್ನು ಹುಡುಕಿ ಉಡುಗೊರೆ ಕೊಟ್ಟಾಗ ಆಗುವ ಸಂತೋಷ ಹೆಚ್ಚು ಆಪ್ತವೆನಿಸುತ್ತದೆ.

ನಿಮಗೆ ಯಾವ ಗಿಫ್ಟ್‌ ಕೊಡಬಹುದು ಎಂಬ ಗೊಂದಲವಿದ್ದರೆ, ಇಲ್ಲಿ ಕೆಲವು ಐಡಿಯಾಗಳಿವೆ. ನಿಮಗೆ ಸೂಕ್ತವೆನಿಸುವ ಮತ್ತು ನಿಮ್ಮ ಬಜೆಟ್‌ನಲ್ಲೇ ಬರುವ ವಸ್ತುಗಳನ್ನೇ ಆಯ್ದುಕೊಳ್ಳಬಹುದು. ಕೆಲವರು ಗ್ಯಾಜೆಟ್‌ ಪ್ರಿಯರಾದರೆ, ಇನ್ನು ಕೆಲವರು ಸೌಂದರ್ಯ ಪ್ರಿಯರಾಗಿರುತ್ತಾರೆ. ಅದಕ್ಕಾಗಿಯೇ ಇಲ್ಲಿ ಎಲ್ಲಾ ರೀತಿಯ ಐಡಿಯಾಗಳಿವೆ. ನಿಮಗೆ ಬೆಸ್ಟ್‌ ಅನಿಸಿದ್ದನ್ನು ಆಯ್ದುಕೊಳ್ಳಿ ಮತ್ತು ರಕ್ಷಾ ಬಂಧನ ಹಬ್ಬವನ್ನು ಸಂತೋಷದಿಂದ ಆಚರಿಸಿ.

ಜ್ಯೂವೆಲರಿ ಬ್ಯಾಗ್‌ ಅಥವಾ ಬಾಕ್ಸ್‌ :
ನಿಮ್ಮ ಸಹೋದರಿಗೆ ಎಲ್ಲಾ ವಸ್ತುಗಳನ್ನು ನೀಟಾಗಿ ಜೋಡಿಸಿಟ್ಟುಕೊಳ್ಳುವ ಹವ್ಯಾಸವಿದ್ದರೆ ಜ್ಯೂವೆಲರಿ ಬಾಕ್ಸ್‌ ಅಥವಾ ಬ್ಯಾಗ್‌ ಆಯ್ಕೆ ಮಾಡಬಹುದು. ಚೆಂದದ ಡಿಸೈನ್‌ ಬ್ಯಾಗ್‌ಗಳು ಅಥವಾ ಬಾಕ್ಸ್‌ ಗಳನ್ನು ನೀಡುವುದರ ಮೂಲಕ ಅವರ ಸಂತೋಷವನ್ನು ಹೆಚ್ಚಿಸಬಹುದು. ಇವಲ್ಲದೇ , ಬ್ರಾಂಡೆಡ್‌ ಪರ್ಸ್‌ ಅಥವಾ ವ್ಯಾಲೆಟ್‌ ಯೋಚಿಸಬಹುದು.

ಸ್ಕಿನ್‌ ಕೇರ್‌ ಪ್ರೊಡಕ್ಟ್‌ ಅಥವಾ ಪರ್‌ಫ್ಯೂಮ್‌ಗಳು:
ಸ್ಕಿನ್‌ ಕೇರ್‌ ಉತ್ಪನ್ನಗಳಾದ ಫೇಸ್ ವಾಶ್‌, ಹೆರ್‌ ಸಿರಮ್‌, ಸ್ಕ್ರಬ್‌ ಮುಂತಾದವುಗಳನ್ನು ಉಡುಗೊರೆಯಾಗಿ ನೀಡಬಹುದು. ಅವರ ಸ್ಕಿನ್‌ಗೆ ಹೊಂದುವ ಮತ್ತು ಅವರು ಉಪಯೋಗಿಸುವ ಬ್ರಾಂಡ್‌ಗಳನ್ನೇ ಆಯ್ದುಕೊಳ್ಳಿ. ಇವುಗಳ ಜೊತೆಗೆ ಕೆಲವು ಲಿಮಿಟೆಡ್‌ ಎಡಿಷನ್‌ ಪರ್‌ಫ್ಯೂಮ್‌ಗಳನ್ನು ಆಯ್ದುಕೊಳ್ಳಿ. ಈ ಗಿಫ್ಟ್‌ ಐಡಿಯಾ ನಿಜವಾಗಿಯೂ ಅವರ ಮುಖದಲ್ಲಿ ಮೆಚ್ಚುಗೆಯ ನಗೆ ಬೀರವುದು.

ಹೇರ್‌ ಮತ್ತು ನೇಲ್‌ ಐಟಂಗಳು :
ಹೇರ್‌ ಮತ್ತು ನೇಲ್‌ ಬಗ್ಗೆ ಅತಿಯಾದ ಆಸಕ್ತಿ ಹೊಂದಿದ್ದರೆ, ಅವರಿಗೆ ಹೇರ್‌ ಸ್ಟ್ರೈಟ್ನರ್‌, ಕರ್ಲಿಂಗ್‌ ಐರನ್‌ ಮುಂತಾದ ಕೂದಲಿನ ಪರಿಕರಗಳನ್ನು ಗಿಫ್ಟ್‌ ಆಗಿ ಕೊಡಬಹುದು. ಇದರ ಜೊತೆಗೆ ನೈಲ್‌ ಪೇಂಟ್‌ ಮತ್ತು ಪರಿಕರಗಳನ್ನು ನೀಡಬಹುದು.

