ಬೆಂಗಳೂರು : ರಾಜ್ಯದಲ್ಲಿ ಲೋಕಸಭೆ ಚುನಾವಣೆಗೂ (Lok Sabha Election 2024) ಮುನ್ನವೇ ಮತ್ತೊಮ್ಮೆ ಬಿಜೆಪಿ ಹಾಗೂ ಜೆಡಿ ಎಸ್ ನಡುವೇ ಮೈತ್ರಿ ನಡೆಯೋದು ಖಚಿತವಾಗಿದೆ. ಆದರೆ ಜೆಡಿಎಸ್ ಹಾಗೂ ಬಿಜೆಪಿ (JDS- BJP) ನಡುವೆ ಮೈತ್ರಿ ಮಾತುಕತೆಯಲ್ಲಿ ಏನೆಲ್ಲ ಷರತ್ತುಗಳಿವೆ ? ಮೈತ್ರಿಗೆ ರಾಜಕೀಯ ಚಾಣಾಕ್ಯ ಎಂದೇ ಬಿಂಬಿತವಾಗಿರೋ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು (EX PM HD Deve Gowda) ಒಪ್ಪಿದ್ದು ಹೇಗೆ ? ಈ ಎಲ್ಲ ಕುತೂಹಲಕಾರಿ ಅಂಶಗಳ ಎಕ್ಸಕ್ಲೂಸಿವ್ ಮಾಹಿತಿ (Exclusive Details) ಇಲ್ಲಿದೆ ನೋಡಿ .

ರಾಜ್ಯ ರಾಜಕಾರಣದಲ್ಲಿ ದಶಕಗಳ ಅನುಭವ ಹೊಂದಿದ ದೇವೇಗೌಡರು ಮೋದಿ (PM Narendra Modi) ಮೇಲೆ ಅಭಿಮಾನ ಹೊಂದಿದ್ದರು. ಆದರೆ ಅವರ ಪುತ್ರ ಹಾಗೂ ಮಾಜಿಸಿಎಂ ಕುಮಾರಸ್ವಾಮಿ (HD Kumaraswamy) ಅವಕಾಶ ಸಿಕ್ಕಾಗಲೆಲ್ಲ ಮೋದಿ ಹಾಗೂ ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಲೇ ಇದ್ದರು. ಇಂತಿಪ್ಪ ಜೆಡಿಎಸ್ ಇದ್ದಕ್ಕಿದ್ದಂತೆ ಬಿಜೆಪಿಯ ಕಡೆಗೆ ಮೃದಧೋರಣೆ ತಾಳಿದ್ದು ಮಾತ್ರವಲ್ಲ ಮೈತ್ರಿ ಗೂ ಮುಂದಾಗಿದ್ದು ಅಚ್ಚರಿಯ ಸಂಗತಿ.
ಆದರೆ ಈ ಮೈತ್ರಿ ಸುಖಾ ಸುಮ್ಮನೇ ಆಗ್ತಿರೋದಲ್ಲ. ಇದರ ಹಿಂದೆ ದೊಡ್ಡ ಗೌಡರ ಮಾಸ್ಟರ್ ಪ್ಲ್ಯಾನ್, ಪಕ್ಷ ಉಳಿಸುವ ಮಹದಾಸೆ ಹಾಗೂ ಕುಟುಂಬ ರಾಜಕಾರಣದ ಬಯಕೆಯೂ ಇದೇ ಅನ್ನೋದ್ರಲ್ಲಿ ಸಂಶಯವಿಲ್ಲ. ಹಾಗಾದ್ರೇ ಮೈತ್ರಿ ಬಗ್ಗೆ ಖುದ್ದು ದೇವೇಗೌಡರು ಮೋದಿ ಏನೆಲ್ಲ ಮಾತುಕತೆ ನಡೆಸಿದ್ರು ? ಅನ್ನೋದನ್ನು ನೋಡೋದಾದರೇ, ಬೀದರ್‌ನಿಂದ ಚಾಮರಾಜನಗರದವರೆಗೆ ವಸ್ತುಸ್ಥಿತಿ ವಿವರಿಸಿದ ಹೆಚ್‌ಡಿಡಿ, ಎಲ್ಲೆಲ್ಲಿ ಜೆಡಿಎಸ್ ಪ್ರಾಬಲ್ಯ ಇದೆ, ಯಾವ ಯಾವ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ಧಾರೆಯಾವ ಕ್ಷೇತ್ರದಲ್ಲಿ ಯಾರು ಯಾರಿಗೆ ಬೆಂಬಲ ನೀಡಿದರೆ ಗೆಲುವು ಸಾಧ್ಯ.

