Mobile Game : ಮೊಬೈಲ್‌ ಕಾರಣಕ್ಕೆ ಅಪ್ಪ ಮಗ ಇಬ್ಬರೂ ನೇಣಿಗೆ ಶರಣು

ಚೆನ್ನೈ : ( Mobile Game ) ಸದಾ ಕಾಲ ಮೊಬೈಲ್ ನಲ್ಲೇ ಮುಳುಗಿ ಇರುತ್ತಿದ್ದ ಕಾರಣಕ್ಕೆ ತಂದೆಯೋರ್ವ ಮಗನಿಗೆ ಬುದ್ದಿಮಾತು ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಮಗ ನೇಣಿಗೆ ಶರಣಾಗಿದ್ದಾನೆ. ಮಗ ತನ್ನಿಂದ ಸಾವಿಗೆ ಶರಣಾಗಿದ್ದಾನೆ ಅನ್ನೋ ಪಶ್ಚಾತಾಪದಿಂದಲೇ ತಂದೆಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನ ಕುಂದ್ರತೂರು ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿ ಕುಂದ್ರತೂರಿನ ತಿರುವಳ್ಳುವರ್‌ ಪ್ರದೇಶದ ಬಡಗಿಯಾಗಿದ್ದು, ಸುಂದರ್‌ (40 ವರ್ಷ )ಎಂದು ಗುರುತಿಸಲಾಗಿದೆ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸುಂದರ್‌ ನ ಕಿರಿಯ ಮಗ ನವೀನ್‌ ಯಾವಾಗಲೂ ಮೊಬೈಲ್ ನಲ್ಲೆ ಮುಳುಗಿರುತ್ತಿದ್ದ. ಓದುವುದನ್ನು ಬಿಟ್ಟು ಮೊಬೈಲ್‌ ನಲ್ಲಿ ಗೇಮ್‌ ( Mobile Game ) ಅಡುತ್ತಿರುವುದನ್ನು ಗಮನಿಸಿದ ತಂದೆ ಮೊಬೈಲ್‌ ಬದಿಗಿಟ್ಟು ಓದಿನ ಕಡೆ ಗಮನ ಕೊಡುವಂತೆ ಹೇಳಿದ್ದಾರೆ. ಆದರೆ ಅಪ್ಪ ಗದರಿಸಿದ್ದಾರೆಂದು ಆತ ಮನನೊಂದು ಮನೆಯಲ್ಲಿ ಯಾರು ಇಲ್ಲದಾಗ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊರಗೆ ಹೋದ ಸುಂದರ್‌ ಮನೆಗೆ ವಾಪಾಸ್‌ ಬಂದಾಗ ಅಕ್ಕಪಕ್ಕದ ಮನೆಯವರು ಮಗನ ಸಾವಿನ ಸುದ್ಧಿಯನ್ನು ತಿಳಿಸಿದ್ದಾರೆ. ತನ್ನ ಮಗ ಸೀಲಿಂಗ್‌ ಫ್ಯಾನ್‌ ಗೆ ಸೀರೆಯನ್ನು ಕಟ್ಟಿ ನೇಣು ಬಿಗಿದುಕೊಂಡಿರುವುದನ್ನು ಕಂಡು ಪಶ್ಚತ್ತಾಪದಿಂದ ಅಡುಗೆ ಮನೆಗೆ ಹೋಗಿ ಚಾಕುವಿನಿಂದ ತನ್ನ ಕೈ ಮತ್ತು ಕುತ್ತಿಗೆಯನ್ನು ಕೊಯ್ದುಕೊಂಡು ನಂತರ ಕೋಣೆಗೆ ತೆರಳಿ ಕೋಣೆಯ ಬಾಗಿಲಿಗೆ ಬೀಗ ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ.

ಇದನ್ನೂ ಓದಿ : Gang-Raped:ಶಾಲಾ ವಾಶ್​​ರೂಮ್​ನಲ್ಲಿ 11 ವರ್ಷದ ಬಾಲಕಿ ಮೇಲೆ ಸೀನಿಯರ್​ಗಳಿಂದ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : Instagram Like 2 Murder : ಇನ್ಸ್ಟಾಗ್ರಾಂ ನಲ್ಲಿ ಲೈಕ್‌,ಕಮೆಂಟ್‌ ವಿಚಾರಕ್ಕೆ ಜಗಳ: ಇಬ್ಬರ ಕೊಲೆ

ಇದನ್ನೂ ಓದಿ : Priyanka chopra:ಇರಾನ್‌ ಹಿಜಾಬ್‌ ವಿವಾದ :ಮಹಿಳೆಯರಿಗೆ ಬೆಂಬಲ ನೀಡಿದ ಪ್ರಿಯಾಂಕ ಚೋಪ್ರಾ

ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ದಾಸರಾಗಿ ಬಿಟ್ಟಿದ್ದಾರೆ. ತಮ್ಮ ಅತ್ಯಮೂಲ್ಯವಾದ ಸಮಯವನ್ನು ಸದಾ ಮೊಬೈಲ್ ನಲ್ಲೇ ಕಳೆಯುತ್ತಿದ್ದಾರೆ. ಪೋಷಕರು ಕೂಡ ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿದ್ದರೂ ಕೂಡ ನಿರ್ಲಕ್ಷ್ಯವನ್ನು ವಹಿಸುತ್ತಿದ್ದಾರೆ. ಇದೀಗ ಮೊಬೈಲ್ ಬಳಸದಂತೆ ಮಗನಿಗೆ ಬುದ್ದಿಮಾತು ಹೇಳಿದ್ದೇ ತಪ್ಪಾಗಿ ಹೋಗಿದೆ. ಮಗನ ಮೇಲಿನ ಕಾಳಜಿಯಿಂದ ಅಪ್ಪ ಮೊಬೈಲ್‌ ನಿಂದ ದೂರವಿರುವುದಾಗಿ ಮಗನಿಗೆ ಗದರಿಸಿದ್ದು, ಮಗನು ಅಪ್ಪನ ಮಾತನಿಂದ ಮನನೊಂದು ಸೀರೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿದ್ದಾನೆ. ಇದನ್ನು ನೋಡಿದ ತಂದೆ ಸ್ವಲ್ಪ ಸಮಯದಲ್ಲೆ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೋಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕ್ರೋಮ್‌ ಪೇಟೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲದೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದ, ತನಿಖೆಯನ್ನು ನಡೆಸುತ್ತಿದ್ದಾರೆ.

(Mobile Game) A father gave a word of wisdom to his son because he was always engrossed in his mobile phone. Enraged by this, the son surrendered to hanging. The incident took place in Chennai’s Kundrathur where the father committed suicide by hanging himself because his son had surrendered to death.

Comments are closed.