ಹುಬ್ಬಳ್ಳಿ : ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಸಚಿವರಾಗಿದ್ದ ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ(Jabbar Khan Honnalli) ಇಹಲೋಕವನ್ನು ತ್ಯಜಿಸಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ಇಂದು (ಅಕ್ಟೋಬರ್ 7)ರಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾಜಿ ಸಚಿವ ಜಬ್ಬಾರ್ ಖಾನ್‌ಗೆ 80 ವರ್ಷ ವಯಸ್ಸಾಗಿದೆ.
ಎಸ್.ಎಮ್.ಕೃಷ್ಣ ಸರಕಾರ ಅವಧಿಯಲ್ಲಿ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ದಿನಗಳ ಹಿಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ರಾಜಕೀಯದಲ್ಲಿ ಇದ್ದಾಗ ಜಬ್ಬಾರ್ ಖಾನ್ ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದರು. ಇವರ ನಿಧನ ಸುದ್ದಿಯನ್ನು ತಿಳಿದ ಅನೇಕ ರಾಜಕೀಯ ಗಣ್ಯರು ಹಾಗೂ ನಾಯಕರುಗಳು ಸಂತಾಪವನ್ನು ಸಲ್ಲಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ತಮ್ಮ ಸಾಮಾಜಿಕ ಜಾಲತಾಣ ಟ್ವೀಟರ್‌ನ ಮೂಲಕ ಸಂತಾಪ ಸೂಚಿಸಿದ್ದಾರೆ.”ಹಿರಿಯ ರಾಜಕಾರಣಿ, ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಮಾಜಿ ಸಚಿವ ಶ್ರೀ ಜಬ್ಬಾರ ಖಾನ್ ಹೊನ್ನಳ್ಳಿ (Jabbar Khan Honnalli)ಅವರು ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಕುಟುಂಬದರಲ್ಲಿ ನನ್ನ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಹಿರಿಯ ರಾಜಕಾರಣಿ, ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಮಾಜಿ ಸಚಿವ ಶ್ರೀ ಜಬ್ಬಾರಖಾನ್ ಹೊನ್ನಳ್ಳಿ ಅವರು ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ಅವರ ಕುಟುಂಬದವರಲ್ಲಿ ನನ್ನ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ.
— B.S.Yediyurappa (@BSYBJP) October 7, 2022
ಇದನ್ನೂ ಓದಿ : HD Kumaraswamy : SSC ಪರೀಕ್ಷೆಯನ್ನು ಕನ್ನಡದಲ್ಲೂ ನಡೆಸಿ: ಕೇಂದ್ರಕ್ಕೆ HDK ಆಗ್ರಹ
ಇದನ್ನೂ ಓದಿ : ST reservation:ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಸುಳಿವು ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
ಇದನ್ನೂ ಓದಿ : Minister Prabhu Chavan:‘ಜಾಮೀನಿನ ಮೇಲೆ ಹೊರಗಿರುವವರಿಂದ ಎಂತಹ ಭಾರತ್ ಜೋಡೋ ನಿರೀಕ್ಷಿಸಬಹುದು’ : ಸಚಿವ ಪ್ರಭು ಚವ್ಹಾಣ್ ವ್ಯಂಗ್ಯ
ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ಎಸ್.ಎಮ್.ಕೃಷ್ಣ ಸಂಪುಟದಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿ ಕಾರ್ಯ ಸಲ್ಲಿಸಿದ್ದು, ಅವರು ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮುಸ್ಲಿಂ ನಾಯಕರಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಸರಳ, ಸಜ್ಜನಿಕೆಯಿಂದ ತಮ್ಮ ಛಾಪುವನ್ನು ಮೂಡಿಸುವುದರ ಮೂಲಕ ಆಗಿನ ಕಾಂಗ್ರೆಸ್ ನಾಯಕರಲ್ಲಿ ಒಬ್ಬ ಬಲಿಷ್ಠ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.
Jabbar Khan Honnalli, who was a minister in former CM SM Krishna’s cabinet, passed away