ಇದನ್ನೂ ಓದಿ : ಬಿಜೆಪಿ ಹೈಕಮಾಂಡ್ ಜೊತೆ ಎಚ್‌ಡಿ ಕುಮಾರಸ್ವಾಮಿ ಚರ್ಚೆ : ಗಣೇಶ ಚತುರ್ಥಿ ಬಳಿಕ ಜೆಡಿಎಸ್ – ಬಿಜೆಪಿ ಮೈತ್ರಿ
ಮಂಡ್ಯ ಮೈಸೂರು ಹಾಸನ ತುಮಕೂರು ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ.ಈ ಕ್ಷೇತ್ರಗಳಲ್ಲಿ ನೀವು ಬೆಂಬಲ ನೀಡಿದರೆ ನಾವು ಗೆಲ್ಲುತ್ತೇವೆ.ಚಿತ್ರದುರ್ಗ, ಬೀದರ್, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ,ಉತ್ತರ ಕೊಡಗು ದಾವಣಗೆರೆ, ಕಲ್ಬುರ್ಗಿ ,ಬಳ್ಳಾರಿ ಕ್ಷೇತ್ರಗಳಲ್ಲಿ ನಾವು ನಿಮಗೆ ಬೆಂಬಲಿಸಿದರೆ ಪಕ್ಕಾ ಗೆಲುವು ಎಂದು ಪ್ರತಿ ಕ್ಷೇತ್ರದ ಬಗ್ಗೆ ಎಚ್ಡಿಡಿ ಮಾಹಿತಿ ನೀಡಿದ್ದಾರಂತೆ. ಇನ್ನು ದೇವೆಗೌಡರ ಮಾತು ಆಲಿಸಿದ ಮೋದಿಯಿಂದ ಮೈತ್ರಿಗೆ ಪಾಸಿಟೀವ್ ರೆಸ್ಪಾನ್ಸ್ ಕೂಡ ಬಂದಿದ್ದು, ಆ ಬಳಿಕವೇ ದೇವೇಗೌಡರು ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರಂತೆ.
ಇನ್ನು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಗಾಗಿ ಸಾಕಷ್ಟು ಸರ್ಕಸ್ ಮಾಡಿರೋ ದೇವೆಗೌಡರು ಸೀಟು ಹಂಚಿಕೆ ವಿಚಾರವಾಗಿ ಹಗ್ಗ ಜಗ್ಗಾಟವಾಗಿ ಮೈತ್ರಿ ಮುರಿಯೋದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದು, ಇದಕ್ಕಾಗಿ ಪಕ್ಷದ ನಾಯಕ ಹಾಗೂ ಪುತ್ರ ಎಚ್ಡಿಕೆ ಗೆ ಹಲವು ಸಲಹೆ ನೀಡಿದ್ದಾರಂತೆ. ಎದುರಾಳಿ ಕಾಂಗ್ರೆಸ್ ಸೋಲಿಸುವುದೇ ನಮ್ಮ ಗುರಿ.ನೀವು ಹಳೇ ಮೈಸೂರು ಭಾಗದ ಕ್ಷೇತ್ರಗಳನ್ನಾದರೂ ನಮಗೆ ನೀಡಿ.

ಇದನ್ನೂ ಓದಿ : ಹೈಕಮಾಂಡ್ ಗೆ ಸಿದ್ದರಾಮಯ್ಯ ಬಿಟ್ರಾ ಬ್ರಹ್ಮಾಸ್ತ್ರ: ಹರಿಪ್ರಸಾದ್ ಗೆ ನೋಟಿಸ್ ಜಾರಿಯಾಗಿದ್ಹೇಗೆ ?
ಸೀಟು ಹಂಚಿಕೆ ವಿಚಾರವಾಗಿ ಮೈತ್ರಿ ಮುರಿದು ಬೀಳುವುದು ಬೇಡ.ನಮ್ಮ ನಡುವಿನ ಹಗ್ಗಜಗ್ಗಾಟ ಕಾಂಗ್ರೆಸ್‌ಗೆ ಅಸ್ರ್ರವಾಗುವುದು ಬೇಡ ಎಂದು ದಳಪತಿಗಳ ನಾಯಕ ದೇವೇಗೌಡರು ಮನವರಿಕೆ ಮಾಡಿಸಿದ್ದಾರಂತೆ. ಈ ಹಂತದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ಜೊತೆ ಹಠಕ್ಕೆ ಬಿದ್ದರೆ ನಮಗೆ ನಷ್ಠ ಎಂಬುದು ದೇವೆಗೌಡರ ಚಿಂತನೆಯಾಗಿದ್ದು, ಬಹುತೇಕ ಬಿಜೆಪಿ ನಾಯಕರೂ ಇದೇ ರೀತಿ ಲೆಕ್ಕಾಚಾರದಲ್ಲಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ನಮ್ಮ ಪಕ್ಷ ಗೆಲುವು ಅಸಾಧ್ಯ ಸೀಟು ಹಂಚಿಕೆ ವಿಚಾರದಲ್ಲಿ ಹಠಕ್ಕೆ ಬೀಳುವುದು ಬೇಡ. ಶತ್ರುವಿನ ಶತ್ರು ಮಿತ್ರ ಎಂಬ ಲೆಕ್ಕಾಚಾರದಲ್ಲಿ ಮುಳ್ಳನ್ನ ಮುಳ್ಳಿನಿಂದಲೇ ತೆಗೆಯುವ ತಂತ್ರ ಅನುಸರಿಸಲು ಮುಂದಾದ ಬಿಜೆಪಿ. ಒಟ್ಟಿನಲ್ಲಿ ಐದು ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಕಾಂಗ್ರೆಸ್ ಗೆ ಬುದ್ಧಿ ಕಲಿಸಲು ಎರಡು ಪಕ್ಷಗಳು ಒಂದಾಗ್ತಿದ್ದು ಮುಂದೆ ಏನಾಗಲಿದೆ ಅನ್ನುವುದನ್ನು ಕಾದು ನೋಡಬೇಕಾಗಿದೆ.
JDS- BJP alliance HD Deve Gowda knows the conditions put forward by PM Narendra Modi