ಬಿಜೆಪಿ ಹೈಕಮಾಂಡ್ ಜೊತೆ ಎಚ್‌ಡಿ ಕುಮಾರಸ್ವಾಮಿ ಚರ್ಚೆ : ಗಣೇಶ ಚತುರ್ಥಿ ಬಳಿಕ ಜೆಡಿಎಸ್‌ – ಬಿಜೆಪಿ ಮೈತ್ರಿ

ದೇಶದಲ್ಲಿ ಲೋಕಸಭಾ ಚುನಾವಣೆಗೆ‌ (Loka Sabha Election)  ಸಿದ್ಧತೆ ಆರಂಭವಾಗಿರೋ ಬೆನ್ನಲ್ಲೇ ಕರ್ನಾಟಕದಲ್ಲಿ ಮೈತ್ರಿ ಮಾತುಕತೆ ಸದ್ದು ಮಾಡಲಾರಂಭಿಸಿದೆ. ಕೋಮುವಾದಿ ಪಕ್ಷ ಎಂದೇ ಬಿಂಬಿಸಲ್ಪಟ್ಟಿದ್ದ ಬಿಜೆಪಿಯೊಂದಿಗೆ ಕರ್ನಾಟಕದ ಪ್ರಭಾವಿ ಪ್ರಾದೇಶಿಕ ಪಕ್ಷ ಜೆಡಿಎಸ್( JDS) ಮೈತ್ರಿಯಾಗುವ ಲಕ್ಷಣಗಳು ದಟ್ಟವಾಗಿದೆ.

ಬೆಂಗಳೂರು : ದೇಶದಲ್ಲಿ ಲೋಕಸಭಾ ಚುನಾವಣೆಗೆ‌ (Loka Sabha Election)  ಸಿದ್ಧತೆ ಆರಂಭವಾಗಿರೋ ಬೆನ್ನಲ್ಲೇ ಕರ್ನಾಟಕದಲ್ಲಿ ಮೈತ್ರಿ ಮಾತುಕತೆ ಸದ್ದು ಮಾಡಲಾರಂಭಿಸಿದೆ. ಕೋಮುವಾದಿ ಪಕ್ಷ ಎಂದೇ ಬಿಂಬಿಸಲ್ಪಟ್ಟಿದ್ದ ಬಿಜೆಪಿಯೊಂದಿಗೆ ಕರ್ನಾಟಕದ ಪ್ರಭಾವಿ ಪ್ರಾದೇಶಿಕ ಪಕ್ಷ ಜೆಡಿಎಸ್( JDS) ಮೈತ್ರಿಯಾಗುವ ಲಕ್ಷಣಗಳು ದಟ್ಟವಾಗಿದೆ.

ಅಧಿಕಾರಕ್ಕಾಗಿ, ಕುಟುಂಬದ ಹಿತಕ್ಕಾಗಿ ಮೈತ್ರಿ ಎಂದು ಟೀಕಿಸುವವರಿಗೆ ಪ್ರತ್ಯುತ್ತರ ನೀಡಿರೋ ಮಾಜಿಸಿಎಂ ಕುಮಾರಸ್ವಾಮಿ, ಇದು ಕರ್ನಾಟಕದಲ್ಲಿನ ಕಾಂಗ್ರೆಸ್ ದುರಾಢಳಿತಕ್ಕೆ ಉತ್ತರ ನೀಡಲು ನಡಿತಿರೋ ಮೈತ್ರಿ ಎಂದಿದ್ದಲ್ಲದೇ ಗಣೇಶ ಚತುರ್ಥಿ ಬಳಿಕ ಸ್ಪಷ್ಟ ಚಿತ್ರಣ ನೀಡೋದಾಗಿ ಘೋಷಿಸುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.

