Gang-Raped:ಶಾಲಾ ವಾಶ್​​ರೂಮ್​ನಲ್ಲಿ 11 ವರ್ಷದ ಬಾಲಕಿ ಮೇಲೆ ಸೀನಿಯರ್​ಗಳಿಂದ ಸಾಮೂಹಿಕ ಅತ್ಯಾಚಾರ

ದೆಹಲಿ :Gang-Raped : ರಾಷ್ಟ್ರ ರಾಜಧಾನಿ ದೆಹಲಿಯ ಕೇಂದ್ರೀಯ ವಿದ್ಯಾಲಯದಲ್ಲಿ 11 ವರ್ಷದ ವಿದ್ಯಾರ್ಥಿನಿಯರ ಮೇಲೆ ಇಬ್ಬರು ಸೀನಿಯರ್​ಗಳು ಸಾಮೂಹಿಕ ಅತ್ಯಾಚಾರವೆಸಗಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಕೇಂದ್ರೀಯ ವಿಶ್ವ ವಿದ್ಯಾಲಯದ ಶೌಚಾಲಯದಲ್ಲಿ ಈ ಕೃತ್ಯ ಎಸಗಲಾಗಿದೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆ ಜುಲೈ ತಿಂಗಳಲ್ಲಿಯೇ ನಡೆದಿದೆ. ದೆಹಲಿ ಮಹಿಳಾ ಆಯೋಗವು ಈ ವಿಚಾರದ ಬಗ್ಗೆ ಬೆಳಕು ಚೆಲ್ಲಿದ ಬಳಿಕ ಈ ವಾರದ ಆರಂಭದಲ್ಲಿ ಬಾಲಕಿಯ ಕುಟುಂಬವು ಪೊಲೀಸ್​ ಠಾಣೆ ಮೆಟ್ಟಿಲೇರಿದೆ.


ಈ ಪ್ರಕರಣ ಸಂಬಂಧ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್​ ದೆಹಲಿ ಪೊಲೀಸರು ಹಾಗೂ ಶಾಲಾ ಪ್ರಾಂಶುಪಾಲರಿಗೆ ನೋಟಿಸ್​ ಜಾರಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಜುಲೈ ತಿಂಗಳಲ್ಲಿ ಇಬ್ಬರು ಸೀನಿಯರ್​ಗಳು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಬಾಲಕಿ ಮಾಹಿತಿ ನೀಡಿದ್ದಾಳೆ.ನಾನು ತನ್ನ ತರಗತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದೆ. ಅಲ್ಲದೇ ಈ ಬಗ್ಗೆ ನಾನು ಅವರ ಬಳಿಯಲ್ಲಿ ಕ್ಷಮೆಯಾಚನೆ ಕೂಡ ಮಾಡಿದ್ದೆ. ಆದರೆ ನನ್ನನ್ನು ನಿಂದಿಸಿದ ಸೀನಿಯರ್​ಗಳು ನನ್ನನ್ನು ವಾಶ್​ರೂಮ್​ನ ಒಳಗೆ ಕರೆದುಕೊಂಡು ಹೋದರು. ವಾಶ್​ರೂಮ್​ಗೆ ಒಳಗಿನಿಂದ ಬೀಗವನ್ನು ಹಾಕಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.

ಈ ಘಟನೆ ಬಗ್ಗೆ ಬಾಲಕಿಯು ಶಿಕ್ಷಕಿಗೆ ದೂರನ್ನು ನೀಡಿದ್ದಳು . ಇದಾದ ಬಳಿಕ ಬಾಲಕರನ್ನು ಶಾಲೆಯಿಂದ ಹೊರಕಳಿಸಲಾಯ್ತು ಹಾಗೂ ಈ ಪ್ರಕರಣವನ್ನು ಅಲ್ಲಿಯೇ ಮುಚ್ಚಿ ಹಾಕಲಾಗಿತ್ತು. ಆದರೆ ಹೇಗೋ ಈ ಘಟನೆಯ ಬಗ್ಗೆ ದೆಹಲಿ ಮಹಿಳಾ ಆಯೋಗ ಮಾಹಿತಿ ತಿಳಿದುಕೊಂಡಿತ್ತು. ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡ ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರು ಹಾಗೂ ಶಾಲಾ ಪ್ರಾಂಶುಪಾಲರಿಗೆ ಈ ಪ್ರಕರಣ ಸಂಬಂಧ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವರದಿಯನ್ನು ನೀಡುವಂತೆ ನೋಟಿಸ್​ ಜಾರಿ ಮಾಡಿದೆ.

ಮಹಿಳಾ ಆಯೋಗವು ಎಫ್​ಐಆರ್​ ಪ್ರತಿ ಹಾಗೂ ಈ ವಿಷಯದಲ್ಲಿ ಈವರೆಗೆ ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರನ್ನು ಕೇಳಿದೆ. ಇದರ ಜೊತೆಯಲ್ಲಿ ಈ ವಿಚಾರವನ್ನು ಪೊಲೀಸರಿಂದ ಮುಚ್ಚಿಟ್ಟ ಶಾಲಾ ಶಿಕ್ಷಕರು ಹಾಗೂ ಇತರೆ ಯಾವುದೇ ಸಿಬ್ಬಂದಿ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ಹಾಗೂ ಶಾಲಾ ಆಡಳಿತ ಮಂಡಳಿಯನ್ನು ಕೇಳಿದೆ.

ಇದನ್ನು ಓದಿ : India vs South Africa 1st ODI: ಪದಾರ್ಪಣೆಯ ಪಂದ್ಯದಲ್ಲೇ ಭಾರತವನ್ನು ಸೋಲಿಸಿದ ಧೋನಿ ಶಿಷ್ಯ

ಇದನ್ನೂ ಓದಿ : Priyanka chopra:ಇರಾನ್‌ ಹಿಜಾಬ್‌ ವಿವಾದ :ಮಹಿಳೆಯರಿಗೆ ಬೆಂಬಲ ನೀಡಿದ ಪ್ರಿಯಾಂಕ ಚೋಪ್ರಾ

Delhi: 11-Year-Old Girl Allegedly Gang-Raped By Seniors Inside Kendriya Vidyalaya Washroom

Comments are closed.