ಭಾನುವಾರ, ಏಪ್ರಿಲ್ 27, 2025
Homekarnatakaಜೆಡಿಎಸ್- ಬಿಜೆಪಿ ಮೈತ್ರಿಗೆ ಇಂದೇ ಕ್ಲೈಮ್ಯಾಕ್ಸ್‌ : ಯಾವ ಯಾವ ಕ್ಷೇತ್ರ ಯಾರಿಗೆ ಗೊತ್ತಾ ? ಇಲ್ಲಿದೆ...

ಜೆಡಿಎಸ್- ಬಿಜೆಪಿ ಮೈತ್ರಿಗೆ ಇಂದೇ ಕ್ಲೈಮ್ಯಾಕ್ಸ್‌ : ಯಾವ ಯಾವ ಕ್ಷೇತ್ರ ಯಾರಿಗೆ ಗೊತ್ತಾ ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

- Advertisement -

ನವದೆಹಲಿ : ದೆಹಲಿ ತಲುಪಿರೋ ಬಿಜೆಪಿ ಜೆಡಿಎಸ್ ಮೈತ್ರಿ ( BJP – JDS ) ಮಾತುಕತೆಯ ಸರ್ಕಸ್ ಗೆ ಶುಕ್ರವಾರ ರಾತ್ರಿ ವೇಳೆಗೆ ಒಂದು ಸ್ಪಷ್ಟ ಚಿತ್ರಣ ಸಿಗೋ ಸಾಧ್ಯತೆಗಳಿದ್ದು ಮೂರು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡುವ ಬಿಜೆಪಿ ಆಫರ್ ಗೆ ದಳಪತಿಗಳು ಒಪ್ಪಿದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಬಹುತೇಕ ಅಂತಿಮಗೊಳ್ಳೋ ಸಾಧ್ಯತೆ ಇದೆ.

JDS-BJP alliance today Climax Who knows which constituencies Here's the inside story
Image Credit To Original Source

 

ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಅನ್ನೋ ಮಾತು ಮತ್ತೊಮ್ಮೆ ನಿಜವಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಬಿಜೆಪಿಯನ್ನು ಟೀಕಿಸುತ್ತಿದ್ದ ಜೆಡಿಎಸ್ ಈಗ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲೋ ಕನಸಿನೊಂದಿಗೆ ಕಮಲ ಪಾಳಯದೊಂದಿಗೆ ಸಂಧಾನ ಸೂತ್ರಕ್ಕೆ ತಲೆಬಾಗಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿ ಬರುತ್ತಿದ್ದ ಮೈತ್ರಿ ಮಾತುಕತೆಗೆ ಅಂತಿಮ ರೂಪ ಸಿಗಲು ಕ್ಷಣ ಗಣನೆ ನಡೆದಿದ್ದು, ಮಾಜಿ ಪ್ರಧಾನಿ ದೇವೇಗೌಡರು (HD Deve Gowda) ಸೇರಿದಂತೆ ದಳಪತಿಗಳ ದಂಡು ದೆಹಲಿಯಲ್ಲಿ (Delhi) ಬೀಡು ಬಿಟ್ಟಿದೆ.

ಸ್ವತಃ ಮಾಜಿಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಜೊತೆ ದೆಹಲಿಗೆ ತೆರಳಿದ್ದಾರೆ. ದೆಹಲಿಯ ಎಚ್ಡಿಡಿ ನಿವಾಸದಲ್ಲಿ (HD Devagowda Residency)  ಹೈವೋಲ್ಟೇಜ್ ಮೀಟಿಂಗ್ (High Voltage Meeting) ಆರಂಭಗೊಂಡಿದೆ . ಈ ಮಧ್ಯೆ ಇದುವರೆಗೂ ಅಧಿಕೃತವಾಗಿ ಬಿಜೆಪಿ ನಾಯಕರ (Bjp Leaders) ಜೊತೆ ಜೆಡಿಎಸ್ ನಾಯಕರು (JDS Leaders) ಮಾತುಕತೆ ನಡೆಸದಿದ್ದರೂ ಮೈತ್ರಿ ಮಾತುಕತೆ ದೂತರ ಮೂಲಕ ಆರಂಭವಾಗಿರೋದಂತು ನಿಜ.