HD Kumaraswamy meet wit BJP high command JDS-BJP alliance after Ganesh Chaturthi
Image Credit To Original Source

ಹೌದು ಕರ್ನಾಟಕದಲ್ಲೀಗ ಲೋಕಸಭಾ ಚುನಾವಣೆಯ ಜೊತೆಗೆ ಜೆಡಿಎಸ್ , ಬಿಜೆಪಿ ಮೈತ್ರಿಯದ್ದೇ ಸುದ್ಧಿ. ಹೀಗಾಗಿ ರಾಜ್ಯದಲ್ಲಿ ರಾಜಕೀಯ ಪಕ್ಷಗಳು, ನಾಯಕರು, ಮುಖಂಡರು ಜನತೆ ಮೈತ್ರಿ ಘೋಷಣೆ ಹಾಗೂ ವಿವರಗಳನ್ನು ತಿಳಿಯೋದಿಕ್ಕೆ ಉತ್ಸುಕರಾಗಿ ಇದ್ದಾರೆ.

ಆದರೆ ಈ ಬಗ್ಗೆ ಗಣೇಶ ಚತುರ್ಥಿಯ ಬಳಿಕ ಮಾಹಿತಿ ನೀಡೋದಾಗಿ ಮಾಜಿಸಿಎಂ ಹಾಗೂ ಜೆಡಿಎಸ್ ನ ನಾಯಕ ಕುಮಾರಸ್ವಾಮಿ ಘೋಷಿಸಿದ್ದಾರೆ. ಮೈತ್ರಿ ವಿಚಾರ ಪ್ರಸ್ತಾಪಕ್ಕೆ ಬಂದಾಗಲೇ ಹಿಂದಿನ ಭಾರಿ ತಂದೆಯ ವಿರೋಧದ ನಡುವೆಯೂ ಮೈತ್ರಿ ಮಾಡಿಕೊಂಡಿದ್ದೆ. ಆದರೆ ಈ ಭಾರಿ ತಂದೆಯವರ ಅನುಮತಿ ಯೊಂದಿಗೆ ಮೈತ್ರಿಗೆ ಸಿದ್ಧವಾಗಿದ್ದೇನೆ ಎಂದಿದ್ದರು.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯಲ್ಲಿ ಭಾರೀ ಬದಲಾವಣೆ : ಈ ಕುಟುಂಬಗಳಿಗಿಲ್ಲ ಹೆಚ್ಚುವರಿ ಅಕ್ಕಿಯ ಹಣ

ಈ ಮಾತು ನಿಜವಾಗಿದೆ. ಈ ಭಾರಿ ಮಾಜಿ ಪ್ರಧಾನಿ ದೇವೇಗೌಡರು, ಮೈತ್ರಿ ಮಾತುಕತೆಯ ಸಂಪೂರ್ಣ ಜವಾಬ್ದಾರಿ ಹೆಚ್ ಡಿ ಕೆ ಹೆಗಲಿಗೆ ಹಾಕಿದ್ದಾರಂತೆ. ಹೀಗಾಗಿ ಸೀಟು ಹಂಚಿಕೆ, ಕಾಂಗ್ರೆಸ್ ವಿರುದ್ಧ ಜಂಟಿ ಹೋರಾಟದ ರೂಪುರೇಷೆ ಬಗ್ಗೆ ಕುಮಾರಸ್ವಾಮಿಯಿಂದಲೇ ಮಾತುಕತೆ ನಡೆಸಲಿದ್ದಾರಂತೆ.

ಗಣೇಶ ಹಬ್ಬದ ಬಳಿಕ ದೆಹಲಿಗೆ ತೆರಳಲಿರೋ ಹೆಚ್ ಡಿ ಕೆ, ಬಿಜೆಪಿ ವರಿಷ್ಟರ ಜತೆ ಗಣೇಶನ ಹಬ್ಬದ ಬಳಿಕ ಮೈತ್ರಿ ಮಾತುಕತೆ ನಡೆಸಲಿದ್ದಾರೆ. ಮೈತ್ರಿ ಮಾತುಕತೆಯಲ್ಲಿ ಲೋಕಾ ಚುನಾವಣೆಗೂ ಮೊದಲೇ ಸ್ಥಳೀಯ ಸಂಸ್ಥೆ ಚುನಾವಣೆ , ಬಿಬಿಎಂಪಿ ಚುನಾವಣೆ ಎದುರಾದರೆ ಎರಡೂ ಪಕ್ಷದ ತಂತ್ರಗಾರಿಕೆ ಹೇಗಿರಬೇಕೆಂಬ ಬಗ್ಗೆಯೂ ಚರ್ಚೆ ನಡೆಯಲಿದೆ.