ಕೂಲ್‌ ಗ್ಯಾಜೆಟ್ಸ್‌ :
ಗ್ಯಾಜೆಟ್‌ಗಳು ನಮ್ಮ ದೈನಂದಿನ ಜೀವನಶೈಲಿಯ ಅಗತ್ಯಗಳನ್ನು ಬದಲಿಸಿವೆ. ಓದುವ ಹವ್ಯಾಸ ಇರುವವರಿಗೆ ತಾಂತ್ರಿಕ ಯುಗದ ಕಿಂಡಲ್ಸ್‌ಗಳನ್ನು ಗಿಫ್ಟ್‌ ಆಗಿ ಕೊಡಬಹುದು. ಕಿಂಡಲ್‌ನಲ್ಲಿ ಹಲವಾರು ಪ್ರಕಟಿತ ಪುಸ್ತಕಗಳನ್ನು ಕಾಣಬಹುದು. ಮತ್ತು ಇದು ಅತ್ಯುತ್ತಮ ಗಿಫ್ಟ್‌ ಆಗಬಹುದು. ಡ್ರಾಯಿಂಗ್‌ನಲ್ಲಿ ಆಸಕ್ತಿ ಇರುವವರಿಗೆ ಡ್ರಾಯಿಂಗ್‌ ಪೆನ್‌ ಟ್ಯಾಬ್ಲೆಟ್‌ ಖರಿದಿಸಬಹುದು. ಇದು ಖಂಡಿತವಾಗಿಯೂ ಅವರ ನೆಚ್ಚಿನ ಗಿಫ್ಟ್‌ ಆಗಬಲ್ಲದು.

ಅಮೂಲ್ಯ ಹರಳುಗಳು :
ಪರಿಸರವನ್ನು ಸ್ವಚ್ಛಗೊಳಿಸುವ ಮತ್ತು ಧನಾತ್ಮಕತೆ ಬೀರುವ ಅಮೂಲ್ಯ ಹರಳುಗಳನ್ನು ಉಡುಗೊರೆಯಾಗಿ ಆಯ್ದುಕೊಳ್ಳಬಹುದು. ಕೋಣೆಯಲ್ಲಿ ಚಂದದ ಜಾಗ ಆಕ್ರಮಿಸುವ ಈ ಹರಳುಗಳ ಜೊತೆಗೆ ಪರಿಮಳಯುಕ್ತ ಕ್ಯಾಂಡಲ್‌ಗಳನ್ನು ಸೇರಿಸಿಕೊಳ್ಳಬಹುದು.

ಎಲೆಕ್ಟ್ರಾನಿಕ್‌ ಐಟಂಗಳು :
ಇಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್‌ ಐಟಂಗಳು ಬಹುತೇಕ ಎಲ್ಲಾ ಜಾಗಗಳನ್ನು ಆವರಿಸಿಕೊಂಡಿವೆ. ವೈರ್‌ಲೆಸ್‌ ಇಯರ್‌ ಫೋನ್‌ ಅಥವಾ ಇಯರ್‌ ಬಡ್‌ಗಳು ಇದಕ್ಕೆ ಉತ್ತಮ ಉದಾಹರಣೆ. ಇವು ಫೋನ್‌ ಮಾಡಲು, ಮೀಟಿಂಗ್‌ ಅಟೆಂಡ್‌ ಆಗಲು, ಹಾಡು ಕೇಳಲು ಎಲ್ಲದಕ್ಕೂ ಬೆಸ್ಟ್‌. ಉತ್ತಮ ಇಯರ್‌ ಫೋನ್‌ ಅಥವಾ ಇಯರ್‌ ಬಡ್‌ಗಳನ್ನು ಆಯ್ದು ಕೊಳ್ಳಬಹುದು. ಅಷ್ಟೇ ಅಲ್ಲದೇ ವಿಡಿಯೋ ಗೇಮ್‌, ಬೋರ್ಡ್‌ ಗೇಮ್‌ಗಳ ಆಯ್ಕೆಯನ್ನು ಮಾಡಬಹುದು.

ಇದನ್ನೂ ಓದಿ : ITR Refund : ನಿಮ್ಮ ಆದಾಯ ತೆರಿಗೆ ರಿಫಂಡ್‌ ಆಗಿದ್ಯಾ? ಚೆಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Hyundai Alcazar : ಅತಿ ಕಡಿಮೆ ಬೆಲೆಯ ಪ್ರೆಸ್ಟೀಜ್‌ ಎಕ್ಸಿಕ್ಯುಟಿವ್‌ ಬಿಡುಗಡೆ ಮಾಡಿದ ಹುಂಡೈ! ಇದರ ವಿಶೇಷತೆ ಮತ್ತು ಬೆಲೆ ಹೀಗಿದೆ…

Raksha Bandhan 2022 best gift ideas

Comments are closed.