JDS-BJP alliance today Climax Who knows which constituencies Here's the inside story
Image Credit To Original Source

ಗುರುವಾರ ಸಂಜೆ ಬಿಜೆಪಿ ಪ್ರತಿನಿಧಿಯಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Goa CM Pramod Savanth) ದೇವೇಗೌಡರು ಹಾಗೂ ಕುಮಾರಸ್ವಾಮಿ (HD Kumaraswamy) ಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಪ್ರಮೋದ್ ಸಾವಂತ್ ಬಿಜೆಪಿ ಜೆಡಿಎಸ್ ಗೆ ನೀಡಿರೋ ಆಫರ್ ಬಗ್ಗೆ ಮಾಹಿತಿ ನೀಡಿದ್ದಾರಂತೆ. ಬಿಜೆಪಿ ಮೈತ್ರಿಗೆ ಸಿದ್ಧವಾಗಿದೆ. ಈ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಅನ್ವಯವಾಗಲಿದೆ.

ಇದನ್ನೂ ಓದಿ :  ಸಿಎಂ ಆಯ್ತು, ಕಾಂಗ್ರೆಸ್ ನಲ್ಲಿ ಇನ್ಮುಂದೇ ಡಿಸಿಎಂ ಫೈಟ್‌ : ಸಿದ್ದರಾಮಯ್ಯ Vs ಡಿಕೆ ಶಿವಕುಮಾರ್‌

ಬಿಜೆಪಿ ಜೆಡಿಎಸ್ ಗೆ ಮಂಡ್ಯ (Mandya Lok sabha constituency) ತುಮಕೂರು (Tumkur Lok sabha constituency) ಹಾಗೂ ಹಾಸನ ಲೋಕಸಭಾ ಸ್ಥಾನಗಳನ್ನು (Hassan Lok sabha constituency) ಬಿಟ್ಟುಕೊಡಲು ಸಿದ್ಧವಿದೆ. ಈ ಸ್ಥಾನಗಳನ್ನು ಬಿಟ್ಟುಕೊಡುವ ಬಿಜೆಪಿ ಆಫರ್ ಗೆ ಒಪ್ಪಿದರೇ ಜೆಡಿಎಸ್ ಜೊತೆ ಬಿಜೆಪಿ ಕೈಜೋಡಿಸಲು ಸಿದ್ಧವಿದೆ ಎಂದು ಪ್ರಮೋದ್ ಸಾವಂತ್ ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ತಿಳಿಸಿದ್ದಾರಂತೆ. ಒಂದೊಮ್ಮೆ ಜೆಡಿಎಸ್ ಈ ಮಾತಿಗೆ ಒಪ್ಪಿದಲ್ಲಿ ಇಂದು ಅಮಿತ್ ಶಾ ( Amit Shah), ಜೆ.ಪಿ.ನಡ್ಡಾ (JP Nadda) ಹಾಗೂ ಮೋದಿ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಹೇಳಿದ್ದಾರೆ.

JDS-BJP alliance today Climax Who knows which constituencies Here's the inside story
Image Credit To Original Source

ಇದನ್ನೂ ಓದಿ : ಸುನಿಲ್‌ ಕನುಗೋಳ್ ಸಮೀಕ್ಷೆಯಲ್ಲಿ ಪಾಸಾದ್ರೆ ಟಿಕೇಟ್: ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೈಕಮಾಂಡ್ ಶಾಕ್