HD Kumaraswamy meet wit BJP high command JDS-BJP alliance after Ganesh Chaturthi
Image credit To Original Source

ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಹೇಗೆ ಎದುರಿಸಬೇಕು? ಒಟ್ಟಾಗಿ ಎದುರಿಸಬೇಕಾ? ಅಥವಾ ನಮ್ಮಷ್ಟಕ್ಕೆ ನಾವು ಏಕಾಂಗಿಯಾಗಿ ಎದುರಿಸಬೇಕಾ ಎಂಬ ಸಂಗತಿಯೂ ಚರ್ಚೆಗೆ ಬರಲಿದೆ. ಸ್ಥಳೀಯ ಸಂಸ್ಥೆಗಳಲ್ಲೂ ಹೊಂದಾಣಿಕೆ ಮಾಡಿಕೊಂಡಲ್ಲಿ ಕಾರ್ಯಕರ್ತರಿಗೆ ಹಾಗೂ ಎರಡನೇ ಹಂತದ ನಾಯಕರು ಮುನಿಸಿಕೊಳ್ಳುತ್ತಾರೆ.

ಇದನ್ನೂ ಓದಿ : ಹೈಕಮಾಂಡ್ ಗೆ ಸಿದ್ದರಾಮಯ್ಯ ಬಿಟ್ರಾ ಬ್ರಹ್ಮಾಸ್ತ್ರ: ಹರಿಪ್ರಸಾದ್ ಗೆ ನೋಟಿಸ್ ಜಾರಿಯಾಗಿದ್ಹೇಗೆ ?

ಹೀಗಾಗಿ ಲೋಕಲ್ ಚುನಾವಣೆಯನ್ನು ಈ ಮೈತ್ರಿಯಿಂದ ಹೊರಗಿಟ್ಟು ಕೇವಲ ಲೋಕಸಭಾ ಚುನಾವಣೆಗೆ ಮೈತ್ರಿ ಉಳಿಸಿಕೊಳ್ಳುವ ಬಗ್ಗೆ ಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 6 ಸ್ಥಳಗಳನ್ನು ಕೇಳಲಿದೆ ಎನ್ನಲಾಗಿದ್ದು, ಈ ಕ್ಷೇತ್ರಗಳ ಆಯ್ಕೆ ಸೇರಿದಂತೆ ಒಟ್ಟಾರೆ ಮೈತ್ರಿಯ ಸ್ವರೂಪ, ರೂಪುರೇಷೆ ನಿಯಮಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಆದರೆ ಈ ಬಗ್ಗೆ ಬಿಜೆಪಿ ನಾಯಕರು ಮಾತ್ರ ಬಾಯಿ ಬಿಡುತ್ತಿಲ್ಲ. ಈಗಾಗಲೇ ಹೈಕಮಾಂಡ್ ರಾಜ್ಯ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಅಧಿಕೃತ ಘೋಷಣೆಗೂ ಮುನ್ನ ಮೈತ್ರಿ ಬಗ್ಗೆ ಯಾರೂ ಕಮೆಂಟ್ ಮಾರಬಾರದೆಂದು ಸೂಚಿಸಿದೆ. ಒಟ್ಟಿನಲ್ಲಿ ಜೆಡಿಎಸ್, ಬಿಜೆಪಿಮೈತ್ರಿ ಕುತೂಹಲಕ್ಕೆ ಗಣೇಶ ಹಬ್ಬದ ಬಳಿಕ ತೆರೆ ಬೀಳೋ ನೀರಿಕ್ಷೆ ಇದೆ.

HD Kumaraswamy meet wit BJP high command JDS-BJP alliance after Ganesh Chaturthi

Comments are closed.