Mayank Agarwal : ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಿದ್ದ ನಾಯಕ ಮಯಾಂಕ್ ಅಗರ್ವಾಲ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್ (PBKS) ತಂಡದಿಂದ ನಾಯಕ ಮಯಾಂಕ್‌ ಅಗರ್ವಾಲ್‌ (Mayank Agarwal) ಹೊರಬಿದ್ದಿದ್ದಾರೆ. IPL 2022 ರ 28 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ದದ ಪಂದ್ಯದಿಂದ ಮಯಾಂಕ್‌ ಔಟ್‌ ಆಗಿದ್ದು, ಶಿಖರ್‌ ಧವನ್‌ ತಂಡವನ್ನು ಮುನ್ನೆಡೆಸಿದ್ದಾರೆ.

ಮಯಾಂಕ್ ಅಗರ್ವಾಲ್ ಅವರ ಕಾಲಿಗೆ ಗಾಯವಾಗಿದೆ. ಮುಂದಿನ ಪಂದ್ಯಗಳ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಿಂದ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದೆ. ನಾವು ವ್ಯಕ್ತಿಗಳನ್ನು ಅವಲಂಭಿಸದೆ ಸಂಘಟಿತ ಪ್ರದರ್ಶನವನ್ನು ನೀಡಬೇಕಾಗಿದೆ. ಬೌಲಿಂಗ್‌ ಇನ್ನೂ ಉತ್ತಮವಾಗಬೇಕಾಗಿದೆ ಎಂದು ಆಟಗಾರ ಶಿಖರ್‌ ಧವನ್‌ ಹೇಳಿದ್ದಾರೆ. ಐಪಿಎಲ್ 2022 ರಲ್ಲಿ ಪಂಜಾಬ್‌ ಹೊಸ ತಂಡವನ್ನು ಕಟ್ಟಿಕೊಂಡಿದೆ. ಟಾಸ್‌ ಮಹತ್ವವನ್ನು ಪಡೆದುಕೊಳ್ಳಲಿದೆ. ಜಿಗುಟಾದ ಪಿಚ್‌ನಿಂದಾಗಿ ಚೆಂಡು ಹೆಚ್ಚು ತಿರುಗಲಿದೆ. ಹೀಗಾಗಿ ಉತ್ತಮ ಮೊತ್ತವನ್ನು ಕಲೆಹಾಕಬೇಕಾಗಿದೆ ಎಂದಿದ್ದಾರೆ.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI) IPL 2022: ಶಿಖರ್ ಧವನ್(c), ಜಾನಿ ಬೈರ್‌ಸ್ಟೋವ್, ಪ್ರಭಾಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(w), ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಹಾರ್, ವೈಭವ್ ಅರೋರಾ, ಅರ್ಶ್ದೀಪ್ ಸಿಂಗ್.

ಪಂಜಾಬ್ ಕಿಂಗ್ಸ್ IPL 2022 ಸಂಪೂರ್ಣ ತಂಡ: 1. ಮಯಾಂಕ್ ಅಗರ್ವಾಲ್, 2. ಅರ್ಶದೀಪ್ ಸಿಂಗ್, 3. ಶಿಖರ್ ಧವನ್, 4. ಕಗಿಸೊ ರಬಾಡ, 5. ಜಾನಿ ಬೈರ್‌ಸ್ಟೋ, 6. ರಾಹುಲ್ ಚಾಹರ್, 7. ಶಾರುಖ್ ಖಾನ್, 8. ಹರ್‌ಪ್ರೀತ್ ಬ್ರಾರ್, 9. ಪ್ರಭಾಸಿಮ್ರಾನ್ ಸಿಂಗ್, 10. ಜಿತೇಶ್ ಶರ್ಮಾ, 11. ಇಶಾನ್ ಪೊರೆಲ್, 12. ಲಿಯಾಮ್ ಲಿವಿಂಗ್‌ಸ್ಟೋನ್, 13. ಒಡಿಯನ್ ಸ್ಮಿತ್, 14. ಸಂದೀಪ್ ಶರ್ಮಾ, 15. ರಾಜ್ ಅಂಗದ್ ಬಾವಾ, 16. ರಿಷಿ ಧವನ್, 17. ಪ್ರೇರಕ್ ಮಂಕಡ್, 18. ವೈಭವ್ ಅರೋರಾ, 19. ರಿಟಿಕ್ ಚಟರ್ಜಿ 2. ಬ್ರಿಲ್ಟೆ, , 21. ಅನ್ಶ್ ಪಟೇಲ್, 22. ನಾಥನ್ ಎಲ್ಲಿಸ್, 23. ಅಥರ್ವ ಟೈಡೆ, 24. ಭಾನುಕಾ ರಾಜಪಕ್ಸೆ, 25. ಬೆನ್ನಿ ಹೋವೆಲ್.‌

ಇದನ್ನೂ ಓದಿ : 153.3 ಕಿಮೀ ವೇಗದಲ್ಲಿ ಬೌಲಿಂಗ್‌ : ಉಮ್ರಾನ್ ಮಲಿಕ್ IPL 2022 ರ ಅತ್ಯಂತ ವೇಗದ ಬೌಲರ್‌

ಇದನ್ನೂ ಓದಿ :  ನಿಮ್ಮ ಕನಸಿನ ತಂಡದಲ್ಲಿ ಈ 3 ಆಟಗಾರರನ್ನು ಇರಿಸಬೇಡಿ

IPL 2022: Punjab Kings captain Mayank Agarwal out from team

Comments are closed.