ಹೀಗಾಗಿ ಜೆಡಿಎಸ್ ಈ ಅಂತಿಮ‌ ಹಂತದ ಲೆಕ್ಕಾಚಾರದಲ್ಲಿ ತೊಡಗಿದೆ. ಸಂಜೆ ವೇಳೆಗೆ ಜೆಡಿಎಸ್ ಅಂತಿಮ‌ ನಿರ್ಧಾರದೊಂದಿಗೆ ಬಿಜೆಪಿ ನಾಯಕರನ್ನು ಭೇಟಿ ಮಾಡಲಿದ್ದು, ಮೈತ್ರಿ ಬಗ್ಗೆ ರಾತ್ರಿ ವೇಳೆಗೆ ಸ್ಪಷ್ಟ ಮಾಹಿತಿ ಸಿಗೋ ಸಾಧ್ಯತೆ ಇದೆ. ರಾಜ್ಯದಲ್ಲಿನ ಪ್ರಸ್ತುತ ಚುನಾವಣೆಯ ಅಲೆ ಹಾಗೂ ಮತಗಳ ಲೆಕ್ಕಾಚಾರವನ್ನು ಗಮನಿಸಿದ್ರೇ ಜೆಡಿಎಸ್ ಗೆ ಕ್ಷೇತ್ರಗಳನ್ನು ಗೆಲ್ಲುವುದು ಕಷ್ಟ ಅನ್ನೋ ಸ್ಥಿತಿ ಇದೆ. ಹೀಗಾಗಿ ಐದು ಕ್ಷೇತ್ರಗಳನ್ನು ಜೆಡಿಎಸ್ ಬಿಜೆಪಿಯೊಂದಿಗೆ ಒಪ್ಪಂದದಿಂದ ಪಡೆದುಕೊಂಡರೂ ಚುನಾವಣೆ ಗೆಲ್ಲಿಸೋದು ಕಷ್ಟವಿದೆ.

ಹೀಗಾಗಿ ಜೆಡಿಎಸ್ ಮೂಲಗಳ ಪ್ರಕಾರ ಬಿಜೆಪಿ ನೀಡಿರೋ ಮೂರು ಸ್ಥಾನಗಳ ಆಫರ್ ಗೆ ದೊಡ್ಡಗೌಡರು ಒಪ್ಪಿಕೊಳ್ಳಲಿದ್ದಾರಂತೆ. ಇದರೊಂದಿಗೆ ಮೈತ್ರಿ ಬಹುತೇಕ ಅಂತಿಮವಾಗಲಿದೆ. ಈ ಮೊದಲು ತುಮಕೂರು, ಹಾಸನ, ಮಂಡ್ಯ, ರಾಮನಗರ ಜೊತೆಗೆ ಮೈಸೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಜೆಡಿಎಸ್ ಕೇಳಲಿದೆ ಎನ್ನಲಾಗ್ತಿತ್ತು.

ಇದನ್ನೂ ಓದಿ : ಲಿಂಗಾಯಿತರ ಮುನಿಸು ತಣಿಸಲು ಅಖಾಡಕ್ಕಿಳಿದ ಬಿ.ಎಸ್.ಯಡಿಯೂರಪ್ಪ : ಕೊನೆಗೂ ಎಚ್ಚೆತ್ತ ಬಿಜೆಪಿ

ಆದರೆ ಕಾಂಗ್ರೆಸ್ ನ ಫ್ರೀ ಯೋಜನೆಗಳಿಂದ (Congress Guarantee Scheme) ಜನರ ಮನಸ್ಥಿತಿ ಬದಲಾಗಿದ್ದು ಜೆಡಿಎಸ್ ಗೆಲುವಿನ ಹಾದಿ ಅತ್ಯಂತ ಕಠಿಣವಿದೆ. ಹೀಗಾಗಿ ಜೆಡಿಎಸ್ ಲೆಕ್ಕಾಚಾರ ಹಾಕಿ ತನ್ನ ಬೇಡಿಕೆ ಬದಲಿಸಿದ್ದು ಕೇವಲ ಮೂರೇ ಕ್ಷೇತ್ರಗಳಿಗೆ ಒಪ್ಪಿಕೊಂಡು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಶುಕ್ರವಾರ ತಡರಾತ್ರಿ ಮೈತ್ರಿ ಸರ್ಕಸ್ ನ ರಿಸಲ್ಟ್ ನೀರಿಕ್ಷಿಸಬಹುದಾಗಿದೆ.

 

JDS-BJP alliance today Climax, Who knows which constituencies ? Here’s the inside story

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular